fbpx
ಸಮಾಚಾರ

ಜಾಮೀನು ಅರ್ಜಿ ವಿಚಾರಣೆ: ಬ್ಯಾಡ್ ಬಾಯ್ ಸಲ್ಲುಗೆ ಮತ್ತೆ ಜೈಲೇ ಗತಿ.

ಇಪ್ಪತ್ತುವರ್ಷಗಳ ಹಿಂದಿನ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಾಲಿವುಡ್ ನಟ ಸಲ್ಮಾನ್​ ಖಾನ್​ಗೆ ರಾಜಸ್ತಾನದ ಜೋಧಪುರದ ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿ ನಾಳೆಗೆ ತೀರ್ಪನ್ನು ಕಾಯ್ದಿರಿಸಲಾಗಿದ್ದು ಹಾಗಾಗಿ ಇಂದೂ ಕೂಡ ಸಲ್ಮಾನ್ ಜೈಲಿನಲ್ಲೇ ಕಾಲಕಳೆಯಬೇಕಾಗಿದೆ

 

 

ಜೋಧಪುರದ ಸೆಶನ್ಸ್ ಕೋರ್ಟಿನಲ್ಲಿ ಜಾಮೀನಿಗಾಗಿ ಸಲ್ಲು ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಇಂದು ನಡೆದಿದ್ದು ನಾಳೆಗೆ ವಿಚಾರಣೆಯನ್ನು ಮುಂದೂಡಿದೆ. ಅರ್ಜಿಯನ್ನು ಮುಂದೂಡಿರುವುದಕ್ಕೆ ಸಲ್ಮಾನ್ ಪರ ವಕೀಲ ಮಹೇಶ್ ಬೋರಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಚಾರಣೆ ಮುಂದೂಡಿರುವುದರಿಂದ ನಾಳೆ ಸಾಯಂಕಾಲದವರೆಗೂ ಜೈಲಿನಲ್ಲೇ ಸಲ್ಮಾನ್ ಖಾನ್ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ನಾಳೆ ಜಾಮೀನು ದೊರೆತರೆ ಸೋಮವಾರ ಜೈಲಿನಿಂದ ಹೊರ ಬರುವ ಸಾಧ್ಯತೆ ಇದೆ.

ಲೈಸೆನ್ಸ್ ಇಲ್ಲದ ಗನ್’ನಲ್ಲಿ ಕೃಷ್ಣಮೃಗಗಳನ್ನ ಭೇಟೆಯಾಡಿದ ತಪ್ಪಿಗೆ ಸಲ್ಮಾನ್ ಖಾನ್ ಅವರಿಗೆ ರಾಜಸ್ಥಾನದ ಜೋಧಪುರ ನ್ಯಾಯಾಲಯ ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 51ರ ಅಡಿ 5 ವರ್ಷಗಳ ಕಾಲ ಜೈಲು ಶಿಕ್ಷೆ ಜೊತೆಗೆ 1oಸಾವಿರ ರೂ.ದಂಡ ವಿಧಿಸಲಾಗಿ. ಪ್ರಕರಣದಲ್ಲಿ ಸಲ್ಮಾನ್​​ ಖಾನ್ ಜೊತೆ ಆರೋಪಿಗಳಾಗಿದ್ದ ಸೊನಾಲಿ ಬೇಂದ್ರೆ, ಟಬು, ನೀಲಂ, ಸೈಫ್​​ ಅಲಿಖಾನ್​ ನಿರ್ದೋಷಿಗಳೆಂದು ಕೋರ್ಟ್ ತೀರ್ಪು ನೀಡಿದ್ದು ​ ಅವರೆಲ್ಲರಿಗೂ ಬಿಗ್‌ ರಿಲೀಫ್ ಪಡೆದಿದ್ದಾರೆ.

 

 

ಏನಿದು ಪ್ರಕರಣ?:
ಹಮ್ ಸಾಥ್ ಸಾಥ್ ಹೈ ಚಿತ್ರದ ಚಿತ್ರೀಕರಣಕ್ಕೆಂದು ರಾಜಸ್ಥಾನದಲ್ಲಿ ತಂಗಿದ್ದ ಸಲ್ಮಾನ್ ಖಾನ್ ಹಾಗೂ ಇತರೆ ನಟರುಗಳು 1998ರ ಅಕ್ಟೊಬರ್ 1ರ ಮದ್ಯ ರಾತ್ರಿ ರಾಜಸ್ಥಾನದ ಜೋಧಪುರ ಬಳಿ ಜೀಪ್ ನಲ್ಲಿ ಪ್ರಯಾಣಿಸುತ್ತಿದ್ದರು. ಆ ವೇಳೆ ಕೃಷ್ಣಮೃಗಗಳ ಹಿಂಡನ್ನು ನೋಡಿದ ಚಾಲಕನ ಸೀಟಿನಲ್ಲಿ ಕೂತಿದ್ದ ಸಲ್ಮಾನ್ ಖಾನ್ ಆ ಹಿಂಡಿನತ್ತ ಗುಂಡು ಹಾರಿಸಿದ್ದರು. ಪರಿಣಾಮ 2 ಕೃಷ್ಣಮೃಗಗಳು ಮೃತಪಟ್ಟಿದ್ದವು. ಇದನ್ನು ಅಲ್ಲಿನ ಜನರು ಗಮನಿಸಿ ಬೆನ್ನಟ್ಟಿದಾಗ, ಮೃತಪಟ್ಟಿದ್ದ ಕೃಷ್ಣಮೃಗಗಳನ್ನು ಅಲ್ಲೇ ಬಿಟ್ಟು ಸಲ್ಮಾನ್ ಮತ್ತು ತಂಡ ಅಲ್ಲಿಂದ ಎಸ್ಕೇಪ್ ಆಗಿತ್ತು ಎಂದು ಸರ್ಕಾರ ಪರ ವಕೀಲರು ವಾದಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top