fbpx
ಸಿನಿಮಾ

ಮನಮೋಹನ್ ಸಿಂಗ್ ಜೀವನಾಧಾರಿತ ಚಿತ್ರಕ್ಕೆ ಕೊನೆಗೂ ಸಿಕ್ಕಳು ಸೋನಿಯಾ ಗಾಂಧಿ

ದೇಶದ ಮಾಜಿ ಪ್ರಧಾನ ಮಂತ್ರಿ ಆಗಿರುವ ಮನಮೋಹನ್ ಸಿಂಗ್ ಅವರ ಕುರಿತು ಹೊಸ ಚಿತ್ರ ಮೂಡಿ ಬರುತ್ತಿದ್ದು, ಈ ಚಿತ್ರದ ಹೊಸ ಪೋಸ್ಟರ್ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಚಿತ್ರಕ್ಕೆ ‘ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಎಂದು ಹೆಸರಿಡಲಾಗಿದೆ, ದೇಶದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ.

 

 

 

ಈ ಸಿನಿಮಾದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾತ್ರದಲ್ಲಿ ಬಾಲಿವುಡ್‌ ನಟ ಅನುಪಮ್ ಖೇರ್‌ ಅಭಿನಯ ಮಾಡುತ್ತಿದ್ದಾರೆ. ಇದೀಗ ಈ ಸಿನೆಮದಲ್ಲಿ ಸೋನಿಯಾ ಗಾಂಧಿ ಪಾತ್ರಕ್ಕೆ ಜರ್ಮನ್ ನಟಿಯನ್ನು ಕರೆತರುತ್ತಿದ್ದಾರೆ. ನಟಿ ಸುಝೇನ್ ಬರ್ನೆಟ್, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಾತ್ರದಲ್ಲಿ ಅಭಿನಯ ಮಾಡಲಿದ್ದಾರೆ.

 

‘ಹನಿಮೂನ್ ಟ್ರಾವೆಲ್ಸ್ ಪ್ರೈವೇಟ್‌ ಲಿಮಿಟೆಡ್‌’ ಬಾಲಿವುಡ್ ಸಿನಿಮಾದಲ್ಲಿ ಗಮನ ಸೆಳೆದಿದ್ದ ಸುಝನ್ನೆ, ಆನಂತರ ಹತ್ತಾರು ಹಿಂದಿ, ಮರಾಠಿ ಹಾಗು ಬೆಂಗಾಲಿ ಸಿನಿಮಾಗಳಲ್ಲಿ ನಟನೆ ಮಾಡಿದ್ದರು. ‘ರಾಮ್‌ಧಾನು- ದಿ ರೈನ್‌ಬೋ’ ಬೆಂಗಾಲಿ ಚಿತ್ರದಲ್ಲಿನ ‘ಜೆನಿಫರ್‌’ ಪಾತ್ರಕ್ಕೆ ಅವರಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ‘ನೋ ಪ್ರಾಬ್ಲಂ’, ‘ಲವ್‌ ರಿಸೈಪ್‌’ ಅವರ ಮತ್ತೆರೆಡು ಹಿಂದಿ ಚಿತ್ರಗಳು. ಟೈಟಾನ್‌ ವಾಚ್‌ ಜಾಹೀರಾತಿನಲ್ಲಿ ಅವರು ಆಮಿರ್ ಖಾನ್‌ ಜೊತೆ ಕಾಣಿಸಿಕೊಂಡಿದ್ದಾರೆ. 2009ರಲ್ಲಿ ಹಿಂದಿ ಚಿತ್ರ ಹಾಗು ಕಿರುತೆರೆ ನಟ ಅಖಿಲ್ ಮಿಶ್ರಾ ಅವರನ್ನು ಸುಝನ್ನಾ ವರಿಸಿದರು. ಸಿನಿಮಾ, ಕಿರುತೆರೆ ನಟನೆ ಜೊತೆ ಪತಿ ಅಖಿಲ್ ಅವರ ಜೊತೆಗೂಡಿ ಸುಝನ್ನಾ ‘ವಿಜೇತಾ’ ನಾಟಕ ತಂಡವನ್ನು ಮುನ್ನಡೆಸುತ್ತಿದ್ದಾರೆ. ‘ದಿ ಆಕ್ಸಿಡೆಂಟಲ್ ಪ್ರೈಂ ಮಿನಿಸ್ಟರ್‌’ನ ಪಾತ್ರ ಅವರ ವೃತ್ತಿಬದುಕಿನ ಪ್ರಮುಖ ಪಾತ್ರವಾಗಲಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top