fbpx
ದೇವರು

ಮಹಾಭಾರತದ ದುಷ್ಟ ಶಕುನಿ ದೇವಾಲಯ ಯಾಕೆ ಹೋಗ್ಬರಬೇಕು ಹಾಗೆ ಇದ್ರ ಹಿಂದಿರೋ ಕಥೆ ಕೇಳಿದ್ರೆ ಇಷ್ಟ್ ದಿನ ಬಯ್ದವರು ಸ್ವಲ್ಪ ಬೇಜಾರು ಪಟ್ಕೋತೀರಾ

ಭೀಷ್ಮನ ಮೇಲೆ ಹಾಗೂ ಪಾಂಡವರ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದು ಕೌರವರ ಮಾವನಾದ ಶಕುನಿಯ ಒಂದು ರಣತಂತ್ರವನ್ನು ರೂಪಿಸಿದ್ದ ಮಹಾಭಾರತ ಯುದ್ಧ ನಡೆಯಬೇಕಾದರೆ ಮೂಲ ಕಾರಣ ಎಂದು ಹೇಳಲಾಗುವ ಶಕುನಿಗೆ ಒಂದು ದೇವಾಲಯ ಕಟ್ಟಿದ್ದಾರೆ ಎಂದು ಕೇಳಿದರೆ ನಿಮಗೆ ಆಶ್ಚರ್ಯ ಆಗದೆ ಇರುವುದಿಲ್ಲ ಆದರೆ ಈ ದೇವಾಲಯದ ಇಂದಿನ ರಹಸ್ಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು.

 

 

ಮಹಾಭಾರತದ ಖಳ ನಟರಾದ ಶಕುನಿ ಹಾಗೂ ದುರ್ಯೋಧನ ಇಬ್ಬರಿಗೂ ಕೇರಳದ ಕೊಲ್ಲಂನಲ್ಲಿ ದೇವಾಲಯಗಳನ್ನು ಕಟ್ಟಿಸಲಾಗಿದೆ ಈ ದೇವಾಲಯಗಳಿಗೆ ಪವಿತ್ರ ಶ್ವರ ಹಾಗೂ ಪೊರುವಹೈ ಎಂದು ಕರೆಯಲಾಗುತ್ತದೆ .

ಶಕುನಿ ದೇವಾಲಯವನ್ನು ಮಾಯಾಂಕೊಟ್ಟು ಮಲಂಚರುವು ಮಲನಾದ ಎಂದು ಕರೆಯುತ್ತಾರೆ ಮಹಾಭಾರತದ ಮೂಲ ಸೂತ್ರಧಾರಿ ಈತ ಆತನ ಗುಣಗಳು ಕೆಟ್ಟದ್ದೇ ಆಗಿದ್ದರೂ ಆತನ ಮನಸ್ಸು ಒಳ್ಳೆಯದು ಎಂದು ಪೂರ್ವಿಕರು ಈ ಸ್ಥಳದ ಮಹಿಮೆಯನ್ನು ಕೊಂಡಾಡುತ್ತಾರೆ ಶಕುನಿ ಹಾಗೆ ತನ್ನ ದುಷ್ಟಬುದ್ಧಿಯನ್ನು ತೋರಿಸಲು ಒಂದು ದೊಡ್ಡ ಕಣ್ಣೀರಿನ ಕಥೆಯೇ ಕಾರಣ ಆತ ತನ್ನ ಬಾಲ್ಯದಲ್ಲಿ ಅನುಭವಿಸಿದ ನೋವೇ ಇದಕ್ಕೆ ಕಾರಣ .

 

 

ಶಕುನಿ ಹಿಂದಿನ ಕಣ್ಣೀರಿನ ಕಥೆ

 

ಮಹಾಭಾರತದಂತಹ ಪೌರಾಣಿಕ ಕಥೆಯನ್ನು ಓದಿದವರು, ಕೇಳಿದವರು ಮತ್ತು ನೋಡಿರುವವರು ಶಕುನಿಯ ಕುತಂತ್ರ ಬುದ್ದಿಯ ಬಗ್ಗೆ ತಿಳಿದುಕೊಂಡಿರುತ್ತಾರೆ. ಅವನನ್ನು ನೋಡಿ ಅಪಹಾಸ್ಯ ಮಾಡುವವರೇ ಹೆಚ್ಚು.ಹಾಗೆ ಈಗಿನ ಜನ ಸಾಮಾನ್ಯರು ಕೂಡ ಏನಾದರೂ ಕುತಂತ್ರ ಬುದ್ಧಿಯನ್ನು ಮಾಡಿದಲ್ಲಿ ಶಕುನಿಯ ಹೆಸರನ್ನು ಹೇಳುತ್ತಾರೆ ಮತ್ತು ಅವರನ್ನು ಶಕುನಿಗೆ ಹೋಲಿಸುತ್ತಾರೆ. ಮಹಾಭಾರತದ ಭೀಕರ ಯುದ್ಧಕ್ಕೆ,, ಕೌರವ ಸಾಮ್ರಾಜ್ಯದ ಪತನಕ್ಕೆ,ಶಕುನಿಯ ಕುತಂತ್ರವೇ ಕಾರಣ ಮತ್ತೆ ಅವನ ಕೆಟ್ಟ ಆಲೋಚನೆಗಳೇ ಕಾರಣ ಎಂದು ಎಲ್ಲರೂ ಭಾವಿಸಿದ್ದಾರೆ.ಅದು ಸತ್ಯವೂ ಹೌದು, ಆದರೆ ಆ ಕುತಂತ್ರದ ಹಿಂದೆ ಆ ಕುತಂತ್ರಿಯ ಮನದಲ್ಲೂ ಕೂಡ ಭರಿಸಲಾಗದ ಮನ ಕಲುಕುವ ನೋವು, ದುಃಖ ಇದೆ ಎನ್ನುವುದು ನಿಮಗೆ ಗೊತ್ತೇ ? ಇದರ ಹಿಂದೆ ಒಂದು ಮನ ಮಿಡಿಯುವ ಕಥೆಯಿದೆ ಅದೇನೆಂದರೆ

 

 

ಮಹಾಭಾರತದ ಕಾಲದಲ್ಲಿ ಗಾಂಧಾರ ಎಂಬ ಸಾಮ್ರಾಜ್ಯವಿತ್ತು. ಆ ಸಾಮ್ರಾಜ್ಯವನ್ನು ಆಳುತ್ತಿದ್ದವರು ಶುಭಲ ಎಂಬ ರಾಜ. ನಮಗೆಲ್ಲರಿಗೂ ಗೊತ್ತಿರುವ ಹಾಗೆ ದೃತರಾಷ್ಟ್ರನಿಗೆ ಮೂರು ಜನ ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳು ಇದ್ದಳು. ಗಾಂಧಾರ ಸಾಮ್ರಾಜ್ಯದ ಶುಭಲ ರಾಜನಿಗೂ ಕೂಡಾ ಮೂರು ಜನ ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು. ಆ ಹೆಣ್ಣು ಮಗಳೇ, ಧೃತರಾಷ್ಟ್ರನ ಪತ್ನಿ ಗಾಂಧಾರಿ, ನೂರನೇ ಮಗನೇ ಮಹಾ ಕುತಂತ್ರಿ ಶಕುನಿ, ಶಕುನಿಗೆ ತಂಗಿ ಗಾಂಧಾರಿ ಎಂದರೆ ಬಹಳ ಪ್ರೀತಿ.

ತಂಗಿಯಾದ ಗಾಂಧಾರಿಗೆ ಕುಜ ದೋಷವಿರುವ ಕಾರಣ , ಆಕೆಯನ್ನು ವರಿಸುವ ಗಂಡು ಬಹುಬೇಗ ಸಾಯುತ್ತಾನೆ ಎಂದು ಜ್ಯೋತಿಷ್ಯರು ಹೇಳಿರುತ್ತಾರೆ. ಆದ್ದರಿಂದ ಮಹಾರಾಜ ಶುಭಲ ಮುಕ್ತವಾಗಿ ಒಂದು ಗಂಡು ಮೇಕೆಯ ಜೊತೆಗೆ ಗುಪ್ತವಾಗಿ ಗಾಂಧಾರಿಯ ವಿವಾಹವನ್ನು ಮಾಡಿಸಿದ. ನಂತರ ಆ ಮೇಕೆಯನ್ನು ಬಲಿ ಕೊಡುತ್ತಾರೆ. ಗಾಂಧಾರಿ ವಿಧವೆಯಾಗುತ್ತಾಳೆ.

 

 

ಹೀಗಿರುವಾಗಲೇ ಧೃತರಾಷ್ಟ್ರನ ತಾಯಿ ಅಂಬಿಕಾಳ ಕಣ್ಣಿಗೆ ಗಾಂಧಾರಿಯ ಸೌಂದರ್ಯವನ್ನು ನೋಡಿ ಆಕೆಯನ್ನು ತನ್ನ ಮಗ ದೃತರಾಷ್ಟ್ರನೊಂದಿಗೆ ವಿವಾಹ ಮಾಡಿಸಲು ಮನಸ್ಸು ಮಾಡಿ, ಮದುವೆ ಮಾಡಿಸಬೇಕೆಂದು ನಿರ್ಧರಿಸುತ್ತಾಳೆ. ಆದರೆ ಕುರುಡನಾದ ತನ್ನ ಮಗನಿಗೆ ಶುಭಲ ರಾಜ ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವುದಿಲ್ಲವೆಂದು ಅಬ್ಬರಿಸಿದ . ಅಂಬಿಕಾ ಭೀಷ್ಮನ ಬಳಿಗೆ ಬಂದು ಗಾಂಧಾರ ಸಾಮ್ರಾಜ್ಯದ ಮೇಲೆ ದಂಡೆತ್ತಿ ಹೋಗಿ ಆ ಸಾಮ್ರಾಜ್ಯವನ್ನು ನಾಶಪಡಿಸಿ ಗಾಂಧಾರಿಯನ್ನು ಕರೆದುಕೊಂಡು ಬರುವಂತೆ ಹೇಳಿದಳು.

 

 

ಆಗ ನ್ಯಾಯವಾದಿಯಾದ ಭೀಷ್ಮ ಇದು ಅನ್ಯಾಯ, ಅಧರ್ಮ, ಎಂದೆಲ್ಲ ಹೇಳಿದರೂ, ಅವನ ಮಾತಿಗೆ ಬೆಲೆ ಕೊಡದೆ ಒಂದು ಕಾಲದಲ್ಲಿ ಭೀಷ್ಮ ಅಂಬಿಕೆಗೆ ಕೊಟ್ಟ ಮಾತನ್ನು ನೆನಪಿಸಿಕೊಳ್ಳುತ್ತಾನೆ, ಮಾನಸಿಕವಾಗಿ ಭೀಷ್ಮನನ್ನು ನಿಂಧಿಸುತ್ತಾಳೆ, ವಿಧಿ ಇಲ್ಲದೇ ಭೀಷ್ಮ ಅಂಬಿಕೆಯ ಆಜ್ಞೆಯಂತೆಯೇ ಗಾಂಧಾರ ಸಾಮ್ರಾಜ್ಯದ ಮೇಲೆ ದಾಳಿ ಮಾಡಿ ಗಾಂಧಾರಿಯನ್ನು ಕರೆದುಕೊಂಡು ಬಂದು ಧೃತರಾಷ್ಟನೊಂದಿಗೆ ಮದುವೆ ಮಾಡಿಸುತ್ತಾನೆ.

ಆಗ ತನ್ನ ತಂಗಿಗೆ ಒಬ್ಬ ಕುರುಡನನ್ನು ಮದುವೆ ಮಾಡಿಸಿದ ಕಾರಣ ಶಕುನಿಯನ್ನು ಅದು ಕೆರಳಿಸುತ್ತದೆ. ಹಾಗೆಯೇ ಗಾಂಧಾರ ಸಾಮ್ರಾಜ್ಯದ ಮೇಲೆ ಆದ ಅಕ್ರಮ, ದಾಳಿಗೆ ಮತ್ತು ತನ್ನ ತಂಗಿಗೆ ಆದ ಅನ್ಯಾಯಕ್ಕೆ , ಮೋಸಕ್ಕೆ ಭೀಷ್ಮನ ಮೇಲೆ ದ್ವೇಷ ತೀರಿಸಿಕೊಳ್ಳಬೇಕೆಂದು ಶಕುನಿ ನಿರ್ಧರಿಸುತ್ತಾನೆ. ಆದರೆ ಇತ್ತ ದೃತರಾಷ್ಟ್ರನಿಗೆ ಗಾಂಧಾರಿಗೆ ಇದು ಎರಡನೇ ವಿವಾಹವೆಂದು,ಹೀಗೆ ನಡೆದ ವಿವಾಹ ಎರಡನೇ ವಿವಾಹವೆಂದು ತಿಳಿಯುತ್ತದೆ.

ಆಗ ಕುಪಿತರಾದ ಧೃತರಾಷ್ಟ್ರ ಗಾಂಧಾರಿಯ ತಂದೆ ಶುಭಲ ಮತ್ತು ತನ್ನ ಸಹೋದರರನ್ನು ಬಂಧಿಸಿ ಅನ್ನ, ನೀರು ಇಲ್ಲದೆ ಅತಿ ಕ್ರೂರವಾಗಿ ಸಾಯಿಸಬೇಕೆಂದು, ಯೋಚಿಸಿ ದಿನನಿತ್ಯ ಕೇವಲ ಒಬ್ಬರು ತಿನ್ನುವಷ್ಟು ಆಹಾರವನ್ನು ಮಾತ್ರ ಅಷ್ಟೂ ಜನಕ್ಕೆ ಕೊಡುತ್ತಿದ್ದ. ಬಂದಿಯಾಗಿದ್ದ ಶಿವನ ಒಂದು ಬಟ್ಟಲು ಆಹಾರವನ್ನು ನಾವೆಲ್ಲರೂ ತಿಂದು ಬದುಕುವುದು ಅಸಾಧ್ಯ. ನಮ್ಮೆಲ್ಲರ ಸಾವು ಖಚಿತ , ನಮಗಾಗಿರುವ ಅನ್ಯಾಯಕ್ಕೆ ಮೋಸಕ್ಕೆ ನಾವು ಹೇಗಾದರೂ ಮಾಡಿ ಸೇಡು ತೀರಿಸಿಕೊಳ್ಳಬೇಕೆಂದು. ಯೋಚಿಸಿ ಅದಕ್ಕಾಗಿ ನಮ್ಮಲ್ಲೊಬ್ಬನನ್ನು ಬದುಕಿಸಬೇಕು ಎಂದು ನಿರ್ಧರಿಸಿ ಎಲ್ಲರಿಗಿಂತಲೂ ಕಿರಿಯವನಾಗಿದ್ದ.

ಆಸಾಮಾನ್ಯ ಪ್ರತಿಭೆಯಾಗಿದ್ದ ,ರಾಜನೀತಿಯಲ್ಲಿ ಪರಿಣಿತನಾಗಿದ್ದ , ಪಾರಂಗತರಾಗಿದ್ದ ಶಕುನಿಗೆ , ತಮ್ಮ ಅನ್ನವನ್ನೆಲ್ಲ ದಿನನಿತ್ಯ ಕೊಟ್ಟು ಅವನನ್ನು ಬದುಕಿಸಿ,ನಮ್ಮೆಲ್ಲ ಸೇಡಿಗೆ ನೀನು ಪ್ರತೀಕಾರ ತೀರಿಸಿಕೊಳ್ಳಬೇಕು. ದೃತರಾಷ್ಟ್ರ ಮತ್ತು ಅವನ ಮಕ್ಕಳು ನಮ್ಮಂತೆಯೇ ನರಳಿ ನರಳಿ ಸಾಯುವ ಹಾಗೆ ಮಾಡು ಎಂದು ಹೇಳಿ ಜೊತೆಗೆ ನಾನು ಸತ್ತ ಮೇಲೆ ನನ್ನ ದೇಹದ ಮಾಂಸವನ್ನು ತಿಂದು ನನ್ನ ದೇಹದ ಬೆನ್ನಿನ ಎಲುಬುಗಳಿಂದ ಪಗಡೆಯನ್ನು ತಯಾರಿಸಿ ಇಟ್ಟುಕೋ, ಅದರೊಳಗೆ ನನ್ನ ಆತ್ಮ ಇರುತ್ತದೆ ಆ ಪಗಡೆಯಲ್ಲಿಯೇ ಇರುತ್ತದೆ. ನೀನು ಹೇಳುವ ಹಾಗೆ ಆ ಪಗಡೆಗಳು ಕೇಳುಟ್ತಾವೇ. ನನ್ನ ಆತ್ಮ ಅವುಗಳನ್ನು ನೋಡಿಕೊಳ್ಳುತ್ತದೆ. ನಿಮಗೆ ಜಯವಾಗಲಿ. ಎಂದು ಹೇಳುತ್ತಾ ರಾಜ ಶುಭಲ ತನ್ನ ಪ್ರಾಣವನ್ನು ಬಿಡುತ್ತಾನೆ. ಅಂದಿನಿಂದ ಶಕುನಿ ಕೌರವರಿಗೆ ಆತ್ಮೀಯವಾಗಿ ಎಲ್ಲರನ್ನೂ ವಂಚಿಸಳು ನಿರ್ಧರಿಸುತ್ತಾನೆ.ಹೀಗೆ ಶಕುನಿ ಕೆಟ್ಟವನಾಗಲು ಅವನ ಜೀವಿನದ ಹಿಂದಿರುವ ಭರಿಸಲಾಗದ ನೋವೇ ಕಾರಣ.

 

 

ದೇವಾಲಯ ಇತಿಹಾಸ

ಕುರುಕ್ಷೇತ್ರ ಯುದ್ಧ ನಡೆಯುತ್ತಿದ್ದಾಗ ಶಕುನಿ ಹಾಗೂ ಆತನ ಸೋದರ ಸಂಬಂಧಿಗಳು ಪ್ರಯಾಣ ಬೆಳೆಸಿ ಈ ಸ್ಥಳವನ್ನು ತಲುಪಿದರು ಎಂದು ಹೇಳಲಾಗುತ್ತದೆ ಆ ನಂತರ ಕೌರವರು ತಮ್ಮ ಆಯುಧಗಳು ಹಾಗೂ ರಕ್ಷಾಕವಚಗಳನ್ನು ಇಲ್ಲಿ ಆಯ್ಕೆ ಮಾಡಿಕೊಂಡರು ಎಂದು ಹೇಳಲಾಗುತ್ತದೆ ಆದ್ದರಿಂದಲೇ ಈ ಸ್ಥಳಕ್ಕೆ ಪಕುತೇಶ್ವರ ಎಂಬ ಹೆಸರು ಬಂದಿತ್ತು ಎಂದು ಅನೇಕ ಜಾನಪದ ಕಥೆಗಳು ಹೇಳುತ್ತವೆ.

 

 

ಮಹಾಭಾರತದ ರಕ್ತಸಿಕ್ತ ಯುದ್ಧ ಮುಗಿದ ಮೇಲೆ ಶಕುನಿ ಮೋಕ್ಷವನ್ನು ಪಡೆಯಲು ಈ ಸ್ಥಳವನ್ನು ತಲುಪಿದರಂತೆ ಆಧ್ಯಾತ್ಮಿಕ ದೇವತೆಗಳು ಹಾಗೂ ಜ್ಞಾನ ಸಿದ್ಧಿಯಿಂದ ಮೋಕ್ಷವನ್ನು ಪಡೆದುಕೊಳ್ಳಲು ಶಕುನಿ ಬಹಳವಾಗಿ ಪ್ರಯತ್ನ ಪಟ್ಟು ಒಂದು ಒಳ್ಳೆಯ ಆತ್ಮವಾಗಿ ಪರಿವರ್ತನೆಯಾದರು ಎಂದು ಹೇಳುತ್ತವೆ ಸ್ಥಳ ಪುರಾಣಗಳು .

 

 

ಆದ್ಯಾತ್ಮಿಕ ನಂಬಿಕೆ

ಆದ್ದರಿಂದ ಇಲ್ಲಿನ ಜನರು ತಾವು ತಿಳಿಯದೆಯೂ ಹಾಗೂ ತಿಳಿದು ಯಾವುದಾದರೂ ತಪ್ಪು ಮಾಡಿದರೆ ಈ ಸ್ಥಳದಲ್ಲಿ ಬಂದು ಪೂಜೆ ಮಾಡಿದರೆ ಅವರ ಪಾಪ ಕರ್ಮಗಳಿಗೆ ಮುಕ್ತಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ ಹಾಗೆಯೇ ತಾವು ಮಾಡಿದ ಹಿಂದಿನ ಜನ್ಮದ ಕರ್ಮಗಳಿಂದ ಯಾವುದಾದರೂ ರೋಗ ರುಜಿನಗಳಿಂದ ನರಳುತ್ತಿದ್ದರೆ ಇಲ್ಲಿ ಮುಕ್ತಿ ಸಿಗುವುದು ಎಂದು ನಂಬಲಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top