fbpx
ಐಪಿಎಲ್

ಐಪಿಎಲ್: ಮೊದಲ ಪಂದ್ಯದಲ್ಲಿ ರೋಚಕ ಜಯ ಗಳಿಸಿದ ಚೆನ್ನೈ ಸೂಪರ್ ಕಿಂಗ್ಸ್

2018ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಎರಡು ವರ್ಷಗಳ ನಿಷೇಧ ಶಿಕ್ಷೆ ಮುಗಿಸಿ ಮರಳಿರುವ ಸ್ಟಾರ್ ನಾಯಕ ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರೋಚಕ ಜಯ ಗಳಿಸಿದೆ. ಮುಂಬೈನ ವಾಖೆಂಡೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಡ್ವೇನ್ ಬ್ರಾವೋ ಬಿರುಸಿನ ಅರ್ಧಶತಕದ ನೆರವಿನಿಂದ ಚೆನ್ನೈ ತಂಡ ಒಂದು ವಿಕೆಟ್ ರೋಚಕ ಗೆಲವು ಸಾಧಿಸಿದೆ.

 

 

ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಮುಂಬಯಿ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ ಮುಂಬೈ ಪರ ಉತ್ತಮ ಬ್ಯಾಟಿಂಗ್ ನಡೆಸಿದ ಯುವ ಆಟಗಾರರಾದ ಇಶಾನ್ ಕಿಶನ್ (40), ಸೂರ್ಯಕುಮಾರ್​ ಯಾದವ್​ (43), ಕೃಣಾಲ್​ ಪಾಂಡ್ಯ (41) ಮತ್ತು ಹಾರ್ದಿಕ್​ ಪಾಂಡ್ಯ (21) ಅವರ ಉತ್ತಮ ಬ್ಯಾಟಿಂಗ್​ನಿಂದಾಗಿ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 165 ರನ್​ ಕಲೆ ಹಾಕಿತ್ತು. ಚೆನ್ನೈ ಪರ ಅನುಭವಿ ಬೌಲರ್ ಶೇನ್ ವಾಟ್ಸನ್ 2 ವಿಕೆಟ್ ಪಡೆದರು.

 

 

166 ರನ್’ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇನ್ನೊಂದೇ ಒಂದು ಎಸೆತ ಬಾಕಿ ಉಳಿದಿರುವಂತೆಯೇ 19.5 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 169 ರನ್​ ಗಳಿಸಿ ಗೆಲುವಿನ ಕೇಕೆ ಹಾಕಿತು. ಈ ಮೂಲಕ ಚೆನ್ನೈ ತಂಡ ಐಪಿಎಲ್​ 11ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ. ಒಂದು ಹಂತದಲ್ಲಿ ಸೋಲಿನ ಸುಲಿಗೆ ಸಿಲುಕಿದ್ದ ಚೆನ್ನೈ ತಂಡವನ್ನು ಗೆಲುವಿನತ್ತ ಕೊಂಡೊಯ್ದ ಡ್ವೇನ್ ಬ್ರಾವೋ ಕೇವಲ 30 ಎಸೆತಗಳಲ್ಲಿಯೇ 68 ರನ್ನಗಳನ್ನ ಗಳಿಸಿ ಗೆಲುವಿನ ರೂವಾರಿಯಾದರು. ಅವರ ಇನ್ನಿಂಗ್ಸ್ ನಲ್ಲಿ ೩ ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡಿತ್ತು. ಇವರಿಗೆ ಕೇದಾರ್​ ಜಾಧವ್​ (24), ಅಂಬಟಿ ರಾಯಿಡು (22), ಶೇನ್​ ವ್ಯಾಟ್ಸ್​ನ್​ (16) ಉತ್ತಮ ಸಾಥ್​ ನೀಡಿದರು.ಮುಂಬೈ ಪರ ಹಾರ್ದಿಕ್​ ಪಾಂಡ್ಯ 24 ಕ್ಕೆ 3 ಮತ್ತು ಮಯಾಂಕ್ ಮರ್ಕಾಂಡೆ 23 ಕ್ಕೆ 3 ವಿಕೆಟ್​ ಪಡೆದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top