fbpx
ಸಮಾಚಾರ

ತಾಯಿಯ ದೇಹವನ್ನು ಕತ್ತರಿಸಿ 3 ವರ್ಷ ಫ್ರಿಡ್ಜ್ ನಲ್ಲಿಟ್ಟ ಮಗ

ಪಶ್ಚಿಮ ಬಂಗಾಲ ರಾಜ್ಯದ ಕೋಲ್ಕತ್ತಾದಲ್ಲಿ ಮಗನೋರ್ವ ತನ್ನ ತಾಯಿ ಶವವನ್ನು ಮೂರೂ ವರ್ಷಗಳ ಕಾಲ ಫ್ರೀಡ್ಜ್ ನಲ್ಲಿ ಇಟ್ಟಿರುವುದು ಘಟನೆ ತಡವಾಗಿ ಬೆಳಕಿದೆ ಬಂದಿದೆ.

 

 

ಕೋಲ್ಕತ್ತಾದ ಬೆಹಲಾ ಪ್ರದೇಶದ ಮನೆಯಲ್ಲಿ ಈ ಘಟನೆ ನಡೆದಿದೆ, ಆರೋಪಿ ಮಗ ಸುಭಬ್ರತ್ ಮಜಮ್ದಾರ್ ಎನ್ನುವವರನ್ನು ಪೊಲೀಸರು ಬುಧುವಾರ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿ ಮಜಮ್ದಾರ್ ತನ್ನ ತಂದೆ ಗೋಪಾಲ್ ಮಜುಮ್ದಾರ್ ಹಾಗು ತಾಯಿ ಬೀರಾಮಜುಮ್ದಾರ್ ಅವರೊಂದಿಗೆ ಎರಡನೇ ಅಂತಸ್ತಿನಲ್ಲಿ ವಾಸವಾಗಿದ್ದ.

 

 

ಆದರೆ 2 ವರ್ಷಗಳ ಹಿಂದೆ 70 ವರ್ಷದ ತಾಯಿ ಬೀರಾ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಅಂದಿನಿಂದ ತಾಯಿ ಬೀರಾ ಮೃತದೇಹವನ್ನು ಪಾಪಿ ಮಗ ಮಜುಮ್ದಾರ್ ಫ್ರೀಡ್ಜ್ ನಲ್ಲಿ ಇಟ್ಟಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ಬುಧವಾರ ರಾತ್ರಿ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಡಿಸಿ ನೀಲಂಜನ್ ಬಿಸ್ವಾಸ್ ನೇತೃತ್ವದಲ್ಲಿ ದಾಳಿ ಮಾಡಿ ಶೋಧ ಕಾರ್ಯ ನಡೆಸಿದಾಗ ಫ್ರಿಡ್ಜ್ ನಲ್ಲಿ ತಾಯಿ ಶವ ಪತ್ತೆಯಾಗಿದೆ. ಈಗ ಮಗನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top