fbpx
ಸಿನಿಮಾ

ಮಲ್ಟಿಪ್ಲೆಕ್ಸ್ ನಲ್ಲಿ ದುಬಾರಿ ತಿಂಡಿ-ತಿನಿಸುಗಳಿಗೆ ಹೈ ಕೋರ್ಟ್ ಬ್ರೇಕ್

ಚಿತ್ರಮಂದಿರದಲ್ಲಿ ಸಿನಿಮಾ ನೋಡುವವರಿಗೊಂದು ಖುಷಿ ಸುದ್ದಿ. ಮಲ್ಟಿಪ್ಲೆಕ್ಸ್ ನಲ್ಲಿ ಸಾಮಾನ್ಯವಾದ ಬೆಲೆಗೆ ಆಹಾರ, ನೀರು ಸಿಗಲಿದೆ. ಬಾಂಬೆ ಹೈಕೋರ್ಟ್ ಈ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.

 

 

ಮಲ್ಟಿಫ್ಲೆಕ್ಸ್‌ ಚಿತ್ರಮಂದಿರ ಒಳಗೆ ಮಾರಾಟ ಮಾಡುವ ಆಹಾರ ಪದಾರ್ಥಗಳು ಹಾಗೂ ಕುಡಿಯುವ ನೀರಿನ ಬೆಲೆ ಬಹಳ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿರುವ ಬಾಂಬೆ ಹೈಕೋರ್ಟ್‌, ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ)ಯಲ್ಲಿಯೇ ಮಾರಾಟ ಮಾಡಬೇಕು ಎಂದು ಆದೇಶವನ್ನು ಹೊರಡಿಸಿದೆ.

 

 

ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ಪ್ರೇಕ್ಷಕರು ಹೊರಗಿನ ತಿಂಡಿ, ಆಹಾರ, ನೀರನ್ನು ತರುವಂತಿರಲಿಲ್ಲ. ಚಿತ್ರದ ಟಿಕೆಟ್ ಜೊತೆ ಆಹಾರದಿಂದಲೂ ದುಡ್ಡು ಬರಲಿ ಎನ್ನುವ ಕಾರಣಕ್ಕೆ ಮಲ್ಟಿಪ್ಲೆಕ್ಸ್ ನಲ್ಲಿ ಈ ನಿಯಮ ಮಾಡಲಾಗಿತ್ತು. ಪ್ರಕರಣವೊಂದರ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಹೊರಗಿನ ತಿಂಡಿಯನ್ನು ಸಿನಿಮಾ ಹಾಲ್ ಗೆ ತೆಗೆದುಕೊಂಡು ಹೋಗಲು ಅನುಮತಿ ನೀಡಿದೆ ಹಾಗು ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ)ಯಲ್ಲಿಯೇ ಮಾರಾಟ ಮಾಡಬೇಕು ಎಂದು ಆದೇಶವನ್ನು ಹೊರಡಿಸಿದೆ.

 

 

ಇನ್ನು ಮುಂದೆ ಎಲ್ಲ ಮಲ್ಟಿ ಪ್ಲೇಸ್ ನಲ್ಲಿ ಈ ನಿಯಮ ಜಾರಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top