fbpx
ವಿಶೇಷ

ಈ ಊರಲ್ಲಿ ಒಂದು ನಾಯಿ ಬೆಲೆ ಒಂದು ಕೋಟಿ ಅದಕ್ಕೆ ಹೇಳೋದು ನಾಯಿಗೂ ಒಂದು ಕಾಲ ಅಂತ

ಈ ಊರಲ್ಲಿ ಒಂದೊಂದು ನಾಯಿ ಬೆಲೆ ಒಂದೊಂದು ಕೋಟಿ ರೂಪಾಯಿ ನಂಬಕ್ಕೆ ಸ್ವಲ್ಪ ಕಷ್ಟ ಆದರೂ ಇದು ನಿಜ

 

 

ಗುಜರಾತ್ನ ಮೆಹಸಾನ ಎಂಬ ಊರಿನ ಪಂಚ್ ವೋಟ್ ಎಂಬ ಹಳ್ಳಿಯಲ್ಲಿ ಈಗ ಈ ನಾಯಿಗಳಂತೆ ಸುದ್ದಿ ಮೆಹಸಾನ ಊರಿನಲ್ಲಿ ಬೈಪಾಸ್ ನಿರ್ಮಾಣವಾದ ನಂತರ ಇಲ್ಲಿನ ಭೂಮಿಯ ಬೆಲೆ ಆಕಾಶಕ್ಕೆ ಏರಿದೆ ಹಾಗೆಯೇ ಇಲ್ಲಿ ಮುಂಚೆ ಒಂದು ನಾಯಿಗಳ ಟ್ರಸ್ಟ್ ಇತ್ತು .

ಈ ಟ್ರಸ್ಟಿನಲ್ಲಿ ಏನೇ ಆದಾಯ ಬಂದರೂ ಸಹ ಅದು ಆ ನಾಯಿಗಳಿಗೆ ಸೇರಬೇಕಿತ್ತು ಹೀಗಿರುವಾಗ ನಾಯಿಗಳಿಗೂ ಕೂಡ ಒಂದು ಕಾಲ ಬಂತು ಎಂಬ ಮಾತು ನಿಜ ಅನ್ನೋ ಹಾಗೆ ಆಗಿಹೋಗಿದೆ.

ಅಲ್ಲಿನ ಜಮೀನು ಭೂಮಿಯ ಬೆಲೆ 3 .5 ಕೋಟಿ ರೂಪಾಯಿ ಆ ಟ್ರಸ್ಟ್ ನಲ್ಲಿ ಒಟ್ಟು ಎಪ್ಪತ್ತು ನಾಯಿಗಳಿದ್ದು ಒಂದೊಂದು ನಾಯಿ ಕೂಡ ಕೋಟ್ಯಧೀಶ್ವರ ಒಂದೊಂದು ನಾಯಿ ಹೆಸರಲ್ಲಿ ಒಂದೊಂದು ಕೋಟಿ ರುಪಾಯಿ ಇದೆ , ಪ್ರತಿ ವರ್ಷ ಕೂಡ ಆ ಭೂಮಿಗೆ ಗುತ್ತಿಗೆ ತೆಗೆದುಕೊಳ್ಳುವುದಕ್ಕಾಗಿ ಹರಾಜು ಕೂಗಲಾಗುತ್ತದೆ ಆ ಹರಾಜಿನಲ್ಲಿ ಅತಿ ಹೆಚ್ಚು ಹಣಕ್ಕೆ ಹರಾಜು ಕೂಗಿದವರಿಗೆ ಭೂಮಿಯನ್ನು ಗುತ್ತಿಗೆಗೆ ನೀಡಲಾಗುತ್ತದೆ .

 

 

ಭೂಮಿಯ ಒಂದೊಂದು ಭಾಗಕ್ಕೆ ಲಕ್ಷಕ್ಕಿಂತಲೂ ಹೆಚ್ಚು ಬೆಲೆ ಬರುತ್ತಿದ್ದು ಆ ಎಲ್ಲಾ ಹಣದ ಸಂಪೂರ್ಣ ಒಡೆಯ ನಾಯಿಗಳೇ ಆಗಿರುತ್ತದೆ .

70 -80 ವರ್ಷಗಳ ಹಿಂದೆ ಆ ಭೂಮಿಯನ್ನು ಅಲ್ಲಿನ ಜನರೇ ಟ್ರಸ್ಟ್ಗೆ ದಾನ ಮಾಡಿದ್ದರು ಆದರೆ ಈಗ ಭೂಮಿಯ ಬೆಲೆ ಚಿನ್ನಕ್ಕಿಂತ ಹೆಚ್ಚಾಗಿದೆ ಆದರೂ ಸಹ ಮಾನವೀಯತೆ ಮೆರೆದ ಜನ ಆ ಭೂಮಿಯನ್ನು ವಾಪಸ್ಸು ಕೇಳಲು ಬರುತ್ತಿಲ್ಲ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top