fbpx
ಸಮಾಚಾರ

ಈ ಕಾರಣಕ್ಕೆ ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ಉತ್ತರ ಕರ್ನಾಟಕದ ಯುವಕ

ಸಾಮಾನ್ಯವಾಗಿ ದೇಶದ ಪ್ರಜೆಗಳು ತಮ್ಮ ಸಮಸ್ಯೆಗಳನ್ನು ನಿವಾರಣೆ ಮಾಡಲು ಒತ್ತಾಯಿಸಿ ಪ್ರಧಾನಿಗಳಿಗೆ, ಅಧಿಕಾರಿಗಳಿಗೆ ಪತ್ರ ಬರೆಯುವು ಸಾಮಾನ್ಯ. ಆದರೆ ಇಲ್ಲೊಬ್ಬ ಯುವಕ ದೇಶದ ಪ್ರಧಾನಿಗೆ ತನ್ನ ರಕ್ತದಲ್ಲಿಯೇ ಪತ್ರವನ್ನು ಬರೆದಿದ್ದಾನೆ. ಅದೂ ಒಂದೆರಡು ಪುಟಗಳಲ್ಲ; ಬರೋಬ್ಬರಿ ಆರು ಪುಟಗಳು.

 

 

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ನಿವಾಸಿ ವಿಜಯರಂಜನ ಜೋಶಿ ಪ್ರಧಾನಿ ನರೇಂದ್ರ ಮೋದಿಗೆ ರಕ್ತದಲ್ಲಿ ಪತ್ರ ಬರೆದು ಇದೀಗ ಸುದ್ದಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

 

 

ನಾಲತವಾಡದಲ್ಲಿ ಸರ್ಕಾರಿ ಪ್ರೌಢಶಾಲೆ, ಕಾಲೇಜು ನಿರ್ಮಾಣ ಮಾಡುವಂತೆ ಶಿಕ್ಷಣ ಇಲಾಖೆಗೆ, ಶಿಕ್ಷಣ ಸಚಿವರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಹತ್ತಾರು ಹಳ್ಳಿಗಳಿಂದ ದೂರ ಹೋಗಿ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಕಲಿಯಲು ಆಗುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಬರಗಾಲ, ಬಡತನ ಇರುವುದರಿಂದ ಖಾಸಗಿ ಶಾಲೆಗಳಲ್ಲಿ ಓದಿಸುವಷ್ಟು ಆರ್ಥಿಕವಾಗಿ ಅಷ್ಟು ಶಕ್ತರಲ್ಲ. ಸರ್ಕಾರಿ ಶಾಲೆ ಇಲ್ಲದೆ, ಶಿಕ್ಷಣ ಸಿಗದ ಕಾರಣ ಬಾಲ್ಯ ವಿವಾಹಗಳು ಹೆಚ್ಚಳ ಆಗುತ್ತಿವೆ. ಎಂದು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ. ನನಗೆ ತುಂಬ ನೋವಾಗಿದೆ, ನೀವಾದರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತೀರಿ ಎಂಬ ನಂಬಿಕೆ ಮೇಲೆ ರಕ್ತದಲ್ಲೇ ಆರು ಪುಟಗಳ ಪತ್ರ ಬರೆದಿದ್ದೇನೆ ಎಂದು ನೋವು ತೋಡಿಕೊಂಡಿದ್ದಾರೆ.

 

 

ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಸ್ಥಳಿಯ ನಾಯಕರು ಹಾಗೂ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದವೇ ಆದರೆ ಯಾವುದೇ ಅಧಿಕಾರಿಗಳು ಕ್ರಮ ಕೈಗೊಂಡಿದಿಲ್ಲ. ನೀವು ನಮ್ಮ ಸಮಸ್ಯೆಗೆ ಸ್ಪಂದನೆ ಮಾಡುತ್ತೀರಿ ಎಂಬ ನಂಬಿಕೆ ಮೇಲೆ ಪತ್ರ ಬರೆದಿದ್ದೇನೆ. ದಯಮಾಡಿ ಗ್ರಾಮಕ್ಕೆ ಶಾಲೆ ಕಾಲೇಜುಗಳನ್ನು ಮಂಜೂರು ಮಾಡಿ, ಗ್ರಾಮದ ಅಭಿವೃದ್ಧಿಗೆ ಮುಂದಾಗಬೇಕು ಎಂದು ವಿಜಯರಂಜನ ಜೋಶಿ ಪ್ರಧಾನಿ​ ಮೋದಿಗೆ ಮನವಿ ಮಾಡಿದ್ದಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top