fbpx
ಸಮಾಚಾರ

ವ್ಯಕ್ತಿಯೋರ್ವನ ಮೇಲೆ ಜಗ್ಗೇಶ್ ಹಲ್ಲೆ ಪ್ರಕರಣ: ಹಲ್ಲೆಗೆ ನಟ ಜಗ್ಗೇಶ್ ಹೇಳೋದೇನು?

ಅದೇನೇ ಸಾಮಾಜಿಕ ಪಲ್ಲಟಗಳು ಸಂಭವಿಸಿದರೂ ಅದಕ್ಕೆ ಸಡನ್ನಾಗಿ ಫೇಸ್ ಬುಕ್ ಅಥವಾ ಟ್ವಿಟರ್ ಮೂಲಕ ಪ್ರತಿಕ್ರಿಯಿಸುವವರು ನವರಸ ನಾಯಕ ಜಗ್ಗೇಶ್. ತಮ್ಮ ಮನೋಜ್ಞ ನಟನೆಯಿಂದಲೇ ಕನ್ನಡಿಗರ ಮನಗೆದ್ದಿರುವ ಜಗ್ಗೇಶ್ ಅವರು ಮಾಡಿಕೊಂಡಿರುವ ವಿವಾದಗಳಿಗೇನು ಕಮ್ಮಿ ಇಲ್ಲ. ಸದಾ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಲ್ಲಿರುವ ಜಗ್ಗೇಶ್ ಈಗ ಹಲ್ಲೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ.

 

 

ಜಗ್ಗೇಶ್ ಅವರು ಮಲ್ಲೇಶ್ವರಂ ನಲ್ಲಿನ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೇ. ನೆನ್ನೆ ರಾತ್ರಿ ಒಂಭತ್ತು ಗಂಟೆಯಾ ಸರಿಸುಮಾರಿಗೆ ಈ ಘಟನೆ ನಡೆದಿದ್ದು ಮಲ್ಲೇಶ್ವರಂನ 8ನೇ ಕ್ರಾಸ್​ನಲ್ಲಿರುವ ರಸ್ತೆಯನ್ನು ಬ್ಲಾಕ್ ಮಾಡಿ ಲೈಸೆನ್ಸ್ ಇಲ್ಲದೆ ಅಂಗಡಿ ಇಟ್ಟುಕೊಂಡಿದ್ದನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆಯೇ ಜಗ್ಗೇಶ್ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಜಗ್ಗೇಶ್ ಸಂಭಂದಿಯಾಗಿರುವ ಮಾದೇಗೌಡ ಎಂಬುವರು ರಸ್ತೆಗೆ ಅಡ್ಡಲಾಗಿ ತಳ್ಳುಗಾಡಿ ಇಟ್ಟುಕೊಂಡಿರುತ್ತಾರೆ. ರಸ್ತೆಗೆ ಅಡ್ಡಲಾಗಿರುವ ಗಾಡಿಯನ್ನು ತೆರವು ಗೊಳಿಸುವಂತೆ ರವಿಕುಮಾರ್ ಮಾದೇಗೌಡಗೆ ಹೇಳುತ್ತಾರೆ. ಮುಂದೆ ಮಾತಿನ ಚಕಮಕಿ ಕೂಡ ನಡೆಯುತ್ತದೆ.

ಆ ವೇಳೆ ನಟ ಜಗ್ಗೇಶ್ ಅವರನ್ನು ಮಾದೇಗೌಡ ಸ್ಥಳಕ್ಕೆ ಕರೆಸುತ್ತಾರೆ. “ಸ್ಥಳಕ್ಕೆ ಬಂದ ಜಗ್ಗೇಶ್ ತಾನು ತಳ್ಳುಗಾಡಿಯವನ ಸಂಬಂಧಿ ಎಂದು ಹೇಳಿ ರವಿಕುಮಾರ್ ಅವರ ಮೇಲೆ ಗಲಾಟೆ ಶುರುಮಾಡಿ ಆತನ ಮೇಲೆ ರವಿಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ.” ಎಂದು ರವಿಕುಮಾರ್ ಆರೋಪಿಸಿದ್ದಾರೆ. ಜಗ್ಗೇಶ್ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ತಮ್ಮ ಫೋನ್ ಮೂಲಕ ರೆಕಾರ್ಡ್ ಮಾಡಿದ್ದು ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

 

ಘಟನೆ ನಡೆದ ಬಳಿಕ ಜಗ್ಗೇಶ್ ವಿರುದ್ಧ ದೂರು ದಾಖಲಿಸಲು ರವಿಕುಮಾರ್ ಮಲ್ಲೇಶ್ವರಂ ಠಾಣೆಗೆ ಹೋಗಿದ್ದು ಅಲ್ಲಿ ಪೊಲೀಸರು ಅವರ ದೂರನ್ನು ಸ್ವೀಕರಿಸಲು ನಿರಾಕರಿಸಿರುವ ವಿಚಾರವೂ ತಿಳಿದುಬಂದಿದೆ.ಜಗ್ಗೇಶ್ ಅವರು ಐದಾರು ಜನರನ್ನು ಕರೆದುಕೊಂಡು ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ”ಎಂದು ರವಿಕುಮಾರ್ ಆರೋಪಿಸಿದ್ದಾರೆ.

 

 

ಈ ಸಂಭಂದ ನಟ ಜಗ್ಗೇಶ್ ಕೂಡ ಪ್ರತಿಕ್ರಿಯಿಸಿದ್ದು “ಮಾದೇಗೌಡ ಎಂಬುವವರು ನನ್ನ ಭಾಮೈದ. ಆತ ಭೂಮಿಗೀತ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಗರದ ಮಲ್ಲೇಶ್ವರಂನಲ್ಲಿ ಸಾಕಷ್ಟು ಅಂಗಡಿಗಳನ್ನು ಮತ್ತು ಆರ್ಗನೈಸ್ ಶಾಪ್‌ಗಳನ್ನೆಲ್ಲಾ ಇಟ್ಟುಕೊಂಡಿದ್ದಾರೆ. ಮಲ್ಲೇಶ್ವರಂನ 8ನೇ ಕ್ರಾಸ್‌ನಲ್ಲಿ ಅವರ ಮಗನಿಗಾಗಿ ಒಂದು ಅಂಗಡಿ ಹಾಕಿಕೊಟ್ಟಿದ್ದಾರೆ. ಆದರೆ ಯಾರೋ ವ್ಯಕ್ತಿ ಏರಿಯಾ ಕಾರ್ಪೊರೇಟರ್ ಮಂಜಣ್ಣ ಅವರ ಹೆಸರನ್ನು ಹೇಳಿಕೊಂಡು ಅವರಿಗೆ ತೊಂದರೆ ಕೊಡುತ್ತಿದ್ದಂತೆ. ಈ ವಿಷ್ಯ ನನ್ನ ಗಮನಕ್ಕೂ ಬಂದಿತು ಆಗ ನಾನು ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿ, ಕಾರ್ಪೊರೇಟರ್ ಮಂಜಣ್ಣ ಬಳಿ ಮಾತನಾಡುತ್ತೇನೆ ಎಂದು ಹೇಳಿದ್ದೆ.

 

 

ಈ ವಿಚಾರವಾಗಿ ಮಂಜಣ್ಣ ಅವರನ್ನು ಕೇಳಿದಾಗ ಆತ ನಮ್ಮ ಕಡೆಯವರು ಅಲ್ಲ ಎಂದರು. ನೆನ್ನೆ ಕೂಡ ಇದೇ ಅಂಗಡಿಯ ಮುಂದೆ ಹೋಗಿ ತೊಂದರೆ ಕೊಟ್ಟು ರಂಪಾಟ ಮಾಡಿದ್ದಾನೆ. ಕಾರಣ ಅವರು ನನಗೆ ಫೋನ್ ಮಾಡಿ ವ್ಯಕ್ತಿಯೊಬ್ಬ ಬಂದು ಮಿಸ್ ಬಿಹೇವ್ ಮಾಡುತ್ತಿದ್ದಾನೆ ಎಂದು ತಿಳಿಸಿದರು.

ಆಗ ವಾಕಿಂಗ್ ಮಾಡುತ್ತಿದ್ದ ನಾನು ಕಾರ್ಪೊರೇಟರ್ ಜೊತೆ ಸ್ಥಳಕ್ಕೆ ಹೋದೆ. ಆಗ ಆತ ಓಡಿಹೋಗಲು ಮುಂದಾದ ಅವನನ್ನು ಹಿಡಿಯುವಾಗ ಸ್ವಲ್ಪ ಎಳೆದಾಟ ಆಗಿದೆ, ನಾನು ಯಾವುದೇ ರೀತಿಯ ಹಲ್ಲೆ ಮಾಡಿಲ್ಲ.. ತಾನು ಹಲ್ಲೆ ಮಾಡಿದ್ದೇನೆ ಎಂದು ವಿನಾಕಾರಣ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಸೈಬರ್ ಪೊಲೀಸರಿಗೂ ದೂರು ನೀಡುತ್ತೇನೆ ಎಂದಿದ್ದಾರೆ.”

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top