fbpx
ಮನೋರಂಜನೆ

ಇತಿಹಾಸದಲ್ಲೇ ಹೊಸ ಮೈಲಿಗಲ್ಲನ್ನು ನಿರ್ಮಿಸಿದ ರ‍್ಯಾಪರ್‌ ಚಂದನ್‌ ಶೆಟ್ಟಿಯ ‘ಟಕಿಲ’ ಸಾಂಗ್!

ಬಿಗ್ ಬಾಸ್ ಶೋ ವಿನ್ ಆಗಿ ಬಂದಿರುವ ಚಂದನ್ ಶೆಟ್ಟಿ ಈಗ ಅತೀವ ಸಂತೋಷದಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಇತ್ತೀಚಿನ ಟಾಕೀಲ ಹಾಡು ಹೊಸ ದಾಖಲೆಯನ್ನು ಹುಟ್ಟುಹಾಕಿರೋದು. ಎಲ್ಲಾರು ಸೇರಿ ಇಂದು ಎಣ್ಣೆ ಹಾಕುವ’ ಅಂತಾ ಸ್ಟಾರ್ಟ್ ಆಗೋ ಟಕಿಲಾ ಸಾಂಗ್ ಮೂಲಕ ಚಂದನ್ ಶೆಟ್ಟಿ ಮತ್ತೆ ಕಿಕ್ ಕೊಟ್ಟಿದ್ದು ಈಗ ಹಳೆಯ ವಿಚಾರ.

 

 

ಟಕಿಲ’ ಹಾಡು ಈಗ ಯೂಟ್ಯೂಬ್ ನಲ್ಲಿ ನಿರೀಕ್ಷೆಗೂ ಮೀರಿ ದೊಡ್ಡ ಮಟ್ಟದಲ್ಲಿ ರೆಸ್ಪಾನ್ಸ್ ಪಡೆದಿದೆ. ಬಿಗ್ ಬಾಸ್ ವೇದಿಕೆಯ ಮೇಲೆ ಕಿಚ್ಚ ಸುದೀಪ್ ಅವರ ಕೈಯಿಂದ ಲಾಂಚ್ ಆದ ಈ ಹಾಡು ರಿಲೀಸ್ ಆದ 17 ಗಂಟೆಯ ಒಳಗೆ ಒಂದು ಮಿಲಿಯನ್’ಗೂ ಹೆಚ್ಚು ಜನರು ವೀಕ್ಷಿಸಿದ್ದರು. ಇದೀಗ ಕೇವಲ ಮೂರೇ ತಿಂಗಳಿನಲ್ಲಿ 25 ಮಿಲಿಯನ್ ಅಂದರೆ ಎರಡೂವರೆ ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಕನ್ನಡದ ಮಟ್ಟಿಗೆ ಅತಿವೇಗವಾಗಿ 25 ಮಿಲಿಯನ್ ವೀಕ್ಷಣೆಗಳನ್ನು ಪಡೆದ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಹೊಸ ಮೈಲಿಗಳನ್ನು ನಿರ್ಮಿಸಿದೆ, ಈ ಹಾಡು ಈವರೆಗೆ 2.79 ಲಕ್ಷ ಲೈಕ್ಸ್ ಪಡೆದುಕೊಂಡಿದೆ.

 

 

ಈ ಹಿಂದೆ ಚಂದನ್ ಅವರ “ಹಾಳಾಗೊದೇ” “3 ಪೆಗ್”, ಹಾಗೂ “ಚಾಕ್ಲೇಟ್ ಗರ್ಲ್” ಸಾಂಗ್ ಗಳು ಹಿಟ್ ಆಗಿ ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದವು. ಅದರಂತೆ ಟಕೀಲ ಸಾಂಗ್ ಕೂಡ ಸೂಪರ್ ಡೂಪರ್ ಹಿಟ್ ಆಗಿದೆ.ತಮ್ಮ ಟಾಕೀಲ ಹಾಡು 25 ಮಿಲಿಯನ್ ವೀಕ್ಷಣೆ ಪಡೆದ ಅಂಗವಾಗಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಲೈವ್ ಬಂದಿದ್ದ ಚಂದನ್ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು.


 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top