fbpx
ಸಮಾಚಾರ

ಮುದ್ದುಮುದ್ದಾಗಿ ಹಾಡಾಡಿ ಎಲ್ಲರ ಬೇಬಿ ಡಾಲ್ ಆದ ಆದ್ಯ ಇವಾಗ ತುಂಬಾ ಬ್ಯುಸಿ ಯಾಕ್ಗೊತ್ತಾ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಲಿಟ್ಸ್‌‌ ಚಾಂಪ್ಸ್ 12 ರ ಸೀಸನ್‌‌ನಲ್ಲಿ ಅತಿ ಸಣ್ಣ ವಯಸ್ಸಿನ ಸ್ಪರ್ಧಿ ಆಗಿದ್ದ ಆದ್ಯ ಎಲ್ಲರ ಅಚ್ಚುಮೆಚ್ಚಿನ ಸ್ಪರ್ಧಿ ಆಗಿದ್ದಳು. ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಳು.

 

 

ಸಣ್ಣ ವಯಸ್ಸಿನಲ್ಲೇ ತನ್ನ ಮುದ್ದಾದ ಮಾತಿನಿಂದ ಹಾಗು ಸುಮಧುರ ಗೀತೆಯಿಂದ ಎಲ್ಲರ ಗಮನ ಸೆಳೆದಿದ್ದಳು ಆದ್ಯ. ಆದ್ಯ ವೇದಿಕೆ ಮೇಲೆ ಬಂದ್ರೆ ಸಾಕು ಜಡ್ಜ್ ಅರ್ಜುನ್ ಜನ್ಯ ಅವರು ಆದ್ಯ ಜೊತೆ ತಾವು ಮಗುವಿನ ತರ ಮಾತನಾಡುತ್ತಿದ್ದರು. ಸರಿಗಮಪ ಸೀಸನ್ ಸ್ಪರ್ಧೆ ಮುಗಿದ ಬಳಿಕ ಆದ್ಯ ಕೆಲವು ಸಿನಿಮಾದಲ್ಲಿ ಕೂಡ ಹಾಡಿದ್ದಾಳೆ. ಇದರ ಜೊತೆ ಕೆಲವು ನಟನೆ ಕೂಡ ಆದ್ಯ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

 

 

ರಕ್ಷಿತ್ ಶೆಟ್ಟಿ ನಿರ್ಮಾಣದ ‘ ಭೀಮಸೇನ ನಳ ಮಹಾರಾಜ’ ಹಾಗು ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಹೋಮ್‌ ಮಿನಿಸ್ಟರ್‌’ ಚಿತ್ರಗಳಲ್ಲಿ ಆದ್ಯ ಅಭಿನಯ ಮಾಡಿದ್ದಾಳೆ. ಆಂಕರ್ ಆಗಿದ್ದ ಅನುಶ್ರೀ ಅವರಿಗೂ ಕೂಡ ಆದ್ಯ ಕಂಡ್ರೆ ತುಂಬಾ ಇಷ್ಟ. ಕೆಲವು ದಿನಗಳ ಹಿಂದೆ ಆದ್ಯ ಕ್ಯಾಸಿಯೋ ನುಡಿಸುತ್ತಾ ಸಂಗೀತ ಹೇಳುತ್ತಿರುವ ವಿಡಿಯೋ ಒಂದನ್ನು ಅನುಶ್ರೀ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದರು. ಆದ್ಯ ಕ್ಯಾಸಿಯೋ ನುಡಿಸುತ್ತಾ ಸಂಗೀತ ಹೇಳುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲರ ಆದ್ಯ ವಿಡಿಯೋ ಶೇರ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

Babbby dollll Aadya… maa muddu.. fulll rocking… clap clap chappppaaaale…

A post shared by Anchor Anushree (@anchor_anushreeofficial) on

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top