fbpx
ಭವಿಷ್ಯ

ಈ 4 ರಾಶಿಯವರು ಅತಿ ಹೆಚ್ಚು ಆಕರ್ಷಿತರಾಗುತ್ತಾರೆ , ನೋಟದಲ್ಲೇ ಬೇರೆಯವರನ್ನು ವಶೀಕರಣ ಮಾಡುವಂತಹ ಶಕ್ತಿ ಇರುತ್ತೆ ,ನಿಮ್ಮ ರಾಶಿಯೂ ಇದ್ಯಾ ನೋಡ್ಕೊಳ್ಳಿ

ಯಾವ ಯಾವ ರಾಶಿಯವರು ಅತಿ ಹೆಚ್ಚು ಆಕರ್ಷಿತರಾಗಿ ಕಾಣುತ್ತಾರೆ ? ಅವರ ನೋಟದಲ್ಲೇ ಬೇರೆಯವರನ್ನು ವಶೀಕರಣ ಮಾಡುವಂತಹ ಶಕ್ತಿ ಅವರಿಗೆ ಇರುತ್ತದೆ ? ನೀವು ಕೂಡ ಆಕರ್ಷಿತವಾಗಿ ಇದ್ದೀರ ? ನಿಮ್ಮ ರಾಶಿಯೂ ಇದರಲ್ಲಿದೆಯೇ ಒಮ್ಮೆ ನೋಡಿಕೊಳ್ಳಿ.

 

 

ಕಣ್ಣಿನಲ್ಲಿ ಆಕರ್ಷಣೆಯನ್ನು ಮಾಡಿ ವಶೀಕರಣ ಮಾಡುವ ಶಕ್ತಿ ಈ ರಾಶಿಯವರಿಗೆ ಇರುತ್ತದೆ. ಯಾರ ಹೃದಯವನ್ನೂ ಬೇಕಾದರೂ ಗೆಲ್ಲುವಂತಹ ಶಕ್ತಿ ಇವರಲ್ಲಿ ಇರುತ್ತದೆ. ಈ ರಾಶಿಯವರ ಹೃದಯದಲ್ಲಿ  ಸ್ಥಳವನ್ನು ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಎಲ್ಲರೂ ಇವರನ್ನು ನೋಡಿದ ತಕ್ಷಣವೇ  ಇವರಿಗೆ ಆಕರ್ಷಿತರಾಗುತ್ತಾರೆ. ಯಾರೂ ಕೂಡ ಆಕರ್ಷಿತರಾಗದೆ ಇರಲು ಸಾಧ್ಯವೇ ಇರುವುದಿಲ್ಲ .

 

ವೃಷಭ, ಕಟಕ, ತುಲಾ ಮತ್ತು ಮಕರ ರಾಶಿ.

 

 

ಈ ನಾಲ್ಕು ರಾಶಿಯವರು  ಇವರ ಎದುರಿಗೆ ಇರುವವರನ್ನು ಸಂಪೂರ್ಣವಾದ ರೀತಿಯಲ್ಲಿ ಈ ರಾಶಿಯವರನ್ನು ನೋಡಿ ಆಕರ್ಷಿತರಾಗಿ ಹೋಗುತ್ತಾರೆ. ಇವರಲ್ಲಿ ಒಳ್ಳೆಯ ಗುಣ ಇರಲಿ, ಬಿಡಲಿ ಸದ್ಭಾವನೆ ಇರಲಿ, ದುರ್ಭಾವನೆ ಇರಲಿ, ಏನೇ ಆದರೂ ಸರಿ ಬೇರೆಯವರು ಇವರಿಗೆ ಬೇಗನೆ ಆಕರ್ಷಿತರಾಗುತ್ತಾರೆ . ಇವರ ಪ್ರಭಾವ ಯಾವ ಮಟ್ಟಿಗೆ ಇರುತ್ತದೆ ಎಂದರೆ ಇವರ ಮುಂದೆ ಇರುವವರು ಹಾಗೆಯೇ ಇವರನ್ನು ನೋಡುತ್ತಲೇ ಇದ್ದು ಬಿಡುತ್ತಾರೆ .

ಈ ರಾಶಿಯವರು ನೋಡುವುದಕ್ಕೆ ಸುಂದರವಾಗಿರುತ್ತಾರೆ, ಹಸನ್ಮುಖರಾಗಿರುತ್ತಾರೆ .ಇವರನ್ನು ಆಕರ್ಷಕರನ್ನಾಗಿ ಮಾಡುವ ಕಲೆ ಮತ್ತು ಪ್ರಕೃತಿ ಇವರಲ್ಲಿ ಇರುತ್ತದೆ. ಇವರು ಏನು ಮಾಡುವುದು ಬೇಕಿಲ್ಲ, ಇವರನ್ನು ಇವರ ರಾಶಿ ಮತ್ತು ಪ್ರಕೃತಿಯೇ ಆಕರ್ಷಿತರನ್ನಾಗಿ ಮಾಡಿ ಬಿಡುತ್ತದೆ . ಹೆಚ್ಚಿನ ಆಕರ್ಷಣೆ ಇವರ ನಗುವಿನಲ್ಲಿ ಇರುತ್ತದೆ . ಹಸನ್ಮುಖವಾಗಿರುವವರು ಪ್ರತಿಯೊಬ್ಬರನ್ನೂ ಮೆಚ್ಚಿಸುತ್ತಾರೆ.

 

 

ಒಂದು ವೇಳೆ ನೀವು ಈ ರಾಶಿಯವರು ಅಲ್ಲದೆ ಹೋದರು  ಪರವಾಗಿಲ್ಲ, ಯಾರ ಜನ್ಮ ಕುಂಡಲಿಯಲ್ಲಿ ಲಗ್ನ ಸ್ವಾಮಿಯು ಈ ರಾಶಿಯಲ್ಲಿ ಸ್ಥಿತರಿದ್ದರೂ, ಆಗಲೂ ಕೂಡ ಆ ವ್ಯಕ್ತಿಗಳಲ್ಲಿ ಈ ಗುಣಗಳು ಇರುತ್ತವೆ .ಯಾರನ್ನು ಬೇಕಾದರೂ ಇವರು ಆಕರ್ಷಿತರನ್ನಾಗಿ ಮಾಡುತ್ತಾರೆ.

ನಿಮ್ಮ ಜನ್ಮ ಜಾತಕದಲ್ಲಿ ಲಗ್ನ ಅಥವಾ ಲಗ್ನೇಶ ಸ್ವಾಮಿಯ ಕಟಕ ರಾಶಿಯಲ್ಲಿ, ತುಲಾ ರಾಶಿಯಲ್ಲಿ, ಮಕರ ರಾಶಿಯಲ್ಲಿ, ಅಥವಾ ವೃಷಭ ರಾಶಿಯಲ್ಲಿ ಸ್ಥಿತರಿದ್ದರೆ ನೀವು ಕೂಡ ಈ ಗುಣಗಳನ್ನು ಹೊಂದಿರುತ್ತೀರಿ. ಹಾಗೂ ಬೇರೆಯವರಿಗೆ ಆಕರ್ಷಿತರಾಗಿ ಕಾಣುತ್ತೀರಾ.

 

 

ಈ ಗುಣವನ್ನು ಪ್ರಕೃತಿಯೇ ಇವರಿಗೆ ನೀಡಿರುತ್ತದೆ. ಪ್ರಕೃತಿಯು ನಿಮಗೆ ಇಷ್ಟೊಂದು ಸದ್ಗುಣಗಳನ್ನು ನೀಡಿದೆ ಎಂದರೆ ಈ ಗುಣಗಳನ್ನು ತುಂಬಾ ಮೀಸಲಾಗಿ (reserve) ಇಟ್ಟುಕೊಳ್ಳಬೇಕು. ಅಂದರೆ ಕೆಲವೇ ಕೆಲವು ಜನರ ಜೊತೆ ಮಾತ್ರ ನೀವು ಮೀಸಲಾಗಿ ಇರಬೇಕು. ಒಂದು ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು .ನೀವು ಎಷ್ಟು ಸುಲಭವಾಗಿ, ಸರಾಗವಾಗಿ ಬೇರೆಯವರ ಜೊತೆ ಬೆರೆತು ಮುಂದೆ ಹೋಗುತ್ತೀರೋ, ಬೇರೆಯವರ  ಜೊತೆಯಲ್ಲಿ ಹೇಗೆ ನಡೆದುಕೊಳ್ಳುತ್ತೀರೋ  ಅದೇ ರೀತಿಯಲ್ಲಿಯೇ ನಿಮ್ಮ ಅದೃಷ್ಟವು ಕೂಡ ಚರಿತ್ರಹೀನ ವಾಗುತ್ತದೆ.

ಉದಾಹರಣೆಗೆ –

ನಟ ನಟಿಯರು ತುಂಬಾ ಅವರಿಗೆ ಅವರೇ ನಿಯಮ ಮತ್ತು ನಿಬಂಧನೆಗಳನ್ನು ಹಾಕಿಕೊಂಡಿರುತ್ತಾರೆ. ಅಂದರೆ ಅವರು ಯಾರನ್ನೂ ಕೂಡ ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಇವರೂ ಕೂಡ ಯಾರಿಗೂ ಹತ್ತಿರವಾಗುವುದಿಲ್ಲ. ಅವರು ಒಂದು ಷರತ್ತನ್ನು ವಿಧಿಸಿಕೊಂಡು ಇರುತ್ತಾರೆ . ಅವರಿಗೆ ಬೇಕಾಗಿರುವವರು ಕೆಲವೇ ಕೆಲವು ಜನರನ್ನು ಮಾತ್ರ ಅವರ ಹತ್ತಿರದಲ್ಲಿ ಸಂಪರ್ಕದಲ್ಲಿ ಇಟ್ಟುಕೊಳ್ಳುತ್ತಾರೆ. ಹಾಗೆಯೇ ನೀವು ಕೂಡ ಇರಬೇಕು.

ನೀವೇ ಬೇರೆಯವರಿಗೆ ಆಕರ್ಷಿತರಾಗಿ ಹೋದರೆ, ಆಗ ಆದು ನಿಮಗೆ ಕಂಟಕ. ಜಗಳ, ನೋವು, ಕಷ್ಟವನ್ನು ಅನೇಕ ನಿಂದನೆಗಳನ್ನು ಈ ಸಮಾಜದಲ್ಲಿ ಎದುರಿಸಬೇಕಾಗುತ್ತದೆ .

 

 

ನಿಮ್ಮಿಂದ ಜನರು, ನಿಮ್ಮತ್ತ ಜನರು ಆಕರ್ಷಿತರಾದರೆ ಒಳ್ಳೆಯದು. ಉತ್ತಮ ಅದೃಷ್ಟ ನಿಮ್ಮನ್ನು ಕೈ ಹಿಡಿಯುತ್ತದೆ. ಆದ್ದರಿಂದ ನಿಮ್ಮನ್ನು ನೀವೇ ತಡೆಗಟ್ಟಿ ನಿಲ್ಲಿಸಿ .ಇದರಿಂದ ಬಚಾವಾಗಿ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಿ. ಪ್ರಕೃತಿಯು ನಿಮಗೆ ಈ ವರದಾನವನ್ನು ನೀಡಿದೆ . ನಿಮ್ಮನ್ನು ನೀವೇ ಸಮಾಧಾನ ಪಡಿಸಿಕೊಂಡು ಮುಂದೆ ಸಾಗಿ. ನಿಮ್ಮ ಜೀವನದಲ್ಲಿ ಬೇಗನೆ ಉನ್ನತಿ ಲಭಿಸಲಿದೆ. ಅದೃಷ್ಟದ ಬಾಗಿಲು ತೆರೆಯುತ್ತದೆ.

ಪರಿಹಾರ .

ಏಳು ಹಸಿರು ಬಣ್ಣದ ಏಲಕ್ಕಿಯನ್ನು ತೆಗೆದುಕೊಂಡು ಒಂದು ಗುಲಾಬಿ ಬಣ್ಣದ ಅಂದರೆ ಪಿಂಕ್ ಕರವಸ್ತ್ರ ಕರ್ಚೀಫ್ ಆನ್ನು ತೆಗೆದುಕೊಂಡು ಅದರೊಳಗೆ ಈ ಏಳು ಸಣ್ಣ ಏಲಕ್ಕಿಯನ್ನು ಹಾಕಿ ಕಟ್ಟಿ. ಗಂಟು ಕಟ್ಟಿದ ನಂತರ ಅದರ ಮೇಲೆ ಒಂದು ತುಪ್ಪದ ದೀಪವನ್ನು 42 ಗಂಟೆಗಳ ಕಾಲ ಉರಿಸಿ. ಅದು ಯಾವುದೇ ಕಾರಣಕ್ಕೂ ಕೆಡಬಾರದು. 42 ಗಂಟೆಗಳು ಸತತವಾಗಿ ಉರಿಸಬೇಕು. ನಂತರ ದೀಪ ಸಂಪೂರ್ಣವಾಗಿ ಉರಿದ ಮೇಲೆ 42 ಗಂಟೆಗಳು ಕಳೆದ ಮೇಲೆ ಆ ಕರವಸ್ತ್ರವನ್ನು ತೆಗೆದುಕೊಂಡು ನಿಮ್ಮ ಪರ್ಸ್ ಅಥವಾ ನಿಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳಿ .

 

 

ಆಗ ಎಲ್ಲರೂ ನಿಮಗೆ ಆಕರ್ಷಿತರಾಗುತ್ತಾರೆ .ಎಲ್ಲರೂ ನಿಮ್ಮ ಹತ್ತಿರ ಬರುತ್ತಾರೆ .ಎಲ್ಲರೂ ನಿಮ್ಮಿಂದ ಪ್ರಭಾವಿತರಾಗುತ್ತಾರೆ .ಈ ಪರಿಹಾರವನ್ನು ಕೇವಲ ಈ ನಾಲ್ಕು ರಾಶಿಯವರಷ್ಟೇ ಅಲ್ಲದೇ ಇನ್ನುಳಿದ ರಾಶಿಯವರು ಸಹ ಮಾಡಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top