fbpx
ಸಮಾಚಾರ

ಬರೋಬ್ಬರಿ ನೂರು ದಿನ ಚಮಕ್ ನೀಡಿದ ಗೋಲ್ಡನ್ ಸ್ಟಾರ್!

ಕನ್ನಡ ಚಿತ್ರರಂಗಕ್ಕೆ ಭರ್ಜರಿ ಯಶಸ್ಸಿನ ಮಹಾ ಪರ್ವವೊಂದು ಬೇಷರತ್ತಾಗಿ ಪುನರಾಗಮನವಾಯಿತಾ? ಹೀಗೊಂದು ಅಚ್ಚರಿಯ ಪ್ರಶ್ನೆ ಹುಟ್ಟಲು ಕಾರಣವಾಗಿರೋದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಚಮಕ್ ಚಿತ್ರದ ಭರ್ಜರಿ ಯಶಸ್ಸು! ಈ ಮೂಲಕ ಸಿಂಪಲ್ ಸುನಿ, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣರ ಕಾಂಬಿನೇಷನ್ ಮೋಡಿ ಮಾಡಿದೆ. ಈ ಮಾತಿಗೆ ಚಮಕ್ ಚಿತ್ರದ ಬಾಕ್ಸಾಫೀಸ್ ರಿಪೋರ್ಟ್ ಪಕ್ಕಾ ಸಾಕ್ಷಿ ಒದಗಿಸುತ್ತದೆ! ಚಮಕ್ ಚಿತ್ರ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಯಶಸ್ವೀ ನೂರು ದಿನಗಳನ್ನು ಪೂರೈಸಿದೆ.

 

 

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಕಾಂಭಿನೇಷನ್‌ನ ಈ ಚಿತ್ರದಲ್ಲಿ ಸಿಂಪಲ್ ಸುನಿ ನಾನಾ ಹೊಸತನಗಳ ಮೂಲಕ ಪ್ರೇಕ್ಷಕರಿಗೇ ಅಚ್ಚರಿಯ ಚಮಕ್ ನೀಡುವ ಮೂಲಕ ತಮ್ಮ ಯಶಸ್ವಿ ಚಿತ್ರಗಳ ಅಕೌಂಟಿಗೆ ಹೊಸ ಸೇರ್ಪಡೆ ಮಾಡಿಕೊಂಡಿದ್ದಾರೆ. ಲವ್ವು, ಮದುವೆ, ಬ್ರೇಕಪ್ಪು, ಒದ್ದಾಟ, ಕಡೆಗೆ ಒಂದಾಗೋದು – ಸಿನಿಮಾ ಕಥೆಗಳ ಮಾಮೂಲಿ ಫಾರ್ಮುಲಾ. ಇಂಥಾ ಸೂತ್ರಗಳಾಚೆಗೂ ಸಾಕಷ್ಟು ಸಿನಿಮಾಗಳು ಬಂದಿವೆ. ಅದರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರೋ ಚಿತ್ರಗಳದ್ದೇ ಮೇಲುಗೈ. ಅದೇ ರೀತಿಯಲ್ಲಿ ಗಣೇಶ್ ಅವರಿಗೆ ಒಪ್ಪುವಂಥ ಕಥಾ ಹಂದರದೊಂದಿಗೆ ತೆರೆ ಕಂಡಿರೋ ಮತ್ತೊಂದು ಸಿನಿಮಾ ಚಮಕ್!

 

 

ಯಶಸ್ವೀ ನಿರ್ದೇಶಕ ಸಿಂಪಲ್ ಸುನಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಟಿ.ಆರ್ ಚಂದ್ರಶೇಖರ್ ಬಂಡವಾಳ ಹಾಕಿದ್ದಾರೆ. ಗಣೇಶ್ ಮೊದಲ ಬಾರಿಗೆ ಸ್ತ್ರೀ ರೋಗ ತಜ್ಞನ ಪಾತ್ರದಲ್ಲಿ ನಟಿಸಿದ್ದು, ಚಿತ್ರದಲ್ಲಿ ಗಣೇಶ್ ಗೆ ನಾಯಕಿಯಾಗಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಚಿತ್ರಕ್ಕೆ ಬಂಡವಾಳ ಹೂಡಿದ್ದು ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದು ಸಂತೋಷ್ ರೈ ಪಾತಾಜೆ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಇಂದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ.ಮಾಲ್‌ನಲ್ಲಿ ನೆಡೆಯುವ ಶೋ ನೂರನೇ ದಿನದ ಶೋ ಆಗಲಿದ್ದು ಈ ಮಾಲ್‌ನಲ್ಲಿ ನೂರು ದಿನ ಓಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಚಮಕ್ ಪಾತ್ರವಾಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top