fbpx
ದೇವರು

ಮದುವೇಲಿ ವಧು ವರರ ತಲೆಯ ಮೇಲೆ ಅಕ್ಷತೆ ಯಾಕೆ ಹಾಕ್ತಾರೆ, ಪೂರ್ವಕಾಲದಲ್ಲಿ ಯಾರ ಕೈಯಿಂದ ಅಕ್ಷತೆ ಹಾಕ್ಸ್ತಿದ್ರು ಗೊತ್ತಾ

ಅಕ್ಷತೆಗಳು  ಎಂದರೆ ಏನು ? ಅವುಗಳನ್ನು ಮದುವೆಯ ಸಮಯದಲ್ಲಿ ವಧು ವರರ ತಲೆಯ ಮೇಲೆ ಯಾಕೆ ಹಾಕಿಸುತ್ತಾರೆ ? ಮತ್ತು  ಅಕ್ಷತೆಗಳನ್ನು ಪೂರ್ವ ಕಾಲದಲ್ಲಿ ಯಾರ ಕೈಯಿಂದ ಹಾಕಿಸುತ್ತಿದ್ದರು ಎಂದು ನಿಮಗೆ ಗೊತ್ತೇ ?

 

 

ಮದುವೆಯ ಸಮಯದಲ್ಲಿ ನಾವೆಲ್ಲರೂ ನೋಡಬಹುದಾಗಿದೆ. ತಾಳಿ ಕಟ್ಟಿದ ನಂತರ ಮುಹೂರ್ತದಲ್ಲಿ ಎಲ್ಲರ ಕೈಗೂ ಅಕ್ಷತೆ ಕಾಳನ್ನು ಹಾಕುತ್ತಾರೆ. ಎಲ್ಲರೂ ತಾವು  ನಿಂತಿರುವ ಜಾಗಗಳಿಂದಲೇ ಆಕ್ಷತೆಯನ್ನು ಎಸೆಯುತ್ತಾರೆ. ಅದು ಎಲ್ಲರ ತಲೆಯ ಮೇಲೆ ಬೀಳುತ್ತದೆ. ಆದರೆ ಇದು ತಪ್ಪು. ಅಕ್ಷತೆಗಳನ್ನು ಯಾರ ಕೈಯಲ್ಲಿ ಕೊಡಬೇಕು ? ಹೇಗೆ ಹಾಕಬೇಕು ? ಎನ್ನುವುದನ್ನು ನಮ್ಮ ಪೂರ್ವಜರು ಹಿಂದೆ ಅನುಸರಿಸಿ ಸಂಪ್ರದಾಯವಾಗಿ ಮಾಡಿ ಬಿಟ್ಟು ಹೋಗಿದ್ದಾರೆ. ಆದರೆ ಈಗ ಆ ಸಂಪ್ರದಾಯವನ್ನು ಯಾರೂ ? ಪಾಲಿಸುತ್ತಿಲ್ಲ . ಎಲ್ಲರೂ ಮರೆತು ಹೋಗಿದ್ದಾರೆ .ಆ ಸಂಪ್ರದಾಯದ ಬಗ್ಗೆ ನಾವು ಈಗ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ ಬನ್ನಿ

ಕ್ಷಯ ಎಂದರೆ ನಾಶವೆಂದು ಅರ್ಥ. ಅಕ್ಷಯ ಎಂದರೆ ನಾಶ ಇಲ್ಲದ್ದು ಎಂದು ಅರ್ಥ. ಕ್ಷಯವಾಗದಿರುವುದು ಅಕ್ಷಯವಾದದ್ದು ಪರಮಾತ್ಮ. ಪರಮಾತ್ಮನ ಜ್ಞಾನ ಅಕ್ಷಯವಾದುದು. ಅಕ್ಷಯವಾದ ಜ್ಞಾನದ ಗುರುತೇ ಅಕ್ಕಿಯಿಂದ ತಯಾರು ಮಾಡಿದ ಅಕ್ಷತೆಗಳು. ಅಕ್ಷತೆಗಳೆಂದರೆ ನಾಶವಿಲ್ಲದ ದೈವ ಜ್ಞಾನದಿಂದ ಕೂಡಿ ಕೊಂಡಿರುವುದು ಎಂದು ಅರ್ಥ.

 

 

ತಾಳಿ ಬೊಟ್ಟು ಕಟ್ಟಿದ ಕೂಡಲೇ ಪೂರ್ವಕಾಲದಲ್ಲಿ ವಧು ವರರಿಗೆ ಅಕ್ಷತೆಗಳನ್ನು ಇತರರಿಂದ ಅವರ ತಲೆಯ ಮೇಲೆ ಹಾಕಿಸುತ್ತಿದ್ದರು. ಇಲ್ಲಿಯವರೆಗೂ ಮದುಮಗ ಮಧುಮಗಳಾಗಿದ್ದ ನೀವು ಈಗಿನಿಂದ ಸತಿಪತಿಯರಾಗಿ ಅಥವಾ ಪತಿ ಪತ್ನಿಯರಾಗಿ ಬದಲಾಗಿದ್ದೀರಿ ಎಂದು, ಈಗಿನಿಂದ ನೀವು ಜ್ಞಾನ ಮಾರ್ಗದಲ್ಲಿ ಜ್ಞಾನಾಭಿವೃದ್ಧಿ ಮಾಡಿಕೊಳ್ಳಬೇಕೆಂದು ಅಕ್ಷತೆಗಳು ಹಾಕುತ್ತಿದ್ದರು.

ಪೂರ್ವ ಕಾಲದಲ್ಲಿ ಜ್ಞಾನ ನಿಷ್ಟಾಪರರಾಗಿ ಜ್ಞಾನಶಕ್ತಿ ಎಂಬ ಜ್ಞಾನಾಗ್ನಿ ಇರುವ ಯೋಗಿಗಳು ಮತ್ತು ಮಹರ್ಷಿಗಳನ್ನು ಮದುವೆಯ ದಿನ ಆಹ್ವಾನಿಸಿ ಅವರ ಕೈಯಿಂದ ಅಕ್ಷತೆಗಳನ್ನು ಹಾಕಿಸುತ್ತಿದ್ದರು. ಇತರರು ಯಾರೂ ಹಾಕುತ್ತಿರಲಿಲ್ಲ. ಹಾಗೆ ಮಾಡುವುದರಲ್ಲಿ ಜ್ಞಾನಿಗಳ ಯೋಗಿಗಳ ಹಸ್ತದಿಂದ ಹಾಕಲ್ಪಟ್ಟ ಅಕ್ಕಿ ಅಕ್ಷತೆಗಳಿಂದ ಜ್ಞಾನಶಕ್ತಿಯನ್ನು ಹೊಂದಿರುವವರಾಗಿ ಸತಿಪತಿಗಳ ಶಿರಸ್ಸನ್ನು ತಾಕಿ ಆ ಶಕ್ತಿ ಅವರ ತಲೆಯಲ್ಲಿ ಉಪದೇಶವಾಗುತ್ತದೆ. ಜ್ಞಾನಶಕ್ತಿ ಅಥವಾ ಜ್ಞಾನಾಗ್ನಿಯನ್ನು ದಾನವಾಗಿ ಹೊಂದುವುದೇ ಉಪದೇಶವೆಂದು ತಿಳಿದ ಹಿರಿಯರು. ಪೂರ್ವಕಾಲದಲ್ಲಿ ಜ್ಞಾನಾಗ್ನಿ ಇರುವ ಜ್ಞಾನಿಗಳು ಯೋಗಿಗಳ ಕೈಯಿಂದಲೇ ಅಕ್ಷತೆಗಳನ್ನು ಹಾಕಿಸುತ್ತಿದ್ದರು.

ಯೋಗಿಗಳಿಗೆ ಅಥವಾ ಮಹರ್ಷಿಗೆ ಹೊರತು  ಬೇರೆ ಯಾರಿಗೂ ಅಕ್ಷತೆಗಳನ್ನು ಕೊಡುತ್ತಿರಲಿಲ್ಲ . ಈಗಿನ ಕಾಲದಲ್ಲಿ ಅಕ್ಷತೆಗಳೆಂದರೆ ಏನೂ ? ಅವು ಯಾರ ಕೈಯಿಂದ ಹಾಕಿಸಬೇಕೆಂದು ? ತಿಳಿಯದೆ ಅವುಗಳ ಅರ್ಥ ಪ್ರಾಮುಖ್ಯತೆ ತಿಳಿಯದವರಿಗೆ ಎಲ್ಲರ ಕೈಯಿಂದಲೂ ಹಾಕಿಸುತ್ತಿದ್ದೇವೆ. ಅದು ಯಾರು ಯಾರಿಗೆ ಹಾಕುತ್ತಿದ್ದಾರೋ ?  ತಿಳಿಯದ ಸ್ಥಿತಿಯಲ್ಲಿ ಬಂದಿರುವ ಎಲ್ಲರ ನೆತ್ತಿಯ ಮೇಲೆ ಅಕ್ಷತೆಗಳು ಬೀಳುತ್ತಿವೆ.

 

 

ಈ ಲೆಕ್ಕದ ಪ್ರಕಾರ ಅಕ್ಷತೆಗಳು ಹಾಕುವ ಸಂಪ್ರದಾಯ ಇಂದಿನವರೆಗೂ ಉಳಿದುಕೊಂಡಿದ್ದರೂ ಅದರ ಅರ್ಥ ನೂರಕ್ಕೆ ನೂರರಷ್ಟು ನಶಿಸಿ ಹೋಗಿದೆ ಎಂದು ತಿಳಿಯಬೇಕು .ಎಲ್ಲಿಯಾದರೂ ಗುಡಿ, ಗೋಪುರಗಳ ಮೇಲೆ ಲಕ್ಷ್ಮೀ ದೇವಿ ಮತ್ತು ಭಗವಂತನಾದ  ವಿಷ್ಣುವಿಗೆ ಮದುವೆ ಮಾಡುವ ಸಂಘಟನೆ ಗೊಂಬೆಗಳ ರೂಪದಲ್ಲಿ ಇರುವುದು ನೋಡಿರುತ್ತೇವೆ. ಅಲ್ಲಿ ನಾರದರು, ತುಂಬುರರು ಮೊದಲಾದವರು ಪಕ್ಕದಲ್ಲಿ ನಿಂತಿರುವಾಗ ಒಬ್ಬನೇ ಒಬ್ಬ ಮಹರ್ಷಿ ಅವರಿಗೆ ಅಕ್ಷತೆಗಳು ಹಾಕುತ್ತಿರುವಂತೆ ಚಿತ್ರಿಸಿ ಪ್ರತಿಷ್ಠಾಪಿಸಿದರೂ ಅದರ ಅರ್ಥ  ತಿಳಿಯದಂತೆ ಹೋಗಿದೆ.

ಪುರಾತನ ಕಾಲದಲ್ಲಿ ತಯಾರಾದ ದೇವಾಲಯಗಳ ಮೇಲಾದರೂ ಒಬ್ಬರೇ ಅಕ್ಷತೆಗಳು ಹಾಕುವ ಸಂಪ್ರದಾಯ ಗೊಂಬೆಗಳ ರೂಪದಲ್ಲಿ ಉಳಿದಿರುವುದಕ್ಕೆ ಸಂತೋಷ ಪಡೋಣ.ಹಾಗೆಂದು ಸುಮ್ಮನೆ ಇರದೆ ಇದು ನಮ್ಮ ಸಂಪ್ರದಾಯವೆಂದು ಇತರರಿಗೆ ತಿಳಿಸಿ, ಇಂದೂ ಧರ್ಮ ಆಚರಣೆ ನಡೆಯುವಂತೆ ನೋಡಿಕೊಳ್ಳಬೇಕು. ಜ್ಞಾನವನ್ನು ಹೊಂದಿದ್ದ ಯೋಗಿಗಳ ಕೈಯಿಂದಲೇ ಅಕ್ಷತೆಗಳನ್ನು ಹಾಕಿಸಿ , ಅಲ್ಲಿಯವರೆಗೂ ಉಪದೇಶ ಇಲ್ಲದವರಿಗೆ ಅದೇ ಮೊದಲ ಉಪದೇಶವಾಗಿ ತಿಳಿಸೋಣ. ಮೊದಲೇ ಉಪನಯನ , ಉಪದೇಶ ಹೊಂದಿದವರಿಗೆ ಜ್ಞಾನಾಭಿವೃದ್ಧಿ ಉಂಟಾಗುವಂತೆ ಮಾಡೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top