fbpx
ಸಮಾಚಾರ

ಮುನಿರತ್ನ ವಿರುದ್ಧ ತೊಡೆತಟ್ಟಿದ ಹುಚ್ಚ ವೆಂಕಟ್: RR ನಗರದಲ್ಲಿ ಮುನಿರತ್ನ ವಿರುದ್ಧ ಸ್ಪರ್ಧೆ!

ಶಿವರಾಜ್ ಕುಮಾರ್ ಅಭಿಮಾನಿಗಳಿಂದ ಚಳಿಜ್ವರ ಬಿಡಿಸಿಕೊಂಡಿದ್ದ ಕಾಂಟ್ರಾವರ್ಷಿಯಲ್ ಗೊಣ್ಣೆ ಸ್ಟಾರ್ ಹುಚ್ಚ ವೆಂಕಟ್ ಅದಾದ ನಂತರ ಶಾಸಕ ಮುನಿರಂತ ಅವರ ವಿರುದ್ಧ ಕುಕ್ಕರ್ ಮತ್ತು ವಾಟರ್ ಕ್ಯಾನ್ ಗಳನ್ನ ಹಿಡಿದು ಇವನ್ನು ಮುನಿರತ್ನ ಮತದಾರರನ್ನು ಕೊಂಡುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಮತ್ತದೇ ರಂಖಲು ಮಾಡಿಕೊಂಡು ಗೊಣ್ಣೆ ಸುರಿಸುತ್ತಾ ಮಾಧ್ಯಮದಲ್ಲಿ ಪ್ರತ್ಯಕ್ಷವಾಗಿದ್ದ ಹುಚ್ಚ ವೆಂಕಟ್ ಈಗ ನಿರ್ಮಾಪಕ ಮುನಿರತ್ನ ವಿರುದ್ಧ ಬಹಿರಂಗವಾಗಿಯೇ ತೊಡೆತಟ್ಟಿದ್ದಾರೆ. ವಿಷ್ಯ ಏನು ಅಂತೀರಾ? ಇಲ್ಲಿದೆ ನೋಡಿ.

 

 

ಶಾಸಕ ಮುನಿರತ್ನ ತಮ್ಮ ಕ್ಷೇತ್ರದ ಮತದಾರರಿಗೆ ಕುಕ್ಕರ್, ವಾಟರ್ ಬಾಟೆಲ್ ಗಳನ್ನು ಹಂಚುತ್ತಿದ್ದಾರೆ ಎಂದು ಆರೋಪಿಸಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ಕೆಂಡವಾಗಿದ್ದ ಹುಚ್ಚ ವೆಂಕಟ್ ಇದೀಗ ಬಹಿರಂಗವಾಗಿಯೇ ಅವರ ವಿರುದ್ಧ ಸಮರ ಸಾರಿದ್ದು ಮುಂದಿನ ಚುನಾವಣೆಯಲ್ಲಿ ಮುನಿರತ್ನ ವಿರುದ್ಧವೇ ಸ್ಪರ್ಧಿಸೋಕೆ ನಿರ್ಧರಿಸಿದ್ದಾರೆ.

 

 

ತನ್ನ ಹುಚ್ಚಾಟಗಳಿಂದಲೇ ಹೆಚ್ಚು ವಿವಾದವನ್ನು ಮೈಮೇಲೆ ಎಳೆದುಕೊಂಡು ಹೆಸರನ್ನು ಕೆಡಸಿಕೊಂಡಿದ್ದ ಹುಚ್ಚ ವೆಂಕಟ್ ಇನ್ನಾದರೂ ಒಳ್ಳೆ ಬುದ್ದಿ ಕಲಿತುಕೊಂಡು ರಾಜಕೀಯದಲ್ಲಿ ಯಶಸ್ಸು ಗಳಿಸುತ್ತಾರೋ ಅಥವಾ ತಮ್ಮ ಸಿನಿಮಾಗಳನ್ನ ನೋಡದೇ ಇದ್ದಾಗ ಪ್ರೇಕ್ಷಕರನ್ನು ತರಾಟೆಗೆ ತೆಗೆದುಕೊಳ್ಳುವ ಹಾಗೆ ಚುನಾವಣೆಯಲ್ಲಿ ಸೋತಾಗಲು ಕೂಡ ಮತದಾರನ್ನು ಬಾಯಿ ಬಂದಂತೆ ಬೈಯ್ಯುತ್ತಾರೋ ಕಾದು ನೋಡಬೇಕು.

ಅಂದಹಾಗೆ ಇದೇ ಹುಚ್ಚು ಆಸಾಮಿ ಹಿಂದೊಮ್ಮೆ ಮೀಡಿಯಾದಲ್ಲಿ ಕೂತು ಮಾತನಾಡುವಾಗ “ನಾನು ಸ್ವಂತ ಪಕ್ಷವನ್ನು ಕಟ್ಟಿ ಒಂದಲ್ಲ ಒಂದು ದಿನ ಭಾರತ ದೇಶದ ಪ್ರಧಾನಿಯಾಗ್ತೀನಿ” ಎಂಬೆಲ್ಲಾ ಹುಂಬು ಮಾತುಗಳನ್ನು ಆಡಿತ್ತು.. ಆ ಮಾತುಗಳನ್ನು ಕೇಳಿ ಕಿವಿಯಲ್ಲಿ ರಕ್ತ ಬರಿಸಿಕೊಂಡವರಿಗಿಂತ ಮರೆಯಲ್ಲಿ ನಕ್ಕಿದ್ದವರೇ ಹೆಚ್ಚು, ಆ ಆಸೆಯಿಂದಲೋ ಏನೋ ಈಗ ರಾಜಕೀಯಕ್ಕೆ ಅಡಿಯಿಡುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top