fbpx
ದೇವರು

ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ ಈ ಕೆಲಸವನ್ನು ಯಾವುದೇ ಕಾರಣಕ್ಕೂ ಮಾಡಬಾರ್ದು , ಮಾಡಿದ್ರೆ ಮನೆಗೆ ದರಿದ್ರ

ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ ಯಾವ ಕೆಲಸವನ್ನು ಮಾಡಬಾರದು ಎಂದು ನಿಮಗೆ ಗೊತ್ತೇ ? ಒಂದು ವೇಳೆ ಮಾಡಿದರೆ ಅದರಿಂದ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಯಾವುದು ಆ ಕೆಲಸ ?

 

 

ನಮ್ಮ ಸಂಪ್ರದಾಯದ ಆಚರಣೆಗಳಲ್ಲಿ ವೈಜ್ಞಾನಿಕ ಸತ್ಯಗಳಿರುವಂತಹ ಅದೆಷ್ಟೋ ವಿಷಯಗಳಿವೆ. ಸಂಪ್ರದಾಯವನ್ನು ತಿಳಿದವರು ಒಂದೇ ಆಚಾರದಲ್ಲಿ ಸದಾಚಾರದ ಅಂಶಗಳು ಇರಬಹುದು. ಹಾಗೆ ವೈಜ್ಞಾನಿಕವಾದ ಅಂಶಗಳು ಸಹ ಇರಬಹುದು ಎನ್ನುವ  ನಂಬಿಕೆ ಉಳ್ಳವರು ಇದ್ದಾರೆ.

ಅದೇ ಸಂಪ್ರದಾಯವನ್ನು ತಿಳಿಯದೇ ಇರುವವರು ಇಂತಹ ಆಚರಣೆಗಳನ್ನು ಅಸಡ್ಡೆಯಿಂದ  ಮೂಡನಂಬಿಕೆ ಎಂದು ತಳ್ಳಿ ಹಾಕುತ್ತಾರೆ. ಹಿಂದೂ ಸಂಪ್ರದಾಯಗಳಲ್ಲಿ ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನಗಳoದು  ಮನೆಯಲ್ಲಿ ಅನುಸರಿಸಬೇಕಾದ ಕ್ರಮಗಳು ಮತ್ತು ನಿಯಮಗಳ ಬಗ್ಗೆ ತಿಳಿದುಕೊಳ್ಳುವ ಕಾಳಜಿಯೂ ಅಂಥವರಿಗೆ ಇರುವುದಿಲ್ಲ. ನಮ್ಮ ಪೂರ್ವಜರು ಸಾಮಾನ್ಯವಾಗಿ ಹುಣ್ಣಿಮೆ ಮತ್ತು ಅಮಾವಾಸ್ಯೆ ದಿನಗಳಲ್ಲಿ ನಿಯಮಗಳನ್ನು ಮಾಡಿ ಹೋಗಿದ್ದಾರೆ.

 

 

ನೀವು ಸಹ ಕೇಳುತ್ತಾ ಇರುತ್ತಿರಿ .ನಿಮ್ಮ ಮನೆಯಲ್ಲಿ ಹಿರಿಯರು ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಂದು ಕೂದಲುಗಳನ್ನು ತೊಳೆಯಬಾರದು. ತಲೆಗೆ ಸ್ನಾನ  ಮಾಡಬಾರದು ಎಂದು ಹೇಳ್ತಾರೆ. ಅದು ಯಾಕೆ ಹೀಗೆ ? ಅಂತ ಕೇಳುವ ಗೋಜಿಗೆ ನಾವು ಹೋಗುವುದಿಲ್ಲ.

ಅಮಾವಾಸ್ಯೆಯ  ಭಕ್ತಿ ಎಂದು ಕೆಟ್ಟ ಶಕ್ತಿಗಳು, ರಜಾತಾಮಾತ್ಮಕತೆಯನ್ನು ಪ್ರೇರೇಪಿಸುವ ಶಕ್ತಿಗಳು  ಅಧಿಕವಾಗಿರುವುದರಿಂದ ವಾಯು ಮಂಡಲವು ಕಲುಷಿತವಾಗಿರುವುದು. ಹುಣ್ಣಿಮೆಯoದು ಕೆಟ್ಟ ಶಕ್ತಿಗಳ ಉಪಾಸನೆಯನ್ನು ಮಾಡುತ್ತವೆ. ಆದ್ದರಿಂದ ಅವೆರಡೂ ಬರುವ ರಚತಮಾತ್ಮಕ ಲಹರಿಗಳ ಪ್ರವಾಹವೂ ಹೆಚ್ಚಾಗತ್ತೆ. ಅಂದರೆ ಒಟ್ಟಿನಲ್ಲಿ ಎರಡು ದಿನದಲ್ಲಿ ವಾಯು ಮಂಡಲದಲ್ಲಿ ರಜತಮಾತ್ಮಕ ಲಹರಿಗಳು ಮತ್ತು ಕೆಟ್ಟ  ಶಕ್ತಿಗಳ ಕಾರ್ಯದಿಂದ ಜಾಗೃತವಾಗಿ ಇರುತ್ತವೆ.

 

 

ಆದ್ದರಿಂದ ಈ ಎರಡೂ ತಿಥಿಗಳಲ್ಲಿ ತಲೆಯ ಕೂದಲನ್ನು ತೊಳೆಯಬಾರದು ,ತೊಳೆದರೆ ತ್ರಾಸದಾಯಕ ಲಹರಿಗಳನ್ನು ಗ್ರಹಿಸುತ್ತೆ. ಸ್ತ್ರೀಯರಂತೆ ಪುರುಷರು ಸಹ ಕೂದಲುಗಳನ್ನು ಈ ಎರಡು ದಿನಗಳಲ್ಲಿ ತೊಳೆಯಬಾರದು . ಕಾರಣ ಈ ಎರಡು ದಿನಗಳಲ್ಲಿ ವಾಯುಮಂಡಲದಲ್ಲಿ ರಜತಮಾತ್ಮಕ ಲಹರಿಗಳು ನಮ್ಮ ಕಡೆಗೆ ಆಕರ್ಷಿಸ ಬಾರದೆಂದು.

ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನದಂದು ಕೂದಲನ್ನು ಕೆದರಿಕೊಂಡು ಮತ್ತು ಬಿಚ್ಚಿಕೊಂಡು ಎಲ್ಲೆಂದರಲ್ಲಿ ಓಡಾಡಬಾರದು ಎಂದು ಸಹ ಹೇಳುತ್ತಾರೆ. ಇನ್ನು ಕೂದಲುಗಳ ತುದಿಯಲ್ಲಿ ತೆರೆಯಲ್ಪಡುವ ಕೇಶ ಮಳಿಗೆಗಳಿಂದ ರಜಾತಮಾತ್ಮಕ ಲಹರಿಗಳು ಕೂದಲುಗಳಲ್ಲಿ ಸೇರಿಕೊಂಡು ಬುಡದಲ್ಲಿ ಘನೀ ಭವಿಸುತ್ತವೆ.ಇದರಿಂದ ಕೆಟ್ಟ ಶಕ್ತಿಗಳು ನಮ್ಮ ದೇಹವನ್ನು ಸೇರುತ್ತವೆ. ನಮ್ಮ ಆರೋಗ್ಯ ಕೆಡುತ್ತೆ. ಬದಲಿಗೆ ನಕಾರಾತ್ಮಕ ಶಕ್ತಿಯು ನಮ್ಮನ್ನು ಆವರಿಸುತ್ತವೆ.

 

 

ನಾವು ಮಾಡುವ ಯಾವುದೇ ಕೆಲಸದಲ್ಲಿಯೂ ಸಹ ಅನೇಕ ವಿಜ್ಞಗಳು ಎದುರಾಗುತ್ತವೆ. ಹಾಗಾಗಿ ಅಮಾವಾಸ್ಯೆ ಮತ್ತು ಪೌರ್ಣಮಿಯ ದಿನದಂದು ತಲೆ ಸ್ಥಾನ ಮಾಡಿ ಸಂಕಷ್ಟಕ್ಕೆ ಸಿಲುಕಬೇಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top