fbpx
ಸಮಾಚಾರ

‘ನನ್ನ ಸಾವಿಗೆ ದಿನೇಶ್ ಗುಂಡೂರಾವ್‌, ಕೆ.ಜೆ. ಜಾರ್ಜ್‌ ಅವರೇ ಕಾರಣ’: ವಿಷ ಕುಡಿದ ರೌಡಿ ನಾಗ

ತನ್ನ ಸಹೋದರನ ಹೆಂಡತಿ ಹಾಗು ಮಗಳ ಮೇಲೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಒಡ್ಡಿದ ಆರೋಪದ ಮೇಲೆ ಬಂಧಿತನಾಗಿದ್ದ ರೌಡಿ ನಾಗರಾಜ್ ಈಗ ಬೆಲ್ ಪಡೆದು ಹೊರಗೆ ಬಂದು ದೊಡ್ಡ ಹೈ ಡ್ರಾಮಾ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

 

 

ಸುದ್ದಿ ಘೋಷ್ಠಿಯಲ್ಲಿ ಮಾತನಾಡುತ್ತಿದ್ದ ರೌಡಿ ನಾಗರಾಜ್ ಸಚಿವರಾದ ಕೆಜೆ ಜಾರ್ಜ್ ಮತ್ತು ಕೆಪಿಸಿಸಿ ಕಾಯಾಧ್ಯಕ್ಷ ದಿನೇಶ್ ಗುಂಡೂರಾವ್‍ ಅವರು ನನಗೆ ಮೋಸ ಮಾಡಿದ್ದಾರೆ ಎಂದು ಹೇಳಿದ ಅಷ್ಟೇ ಅಲ್ಲದೆ ಅವರು ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾನೆ. ಇದಾದ ಬಳಿಕ ವಿಷ ಕುಡಿದಿದ್ದಾನೆ ಎನ್ನಲಾಗಿದೆ. ಎಲ್ಲರೆದುರೇ ವಿಷ ಸೇವನೆ ಮಾಡಿದ್ದಾನೆ ಇದನ್ನು ತಡೆಯಲು ಪ್ರಯತ್ನ ಮಾಡಿದಾಗ ಅಬ್ಬರಿಸಿದ್ದಾನೆ ಎನ್ನಲಾಗಿದೆ.

 

 

ನಾಗರಾಜ್ ನನ್ನು ಐಸಿಯುದಲ್ಲಿ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ. ಆಸ್ಪತ್ರೆಗೆ ಪತ್ನಿ ಲಕ್ಷ್ಮಿ ಮತ್ತು ಸಂಬಂಧಿಕರು ಭೇಟಿ ನೀಡಿದ್ದಾರೆ.

 

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ದಿನೇಶ್ ಅವರ ಪತ್ನಿ ತಬು ಗುಂಡೂರಾವ್, ಸಚಿವ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅವರ ಪತ್ನಿ ಅಂಜಲಿ, ಅಜಯ್ ಹಿಲೋರಿ ಸೇರಿದಂತೆ ಎಸ್‍ಐ, ಎಎಸ್‍ಐ, ಪೊಲೀಸ್ ಪೇದೆವರೆಗೂ ಒಟ್ಟು 83 ಹೆಸರು ನಾಗರಾಜ್ ಉಲ್ಲೇಖ ಮಾಡಿದ್ದಾನೆ . ನನ್ನ ಸಾವಿಗೆ ಈ 83 ಮಂದಿ ಕಾರಣರೆಂದು 51 ಪುಟಗಳ ಸೂಸೈಡ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಪಯತ್ನ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top