fbpx
ಸಮಾಚಾರ

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಚುನಾವಣೆಯಲ್ಲಿ ಬೆಂಬಲ: ಲಿಂಗಾಯತ ಮಹಾಸಭಾ ನಿರ್ಣಯ

ಲಿಂಗಾಯತ ಧರ್ಮಕ್ಕೆ ಪ್ರೋತ್ಸಾಹ ನೀಡಿದ ಸಿಎಂ. ಸಿದ್ದರಾಮಯ್ಯ ಹಾಗು ಅವರ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಜಾಗತಿಕ ಲಿಂಗಾಯತ ಮಹಾಸಭಾ ನಿರ್ಧಾರ ಕೈಗೊಂಡಿದ್ದಾರೆ ಎಂದು ಬಸವ ಪೀಠಾಧ್ಯಕ್ಷರಾದ ಮಾತೆಮಹಾದೇವಿ ಹೇಳಿದ್ದಾರೆ.

 

 

ಬೆಂಗಳೂರಿನ ಬಸವ ಭವನದಲ್ಲಿ ನಡೆದ ಸಭೆಯಲ್ಲಿ ಸುಮಾರು 250ಕ್ಕೂ ಅಧಿಕ ಮಠಾಧೀಶರು, ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ಸುದೀರ್ಘ ಚರ್ಚೆ ಮಾಡುವ ಮೂಲಕ ಈ ನಿರ್ಣಯ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಲಿಂಗಾಯತರಾಗಿ ಹುಟ್ಟದಿದ್ದರೂ ಬಸವ ಅನುಯಾಯಿ. ನಮ್ಮ ಹೋರಾಟಕ್ಕೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ತಡ ಮಾಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಣಯ ಕೈಗೊಂಡು ಬಸವ ಧರ್ಮದ ಅಸ್ಮಿತೆಗೆ ಬೆಂಬಲ ನೀಡಿದ್ದಾರೆ ಎಂದರು.

 

 

ಆರ್‌ಎಸ್‌‌ಎಸ್‌‌‌ ದವರು ಲಿಂಗಾಯತ ಧರ್ಮಕ್ಕಾಗಿ ಹೋರಾಟ ನಡೆಸುತ್ತಿರುವ ಹೋರಾಟಗಾರರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಹೋರಾಟಗಾರರಿಗೆ ಸುಳ್ಳು ಆರೋಪ ಮಾಡಲಾಗುತ್ತಿದೆ. . ನಾವು ಹಿಂದು ಧರ್ಮದ ವಿರೋಧಿಗಳಲ್ಲ. ನಮ್ಮದು ಭಾರತೀಯ ಸಂಸ್ಕೃತಿ. ಲಿಂಗಾಯತ ಧರ್ಮ. ಸಿಖ್, ಜೈನ, ಬೌದ್ಧ ಧರ್ಮಗಳು ಪ್ರತ್ಯೇಕ ಅಸ್ತಿತ್ವ ಕಂಡುಕೊಂಡಿವೆ. ಆದರೂ ಹಿಂದೂ ಧರ್ಮದಲ್ಲೇ ಇವೆ. ಲಿಂಗಾಯತ ಧರ್ಮವೂ ಅದೇ ರೀತಿ ಹಿಂದೂ ಧರ್ಮದ ಭಾಗವಾಗಿಯೇ ಇರಲಿದೆ. ಆದರೆ ನಮ್ಮ ಅಸ್ಮಿತೆಗಾಗಿ ಪ್ರತ್ಯೇಕ ಮಾನ್ಯತೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top