fbpx
ಸಿನಿಮಾ

ಕ್ರೇಜಿ ಸ್ಟಾರ್ ರವಿ ಚಂದ್ರನ್ ‘ಯುಗ ಪುರುಷ’ ಚಿತ್ರದ ಪ್ರೀತಿ ಕೊಂದ ಕೊಲೆಗಾರ್ತಿ ಕಾಮಿನಿ ದೇವಿ ಈಗ ಹೇಗಿದ್ದಾರೆ ಗೊತ್ತಾ

1989 ರಲ್ಲಿ ಬಿಡುಗಡೆಗೊಂಡ ಯುಗ ಪುರುಷ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಮೂನ್ ಮೂನ್ ಸೆನ್ , ಈ ಚಿತ್ರದಲ್ಲಿ ತನ್ನ ಸ್ವಂತ ಪತಿಯನ್ನು ಕೊಂದು ಆಸ್ತಿಯನ್ನು ಲಪಟಾಯಿಸುವ ಸಂಚು ಮಾಡಿ , ಅತ್ತೆ ನಾದಿನಿಯರನ್ನು ಮನೆಯಿಂದ ಹೊರಗಟ್ಟಿ ಎಲ್ಲ ಆಸ್ತಿಯನ್ನು ತಾನೇ ಅನುಭವಿಸುವ ಮನೆ ಮುರಕಿ ಪಾತ್ರವನ್ನು ಮಾಡಿದ್ದಳು ಮೂನ್ ಮೂನ್ ಈ , ಪುನರ್ ಜನ್ಮದ ಕಥಾ ಹಂದರ ಈ ಚಿತ್ರಕ್ಕೆ ಇತ್ತು , ಮುಖ್ಯ ಭೂಮಿಕೆಯೆಯಲ್ಲಿ ಕ್ರೇಜಿ ಸ್ಟಾರ್ ರವಿ ಚಂದ್ರನ್, ಖುಷ್ಬೂ , ರಾಮ ಕೃಷ್ಣ , ಜ್ಯೋತಿ ಕಾಣಿಸಿಕೊಂಡಿದ್ದರು .

 

 

ಮೂನ್ ಮೂನ್ ಸೆನ್ ಎರಡು ಜನ್ಮಗಳ ನಾಯಕರಿಗೆ ನಾಯಕಿಯಾಗಿದ್ದಳು ಆಕೆಯ ಪಾತ್ರ ಎಲ್ಲರನ್ನು ಮಂತ್ರ ಮುಗ್ದಗೊಳಿಸಿತ್ತು ಇದಾದ ಬಳಿಕ ವೈಶಾಖದ ದಿನಗಳು , ಮಾಂಗಲ್ಯ ಬಂಧನ ಚಿತ್ರದಲ್ಲೂ ಮೂನ್ ಮೂನ್ ಅಭಿನಯ ಮಾಡಿದ್ದರು .

ಯಾರಿ ಮೂನ್ ಮೂನ್ ಸೆನ್ ?

 

 

1954 ರಲ್ಲಿ ಕೋಲ್ಕತ್ತಾ ದಲ್ಲಿ ಹುಟ್ಟಿದರು, ಮೂನ್ ಮೂನ್ ಸೇನ್, ಜನಪ್ರಿಯ ಬೆಂಗಾಲಿ ನಟಿ ಸುಚಿತ್ರ ಸೇನ್ ಮತ್ತು ದಿಬಾನಾಥ್ ಸೆನ್ ಇವರ ತಂದೆ ತಾಯಿಯರು. ಅವರ ತಂದೆ ಕೋಲ್ಕತ್ತಾದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲೊಬ್ಬರು, ಅದಿನಾಥ್ ಸೇನ್. ಅವರ ಅಜ್ಜ ದೀನಾಥ್ ಸೇನ್ ತ್ರಿಪುರ ಮಹಾರಾಜರ ಆಸ್ಥಾನದಲ್ಲಿ ದಿವಾನರಾಗಿದ್ದರು .
ಭರತ್ ದೇವ್ ವರ್ಮಾ ಅವರನ್ನು 1978 ರಲ್ಲಿ ಮದುವೆಯಾದರು .

 

 

ಮೂನ್ ಮೂನ್ ಸೇನ್ ತಮ್ಮ ವೃತ್ತಿಜೀವನವನ್ನು ಮದುವೆ ಹಾಗು ಮಕ್ಕಳಾದ ಮೇಲೆ ಶುರು ಮಾಡಿದರು ಆಕೆಯ ಮೊದಲ ಚಿತ್ರ ‘ಅಂದರ್ ಬಾಹರ್’1984 ಬಿಡುಗಡೆ ಗೊಂಡಿತ್ತು , ಈ ಚಿತ್ರದಲ್ಲಿನ ಆಕೆಯ ಗ್ಲಾಮರ್ ಅಭಿನಯ ಅನೇಕ ವಿವಾದಗಳನ್ನು ಹುಟ್ಟುಹಾಕಿತ್ತು .

 

 

ಅವರು 60 ಚಲನಚಿತ್ರಗಳಲ್ಲಿ ಮತ್ತು 40 ಸೀರಿಯಲ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. 1987 ರಲ್ಲಿ ಸಿರಿವೆನ್ನೆಲಾ ಚಿತ್ರದಲ್ಲಿನ ಪಾತ್ರಕ್ಕಾಗಿ ಆಂಧ್ರಪ್ರದೇಶದ ರಾಜ್ಯ ನಂದಿ ಪ್ರಶಸ್ತಿಯನ್ನು ಅವರು ಅತ್ಯುತ್ತಮ ಪೋಷಕ ನಟಿ ಪಾತ್ರಕ್ಕೆ ಪಡೆದಿದ್ದಾರೆ.

 

 

ಸಾಂಸಾರಿಕ ಜೀವನ

 

ಮೂನ್ ಮೂನ್ ಸೇನ್ ತ್ರಿಪುರ ರಾಜ್ಯದ ರಾಜಮನೆತನದ ವಂಶಸ್ಥರಾದ ಭರತ್ ದೇವ್ ವರ್ಮಾ ಅವರನ್ನು1978 ರಲ್ಲಿ ವಿವಾಹವಾದರು, ಅವರಿಗೆ ಇಬ್ಬರು ಪುತ್ರಿಯರು, ರೈಮಾ ಸೇನ್ ಮತ್ತು ರಿಯಾ ಸೆನ್ ಇಬ್ಬರು ಸಹ ಖ್ಯಾತ ನಟಿಯರು ಹಾಗು ಮಾಡೆಲ್ ಗಳು .

 

ಮಾರ್ಚ್ 2014 ರಲ್ಲಿ ಅವರು ತೃಣಮೂಲ ಕಾಂಗ್ರೆಸ್ಗೆ ಸೇರಿಕೊಂಡರು , ಬಂಕುರ ಕ್ಷೇತ್ರದಿಂದ 2014 ರ ಲೋಕಸಭಾ ಚುನಾವಣೆಯಲ್ಲಿ ಗೆದ್ದರು, ಅಲ್ಲಿ ಸಿಪಿಐ (ಎಂ) ಒಂಬತ್ತು ಬಾರಿ ಸಂಸದರಾಗಿದ್ದ ಬಸುದಬ್ ಆಚಾರ್ಯ ಅವರನ್ನು ಸೋಲಿಸಿದರು.

 

 

ಮದುವೆಯಾದ ನಂತರ ಸಿನಿಮಾ ಹಾಗು ಸೀರಿಯಲ್ ಗಳಲ್ಲಿ ಅಭಿನಯಿಸಿದ ಮೂನ್ ಮೂನ್ ಅವರಿಗೆ ಸಂಪೂರ್ಣ ಬೆಂಬಲವನ್ನು ಕೊಟ್ಟವರು ಆಕೆಯ ಪತಿ.

ಸದ್ಯಕ್ಕೆ ತಮ್ಮ 64 ವಯಸ್ಸಿನಲ್ಲಿ ಮೂನ್ ಮೂನ್ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿ ತಮ್ಮ ರಿಟೈರ್ಡ್ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top