fbpx
ಸಮಾಚಾರ

ಡ್ರೈನೇಜ್ ಕಸ ಎತ್ತೋರಿಗೆ ಸಾಥ್ ನೀಡಿದ ನಟ ಕಿಶೋರ್: ಕೊಳೆತು ನಾರುವ ಮನಸ್ಥಿತಿಗಳ ನಡುವಲ್ಲೊಂದು ಮಾನವೀಯ ಕೆಲಸ!

ಮಲಹೊರುವ ಪದ್ಧತಿಯನ್ನು ಕಾನೂಪ್ರಕಾರವಾಗಿ ನಿಷೇಧ ಮಾಡಿದ್ದರೂ ಕೂಡಾ ಈವತ್ತಿಗೂ ಅದು ಭಾರತದೆಲ್ಲೆಡೆ ಚಾಲ್ತಿಯಲ್ಲಿದೆ. ಮಲದ ಗುಂಡಿಗಿಳಿಯುವ ಪೌರ ಕಾರ್ಮಿಕರು ಉಸಿರುಗಟ್ಟಿ ಸಾಯುವಂಥಾ ದಾರುಣ ಘಟನೆಗಳು ನಡೆದಾಗ ಮಾತ್ರವೇ ಈ ಬಗ್ಗೆ ದೇಶಾದಂತ ಚರ್ಚೆ ಆರಂಭವಾಗುತ್ತದೆ. ಬದುಕಿನ ಅನಿವಾರ್ಯತೆಗೆ ಬಿದ್ದು ಇಂಥಾ ಕೆಲಸವನ್ನು ಮಾಡುವ ಜನರ ಬಗ್ಗೆ ಅಸಹ್ಯ ಹೊಂದಿರುವ ಮಂದಿಯೂ ಒಂದಷ್ಟು ಭಾಷಣ ಬಜಾಯಿಸುತ್ತಾರೆ. ಆದರೆ ಮಲದ ಗುಂಡಿ ಮತ್ತು ಮಲ ಹೊರುವ ಜನರು ಇಂಥವರ ಕಣ್ಣಲ್ಲಿ ಅಸಹ್ಯವಾಗಿಯಷ್ಟೇ ಉಳಿದಿದ್ದಾರೆ!

 

 

ಆದರೆ ಇಂಥ ಮನಸ್ಥಿತಿಗಳ ನಡುವೆ ಪ್ರಸಿದ್ಧ ನಟರೊಬ್ಬರು ಸ್ವತಃ ಆ ಜನರ ಜೊತೆ ಸೇರಿಕೊಂಡಿ ಡ್ರೈನೇಜ್ ಕಸ ಎತ್ತೋ ಕೆಲಸಕ್ಕೆ ಮುಂದಾಗುತ್ತಾರೆಂದರೆ ಅದನ್ನು ನಂಬಲು ತುಸು ಕಷ್ಟವಾದೀತು. ಆದರೆ ನಟ ಕಿಶೋರ್ ಅವರು ಅಂಥಾ ಕೆಲಸವನ್ನು ಮಾಡಿದ್ದಾರೆ. ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ “Beautiful minds that joined in to clean the drain.. Shit brought out the best   ha ha… beating the discrimination shit out.. where hard work becomes the only religion’’  ಎಂದೂ ಬರೆದುಕೊಂಡಿದ್ದಾರೆ.

ಇದು ನಟ ಕಿಶೋರ್ ಅವರೊಳಗಿನ ಮಾನವೀಯತೆಗೆ ಹಿಡಿದ ಕೈಗನ್ನಡಿ. ಯಾಕೆಂದರೆ ಇಂಥಾ ಕೆಲಸಗಳನ್ನು ನಿಶೇಧಿಸೋದರ ಆಚೆಗೆ ಕಸ ಗುಡಿಸುವುದೂ ಸೇರಿದಂತೆ ನಾನಾ ಕೆಲಸ ಮಾಡುವವರಲ್ಲೊಂದು ಆತ್ಮಸ್ಥೈರ್ಯ ಮೂಡಿಸೋ ಕೆಲಸಗಳೂ ನಡೆಯಬೇಕಿದೆ. ಅದನ್ನು ಸ್ವತಃ ಕಿಶೋರ್ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

 

 

ಅದೇನೇ ಆದರ್ಶ ಅಂತಿದ್ದರೂ ಮಲದ ಗುಂಡಿಗಿಳಿಯುವವರನ್ನು ಮನುಷ್ಯರೇ ಅಲ್ಲ ಎಂಬಂತೆ ನೋಡುವ ದುಷ್ಟ ಮಡಿವಂತಿಕೆ ಬಹುತೇಕರಲ್ಲಿದೆ. ಅಂಥವರಿಗೆ ಆ ಕಲಸದ ಕಷ್ಟ, ಆ ಜನರು ಅನುಭವಿಸುವ ಅವಮಾನಗಳನ್ನು ಕನಸು ಮನಸಲ್ಲಿಯೂ ಆಲೋಚಿಸಿರುವುದಿಲ್ಲ. ಇಂಥಾ ವಾತಾವರಣದಲ್ಲಿ ಮಲ ಹೊರುವ ಪದ್ಧತಿಯನ್ನು ವಿರೋಧಿಸೋದು, ನಿಷೇಧಿಸೋದರ ಜೊತೆ ಜೊತೆಗೇ ಶತಮಾನಗಳಿಂದ ಆ ಅವಮಾನದ ಬೇಗುದಿಯಲ್ಲಿ ನರಳಿದ ಜನರೆದೆಯಲ್ಲಿ ಹೊಸಾ ಭರವಸೆ ಹುಟ್ಟಿಸುವಂಥಾ ಇಂಥಾ ಪ್ರಯತ್ನಗಳೂ ಅಭಿನಂದನಾರ್ಹ. ಮನಸಲ್ಲೇ ಮಡಿವಂತಿಕೆಯ ಮಲ ತುಂಬಿಕೊಂಡವರ ಮಡುವಿನಲ್ಲೇ ಕಿಶೋರ್ ಅವರಂಥಾ ಮನಸ್ಥಿತಿಗಳು ಹೆಚ್ಚಾಗಲಿ…

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top