fbpx
ಸಮಾಚಾರ

ಫೇಸ್ಬುಕ್ ಲವರ್ ಮದುವೆಯಾಗಲು ಗಂಡನಿಗೆ ಡೈವೋರ್ಸ್ ಕೊಟ್ಟು, ಪೋಲೆಂಡ್ ನಿಂದ ಭಾರತಕ್ಕೆ ಬಂದ ಮಹಿಳೆ.

ಪ್ರೀತಿಗೆ ಕಣ್ಣಿಲ್ಲ ಎಂದು ಅನೇಕ ಬಾರಿ ನಾವು ಕೇಳಿಯೇ ಇರುತ್ತವೆ ಇದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ನಡೆದಿದೆ. ಹೌದು ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಪೋಲಂಡ್ ಯುವತಿ ಹಾಗು ಭಾರತದ ಯುವಕ ಇಬ್ಬರು ಪರಿಚಯವಾಗಿದ್ದರು ಇಬ್ಬರ ಪರಿಚಯ ಪ್ರೀತಿಗೆ ತಿರುಗಿತು. ನಂತರ ಯುವತಿ ತನ್ನ ಮೊದಲ ಗಂಡನಿಗೆ ಡೈವೋರ್ಸ್ ನೀಡಿ ಈಗ ಭಾರತಕ್ಕೆ ಆಗಮಿಸಿ ಪ್ರಿಯಕರನ ಜೊತೆ ಮದುವೆ ಆಗಿದ್ದರೆ ಎಂದು ತಿಳಿದು ಬಂದಿದೆ.

 

 

ಸುಮಾರು 20 ವರ್ಷ ಹಿಂದೆ ಮದುವೆಯಾಗಿದ್ದ ಪೋಲೆಂಡ್ ಮಹಿಳೆ ಇವೋನಾ ಅವರಿಗೆ ಈಗ 18 ವರ್ಷ ವಯಸ್ಸಿನ ಮಗನಿದ್ದಾನೆ ಈಗ ಭಾರತದ ಪಂಜಾಬ್ ನ ಜಲಂಧರ್ ನಿವಾಸಿ ಶ್ಯಾಮ್ ಅವರನ್ನು ಮದುವೆ ಮಾಡಿಕೊಂಡಿದ್ದಾರೆ. ಶ್ಯಾಮ್ ಅವರ ಪತ್ನಿ 2 ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ. ಶ್ಯಾಮ್ ಗೆ 10 ವರ್ಷ ವಯಸ್ಸಿನ ಮಗಳಿದ್ದಾಳೆ ಎಂದು ತಿಳಿದು ಬಂದಿದೆ.

 

 

ಫೆ.23ರಂದು ಇವರಿಬ್ಬರ ವಿವಾಹ ನಡೆದಿದೆ. ಸದ್ಯದಲ್ಲೆ ಮಗಳೊಂದಿಗೆ ಶ್ಯಾಮ್ ಪೋಲಂಡ್ ದೇಶಕ್ಕೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top