fbpx
ವಿಶೇಷ

ಮದುವೆಯಾದ ಗಂಡ -ಹೆಂಡತಿ ಮಾತ್ರ ಈ ಕರುಣಾಜನಕ ಕಥೆ ಓದಿ , ನಿಮ್ಮ ಕಣ್ಣುಗಳಲ್ಲಿ ನೀರು ಬರದೇ ಇರೋದಿಲ್ಲ

ಕೆಲವು ಮದುವೆ ಸಂಬಂಧಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎಂದು ಹೇಳುತ್ತಾರೆ ಇದು ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ ಆದರೆ ಕೆಲವು ದಂಪತಿ ತಾವು ಸಾಯುವವರೆಗೂ ಜೊತೆಗಿದ್ದು ಆನಂದವಾಗಿ ಜೀವಿಸುತ್ತಾರೆ ಇನ್ನು ಕೆಲವರು ಜೊತೆಗೆ ಇರುತ್ತಾರೆ ಆದರೂ ಸಹ ಅವರಿಬ್ಬರ ಮಧ್ಯೆ ಒಳ್ಳೆಯ ಅಭಿಪ್ರಾಯ ಇರುವುದಿಲ್ಲ ಹೇಗೋ ಮದುವೆಯಾಗಿದ್ದೇವೆ ಒಟ್ಟಿಗೆ ಬದುಕಬೇಕು ಎಂದು ಭಾವಿಸಿ ಬದುಕುತ್ತಿರುತ್ತಾರೆ.

ಆದರೆ ಇಲ್ಲಿ ಒಂದು ವೃದ್ಧ ದಂಪತಿಯ ಕಥೆ ಕೇಳಿದರೆ ನಿಮ್ಮ ಕಣ್ಣು ತೇವವಾಗದೆ ಇರುವುದಿಲ್ಲ ಅವರ ಪ್ರೀತಿಯ ಈ ಕಥೆಯನ್ನು ಅವರ ಬಾಯಿಂದಲೇ ಕೇಳಿ

ನಾನು ಹುಟ್ಟಿದ್ದು ಗುಜರಾತ್ನ ನವಸಾರಿ ಎಂಬ ಊರಿನಲ್ಲಿ ನನ್ನ ತಂದೆ ತಾಯಿಗೆ ಚಿಕ್ಕವರಿದ್ದಾಗಲೇ ಡೈವೋರ್ಸ್ ಆಗಿತ್ತು ಆದ ಕಾರಣದಿಂದಲೇ ನನ್ನ ಚಿಕ್ಕಮ್ಮ ನನ್ನನ್ನು ಸಾಕಿ ಬೆಳೆಸಿದರು ಆ ನಂತರ ಆಕೆ ಸತ್ತು ಹೋದ ಬಳಿಕ ಪಕ್ಕದ ಮನೆಯವರು ನನ್ನನ್ನು ಸಾಕಿ ಸಲುಹಿದರು ,ನನ್ನ ಪಕ್ಕದ ಮನೆಯ ಹುಡುಗಿ ಆಕೆಯ ಹೆಸರು ನರ್ಗೀಸ್ ನಾನು ಆಕೆ ಒಟ್ಟಿಗೆ ಆಡಿ ಬೆಳೆದವರು ಆಕೆ ಮತ್ತು ನನ್ನ ನಡುವಿನ ಅನ್ಯೋನ್ಯ ಭಾವ ಚಿಕ್ಕವರಿಂದಲೂ ಜೊತೆಗೇ ಇತ್ತು .

 

 

ಆದರೆ ಆಕೆಗೆ ತನ್ನನ್ನು ಬಹಳವಾಗಿ ಅರ್ಥ ಮಾಡಿಕೊಳ್ಳುವ ಸಂಗಾತಿ ಬೇಕಾಗಿತ್ತು ನನಗೆ ಆ ಸಂಗತಿ ನಾನೇನಾ ಎನ್ನುವ ಕಲ್ಪನೆ ಕೂಡ ಇರಲಿಲ್ಲ
ಹೀಗೆ ಆಕೆ ಮದುವೆ ವಯಸ್ಸಿಗೆ ಬಂದಾಗಿನಿಂದ ಆಕೆಗೆ ಮದುವೆ ಮಾಡಿಕೊಳ್ಳಲು ಬಹಳವಾಗಿ ಆಕೆಯ ತಂದೆ ತಾಯಿ ಒತ್ತಡವನ್ನು ಏರುತ್ತಿದ್ದರೂ ಒಂದು ದಿನ ನಾನು ಮತ್ತು ಆಕೆ ಬೈಕ್ನಲ್ಲಿ ಹೋಗುತ್ತಿದ್ದೆವು ಆಗ ಆಕೆ ಮದುವೆ ಪ್ರೀತಿ ಈ ರೀತಿಯ ವಿಷಯಗಳ ಬಗ್ಗೆ ಮಾತಾಡುತ್ತಿದ್ದಳು ನನಗೆ ಏನನ್ನಿಸುತ್ತೋ ಏನೋ ನನಗೆ ಗೊತ್ತಾಗಲಿಲ್ಲ ಆಕೆಯನ್ನು ತಕ್ಷಣ ನನ್ನನ್ನು ಮದುವೆಯಾಗುತ್ತೀಯಾ ಎಂದು ಧೈರ್ಯ ಮಾಡಿ ಕೇಳಿಬಿಟ್ಟೆ .

ಆಕೆಯ ಜೊತೆ ಮದುವೆ ಬಗ್ಗೆ ನಾನು ಈ ಮುಂಚೆ ಯಾವತ್ತೂ ಯೋಚನೆ ಮಾಡಿರಲಿಲ್ಲ ಆದರೆ ಅವತ್ತು ಏನಾಗಿತ್ತೋ ಏನೋ ಧೈರ್ಯ ಮಾಡಿ ಕೇಳೇಬಿಟ್ಟೆ ಆಕೆಯ ಜೊತೆ ನಾನು ಜೀವನದ ಕೊನೆಯ ಗಳಿಗೆಯವರೆಗೂ ಇರಬೇಕು ಎಂದು ಬಯಸಿದ್ದೆ .

 

 

ಆಕೆ ಈ ಉತ್ತರವನ್ನು ನನ್ನಿಂದ ನಿರೀಕ್ಷೆ ಮಾಡಲಿಲ್ಲ ಒಂದು ನಿಮಿಷ ಶಾಕ್ ನಂತರ ನನ್ನ ಮುಖವನ್ನು ನೇರವಾಗಿ ನೋಡಿ ಒಪ್ಪಿಗೆ ಕೊಟ್ಟಳು ಆ ದಿನ ನನ್ನ ಜೀವನದಲ್ಲಿ ಬಹಳ ಮಹತ್ವವಾದದ್ದು ಮದುವೆ ಆಯ್ತು ಆ ನಂತರ ನಾವು ಮುಂಬೈಗೆ ನಮ್ಮ ಕುಟುಂಬವನ್ನು ವರ್ಗಾಯಿಸಿದೆವು ಆಕೆ ನನ್ನ ಮನೆಯನ್ನು ಬಹಳ ಸುಂದರವಾಗಿ ಇಟ್ಟುಕೊಳ್ಳುತ್ತಿದ್ದರು .

ನಾನು ಏರ್ ಇಂಡಿಯಾದಲ್ಲಿ ಏರೋನಾಟಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನನಗೆ ಆಕೆಯ ಜೊತೆ ಕಳೆಯಲು ಸಮಯವೇ ಸಿಗುತ್ತಿರಲಿಲ್ಲ ಆದರೆ ಆಕೆ ಮನೆಯನ್ನು ನಿಭಾಯಿಸಿದ ರೀತಿ ಬಹಳ ಚೆನ್ನಾಗಿತ್ತು, ಆಕೆ ತನ್ನ ಇತರ ಅಭ್ಯಾಸಗಳು, ಮಕ್ಕಳನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಂಡು ಬಂದಳು .

ನಾವಿಬ್ಬರೂ ಪ್ರಪಂಚದಾದ್ಯಂತ ಅನೇಕ ಸ್ಥಳಗಳಿಗೆ ಪ್ರವಾಸ ಕೂಡ ಹೋಗಿದ್ದೆವು ಆ ದಿನಗಳನ್ನು ನೆನೆಸಿಕೊಂಡರೆ ಮನಸ್ಸೆಲ್ಲ ರೋಮಾಂಚನ ,ನಮ್ಮ ವೃತ್ತಿಜೀವನದಲ್ಲಿ ಆಕೆ ನನ್ನ ಬೆನ್ನೆಲುಬಾಗಿ ನಿಂತಿದ್ದು ಈಗಲೂ ಮರೆಯಲು ಸಾಧ್ಯವಿಲ್ಲ ಆಕೆಗೆ ನನ್ನ ಹೃದಯದಲ್ಲಿ ಒಂದು ವಿಶೇಷ ಸ್ಥಾನವಿದೆ ನನ್ನಜೀವನವನ್ನು ಸಂಪೂರ್ಣವಾಗಿ ಅನುಭವಿಸಲು ಆಕೆ ಅವಕಾಶ ಮಾಡಿಕೊಟ್ಟಿದ್ದಳು .

ಮಕ್ಕಳಿಗೆ ಮದುವೆ ಆಯ್ತು ಅವರು ಒಳ್ಳೆಯ ವೃತ್ತಿಯಲ್ಲಿ ಇದ್ದರೂ ನಾವಿಬ್ಬರೂ ನಮ್ಮ ರಿಟೈರ್ಮೆಂಟ್ ಜೀವನವನ್ನು ಎಂಜಾಯ್ ಮಾಡಲು ಕಲಿತಿದ್ದೆವು ಆ ಕ್ಷಣದಲ್ಲಿ ನಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ನಾವು ಮಾಡಿಕೊಂಡಿದ್ದೆವು.

 

 

ನಾವಿಬ್ಬರು ಒಟ್ಟೊಟ್ಟಿಗೆ ಊಟ ಮಾಡುತ್ತಿದ್ದೆವು , ಒಟ್ಟಿಗೆ ಮಲಗುತ್ತಿದ್ದವು, ಒಟ್ಟಿಗೇ ಓದುತ್ತಿದ್ದೆವು ಹೀಗೆ ಅನೇಕ ಕೆಲಸಗಳನ್ನು ಒಟ್ಟೊಟ್ಟಿಗೆ ಮಾಡುತ್ತಿದ್ದೆವು ಹಾಗೆಯೇ ಮಲಗುವ ಮುನ್ನ ಆಕೆಯ ಜೊತೆ ಮಾತಾಡಿ ಹಣೆಗೆ ಒಂದು ಮುತ್ತು ಕೊಡುವ ಹವ್ಯಾಸ ಕೂಡ ಇತ್ತು ಒಂದು ದಿನ ಆಕೆ ತನ್ನ ರೂಮಿನ ಒಳಗೆ ಮಲಗಿದ್ದಳು ನಾನು ಒಂದೆರಡು ನಿಮಿಷ ತಡವಾಗಿ ರೂಮಿನ ಒಳಗೆ ಹೋದೆ ಆಕೆಯನ್ನು ಮಾತನಾಡಿಸಲು ಪ್ರಯತ್ನಪಟ್ಟೆ ಆದರೆ ಆಕೆ ಮಾತಾಡಲಿಲ್ಲ ನನಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ .

ಆಕೆ ಉಸಿರಾಡುತ್ತಿರಲಿಲ್ಲ ಆ ನಂತರ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಅವರು ಹೃದಯವನ್ನು ಪಂಪ್ ಮಾಡುವ ಮೂಲಕ ಆಕೆಗೆ ಮರು ಉಸಿರು ನೀಡಿದರು ಆದರೆ ಡಾಕ್ಟರ್ ಗಳು ಆಕೆಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಹೇಳಿದರೂ ನನಗೆ ಜಗತ್ತೇ ಕುಸಿದಂತೆ ಆಯಿತು .

ಎರಡು ದಿನಗಳ ಕಾಲ ವಿವಿಧ ಬಗೆಯ ಟೆಸ್ಟ್ ಗಳನ್ನು ಮಾಡಿಸಲಾಯಿತು ಆ ನಂತರ ಇಡೀ ಕುಟುಂಬವೇ ಆಕೆಗೆ ಶೀಘ್ರವಾಗಿ ಗುಣಮುಖವಾಗಲಿ ಎಂದು ಬೇಡಿಕೊಳ್ಳುತ್ತಿದ್ದರೂ ಆಕೆಯ ಆಸ್ಪತ್ರೆಯ ಬೆಡ್ ಸುತ್ತಲೇ ಎಲ್ಲರೂ ನಿಂತುಕೊಂಡು ಆಕೆಯನ್ನೇ ದಿಟ್ಟಿಸಿ ನೋಡುತ್ತಿದ್ದರು.

 

 

ಇದಾದ ಬಳಿಕ ಆ ದಿನ ಭಾನುವಾರ ಡಾಕ್ಟರ್ ಗಳು ಆಕೆಯ ಮಿದುಳು ನಿಷ್ಕ್ರಿಯಗೊಂಡಿರುವುದನ್ನು ಖಾತರಿ ಪಡಿಸಿದ್ದರು ಹಾಗೂ ವೆಂಟಿಲೇಟರ್ನ ಪ್ಲಗ್ ಹೊರಗೆ ತೆಗೆಯುವುದೇ ಇಲ್ಲವೇ ನಿಮ್ಮ ಅನುಮತಿ ಬೇಕು ಎಂದು ನನ್ನನ್ನು ಕೇಳಿಕೊಂಡರು ಆಗ ನಾನು ಗೋಳೋ ಎಂದು ಅಳುತ್ತಾ ಚಿಕ್ಕ ಮಗುನಂತಿದ್ದ ಆಕೆಯನ್ನು ನೋಡುತ್ತಾ ನಿಂತೆ .

ಆಕೆಯನ್ನು ಜೀವಂತ ಶವವಾಗಿ ನೋಡುವುದಕ್ಕಿಂತ ಆಕೆ ಪರಮಾತ್ಮನಲ್ಲಿ ಲೀನವಾಗಲಿ ಎಂದು ನಾನು ಭಾವಿಸಿದ್ದೆ ಅದಾದ ನಂತರ ನಾನು ಡಾಕ್ಟರುಗಳಿಗೆ ಪ್ಲಗ್ ತೆಗೆಯಲು ಹೇಳಿದೆ ಆಕೆ ಎಂಟು ಗಂಟೆಗಳ ಕಾಲ ಬದುಕಿದ್ದಳು ಅದು ವೆಂಟಿಲೇಟರ್ ಇಲ್ಲದೇ ಆ ಸಮಯದಲ್ಲಿ ನಾನು ಆಕೆಯನ್ನು ಒಂದು ಕ್ಷಣ ಕೂಡ ಬಿಟ್ಟಿರಲಿಲ್ಲ , ಆಕೆಯ ಕಿವಿಯಲ್ಲಿ ನಾನು ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ಹೇಳಿದೆ ಅದೇ ನನ್ನ ಕೊನೆಯ ಮಾತು ಆಕೆಯ ಉಸಿರು ನಿಂತುಹೋಗಿತ್ತು , ಈ ಘಟನೆ ನಡೆದದ್ದು 2014ರಲ್ಲಿ .

 

 

ನಾವಿಬ್ಬರೂ ಅರುವತ್ತು ವರ್ಷಗಳ ಕಾಲ ಒಟ್ಟಿಗೆ ಬದುಕಿದ್ದೆವು , ನಮ್ಮ ಸಂಬಂಧದಲ್ಲಿ ಅನೇಕ ಒಳ್ಳೊಳ್ಳೆಯ ನೆನಪುಗಳನ್ನು ಹಾಗೆಯೇ ಇಟ್ಟಿದ್ದೇವೆ ನಮ್ಮಿಬ್ಬರ ಪ್ರೀತಿ ಇಂದು ನಾವು ನಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳಲ್ಲಿ ಕಾಣುತ್ತಿದ್ದೇವೆ, ಆಕೆ ದೈಹಿಕವಾಗಿ ನಮ್ಮನ್ನು ಅಗಲಿರಬಹುದು ನನ್ನ ಮನಸ್ಸಿನಲ್ಲಿ ಆಕೆ ಯಾವಾಗಲೂ ಶಾಶ್ವತವಾಗಿ ಇರುತ್ತಾಳೆ .

ಆಕೆಯನ್ನು ನಾನು ಮೊದಲ ದಿನ ಹೇಗೆ ಪ್ರೀತಿ ಮಾಡಿದೆನೋ ಇಂದಿಗೂ ಸಹ ಹಾಗೆಯೇ ಪ್ರೀತಿ ಮಾಡುತ್ತೇನೆ !

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top