fbpx
ಸಮಾಚಾರ

ಸಲ್ಲು ಜೈಲಿನಿಂದ ಬರೋವರೆಗೂ ಏನು ಬೇಡ ಅಂತ ಅನ್ನ, ನೀರು ಬಿಟ್ಟಿರುವ 6 ವರ್ಷದ ಪುಟ್ಟ ಬಾಲಕಿ

ಇಪ್ಪತ್ತು ವರ್ಷಗಳ ಹಿಂದಿನ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೋಧಪುರ್ ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ. ಈ ಮೂಲಕ ಸಲ್ಮಾನ್ ಅವರ 2 ದಿನಗಳ ಜೈಲುವಾಸ ಅಂತ್ಯಗೊಂಡಿದ್ದು ಸಲ್ಮಾನ್ ಮೇಲೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿದ್ದ ನಿರ್ಮಾಪಕತ್ರು ಮತ್ತು ಅವರ ಕೋಟ್ಯಂತರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ..

 

 

ಮೊನ್ನೆಯಷ್ಟೇ ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 51ರ ಅಡಿ ಜೋಧಪುರ ಕೋರ್ಟ್ ಆತನಿಗೆ 5 ವರ್ಷಗಳ ಕಾಲ ಜೈಲು ಶಿಕ್ಷೆ ಜೊತೆಗೆ 1oಸಾವಿರ ರೂ.ದಂಡ ವಿಧಿಸಲಾಗಿತ್ತು. ಜೋಧಪುರದ ಸೆಶನ್ಸ್ ಕೋರ್ಟಿನಲ್ಲಿ ಜಾಮೀನಿಗಾಗಿ ಸಲ್ಲು ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನೆನ್ನೆ ನಡೆದಿದ್ದು ತೀರ್ಪನ್ನು ಇಂದಿಗೆ ಕೋರ್ಟ್ ಕಾಯ್ದಿರಿಸಿತ್ತು. ಅದರಂತೆ ಸಲ್ಮಾನ್ ಅವರಿಗೆ ಈಗ ಜಾಮೀನು ಲಭಿಸಿದೆ. 50,000 ರೂ.ಗಳ ವೈಯಕ್ತಿಕ ಬಾಂಡ್‌ ಹಾಗೂ 25,000 ರೂ.ಗಳ ಎರಡು ಭದ್ರತಾ ಬಾಂಡ್‌ಗಳ ಆಧಾರದಲ್ಲಿ ಸಲ್ಮಾನ್‌ಗೆ ಜಾಮೀನು ನೀಡಲಾಗಿದೆ.

 

 

ಇದಕ್ಕೂ ಮುನ್ನ ಸಲ್ಲುವನ್ನು ದೋಷಿಯೆಂದು ತೀರ್ಪು ನೀಡಿ ಜೈಲಿ ಶಿಕ್ಷೆಯನ್ನು ಪ್ರಕಟಿಸುತ್ತಿದ್ದಂತೆ ಅವರ ಅಭಿಮಾನಿಗಳನ್ನೂ ಒಳಗೊಂಡಂತೆ ಬಾಲಿವುಡ್ ಮಂದಿ ಆಘಾತಕ್ಕೊಳಗಾಗಿದ್ದರು. ತಮ್ಮ ನೆಚ್ಚಿನ ನಟ ಐದು ವರ್ಷಗಳ ಕಾಲ ಜೈಲಿನಲ್ಲಿರಬೇಕಾಗುತ್ತಲ್ಲಾ ಎಂದು ಕಂಗಾಲಾಗಿ ಸಲ್ಮಾನ್ ಪರವಾಗಿ ಅಭಿಯಾನ ಆರಂಭ ಮಾಡಿದ್ದರು. ಈ ಮಧ್ಯೆ ಅನಿಯ ಎಂಬ ಆರು ವರ್ಷದ ಪುಟ್ಟ ಬಾಲಕಿ ಸಲ್ಮಾನ್ ಖಾನ್ ಬಗ್ಗೆ ಅಳುತ್ತಾ ಮಾತನಾಡಿರುವ ವಿಡಿಯೋ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ ಆಕೆ ಸಲ್ಲು ಜೈಲಿನಿಂದ ಬರೋವರೆಗೂ ಅನ್ನ, ನೀರು ಏನು ಬೇಡ ಉಪವಾಸ ಮಾಡುತ್ತೇನೆ ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಮಾತಾಡಿದ್ದಾಳೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top