fbpx
ಸಮಾಚಾರ

ಕೃಷ್ಣಮೃಗ ಭೇಟೆಯಾಡುವಂತೆ ಸಲ್ಲುಗೆ ಪ್ರಚೋದನೆ ನೀಡಿದ್ದೇ ಈ ನಟಿಯಂತೆ!

ಬಾಲಿವುಡ್ ಬ್ಯಾಡ್ ಬಾಯ್ ಎಂದೇ ಹೆಸರು ಉಳಿಸಿಕೊಂಡಿರುವ ಸಲ್ಮಾನ್ ಖಾನ್ ಅಪರಾಧಿ ಎಂದು ಜೋಧ್‌ಪುರ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ತೀರ್ಪು ಪ್ರಕಟಿಸಿದೆ. 20 ವರ್ಷಗಳ ಹಿಂದೆ ನಟ ಸಲ್ಮಾನ್ ಖಾನ್ ಹಾಗೂ ಇತರೆ ನಟರ ವಿರುದ್ಧ ದಾಖಲಾಗಿದ್ದ ಕೃಷ್ಣಮೃಗ ಬೇಟೆ ಪ್ರಕರಣದ ತೀರ್ಪನ್ನು ರಾಜಸ್ಥಾನದ ಜೋಧಪುರ ನ್ಯಾಯಾಲಯ ಪ್ರಕಟಿಸಿದ್ದು ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ತೀರ್ಪು ನೀಡಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 51ರ ಅಡಿ ಸಲ್ಮಾನ್​​ಗೆ ಶಿಕ್ಷೆಯ ಪ್ರಕಟವಾಗಿದೆ.

 

 

ಲೈಸೆನ್ಸ್ ಇಲ್ಲದ ಗನ್’ನಲ್ಲಿ ಕೃಷ್ಣಮೃಗಗಳನ್ನ ಭೇಟೆಯಾಡಿದ ತಪ್ಪಿಗೆ ಸಲ್ಮಾನ್ ಖಾನ್ ಅವರಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 51ರ ಅಡಿ 5 ವರ್ಷಗಳ ಕಾಲ ಜೈಲು ಶಿಕ್ಷೆ ಜೊತೆಗೆ 1oಸಾವಿರ ರೂ.ದಂಡ ವಿಧಿಸಲಾಗಿ. ಪ್ರಕರಣದಲ್ಲಿ ಸಲ್ಮಾನ್​​ ಖಾನ್ ಜೊತೆ ಆರೋಪಿಗಳಾಗಿದ್ದ ಸೊನಾಲಿ ಬೇಂದ್ರೆ, ಟಬು, ನೀಲಂ, ಸೈಫ್​​ ಅಲಿಖಾನ್​ ನಿರ್ದೋಷಿಗಳೆಂದು ಕೋರ್ಟ್ ತೀರ್ಪು ನೀಡಿದ್ದು ​ ಅವರೆಲ್ಲರಿಗೂ ಬಿಗ್‌ ರಿಲೀಫ್ ಪಡೆದಿದ್ದಾರೆ.

ಆದರೆ ಕೆಲವೊಂದು ವರ್ಗದ ಮೂಲಗಳ ಪ್ರಕಾರ ಅಂದು ಡ್ರೈವರ್ ಸೀಟಿನಲ್ಲಿ ಕೂತಿದ್ದ ಸಲ್ಮಾನ್ ಖಾನ್ ಅವರಿಗೆ ಆ ಕೃಷ್ಣಮೃಗಗಳನ್ನು ಕಂಡು ಶೂಟ್ ಮಾಡುವಂತೆ ಪ್ರಚೋದನೆ ಮಾಡಿದ್ದೇ ನಟಿ ತಬು ಅಂತೇ, ನಟಿಯ ಮಾತನ್ನು ಕೇಳುತ್ತಿದ್ದಂತೆ ತಮ್ಮ ಜೀಪಲ್ಲಿದ್ದ ಬಂದೂಕನ್ನು ಸರಕ್ಕನೆ ತೆಗೆದು ಎರಡು ಕೃಷ್ಣಾ ಮೃಗಗಳ ಮೇಲೆ ಸಲ್ಮಾನ್ ಗುಂಡು ಹಾರಿಸಿದ್ದರಂತೆ. ಆದರೆ ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಗೆ ಪ್ರಚೋದನೆ ನೀಡಿದ ನಟಿ ಟಬು ಅವರೇ ಮೊದಲನೇಯದಾಗಿ ನಿರ್ದೋಷಿಯಾಗಿರುವುದು ಸಾಮಾಜಿಕ ವಲಯದಲ್ಲಿ ಅಚ್ಚರಿಯನ್ನುಂಟುಮಾಡಿದೆ.

 

 

ಏನಿದು ಪ್ರಕರಣ?:
ಹಮ್ ಸಾಥ್ ಸಾಥ್ ಹೈ ಚಿತ್ರದ ಚಿತ್ರೀಕರಣಕ್ಕೆಂದು ರಾಜಸ್ಥಾನದಲ್ಲಿ ತಂಗಿದ್ದ ಸಲ್ಮಾನ್ ಖಾನ್ ಹಾಗೂ ಇತರೆ ನಟರುಗಳು 1998ರ ಅಕ್ಟೊಬರ್ 1ರ ಮದ್ಯ ರಾತ್ರಿ ರಾಜಸ್ಥಾನದ ಜೋಧಪುರ ಬಳಿ ಜೀಪ್ ನಲ್ಲಿ ಪ್ರಯಾಣಿಸುತ್ತಿದ್ದರು. ಆ ವೇಳೆ ಕೃಷ್ಣಮೃಗಗಳ ಹಿಂಡನ್ನು ನೋಡಿದ ಚಾಲಕನ ಸೀಟಿನಲ್ಲಿ ಕೂತಿದ್ದ ಸಲ್ಮಾನ್ ಖಾನ್ ಆ ಹಿಂಡಿನತ್ತ ಗುಂಡು ಹಾರಿಸಿದ್ದರು. ಪರಿಣಾಮ 2 ಕೃಷ್ಣಮೃಗಗಳು ಮೃತಪಟ್ಟಿದ್ದವು. ಇದನ್ನು ಅಲ್ಲಿನ ಜನರು ಗಮನಿಸಿ ಬೆನ್ನಟ್ಟಿದಾಗ, ಮೃತಪಟ್ಟಿದ್ದ ಕೃಷ್ಣಮೃಗಗಳನ್ನು ಅಲ್ಲೇ ಬಿಟ್ಟು ಸಲ್ಮಾನ್ ಮತ್ತು ತಂಡ ಅಲ್ಲಿಂದ ಎಸ್ಕೇಪ್ ಆಗಿತ್ತು ಎಂದು ಸರ್ಕಾರ ಪರ ವಕೀಲರು ವಾದಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top