fbpx
ಆರೋಗ್ಯ

ಅಧಿಕ ರಕ್ತದೊತ್ತಡವನ್ನು ಕಡಿಮೆಮಾಡಲು ಈ ಆಹಾರಗಳ ಸೇವನೆ ಕಡಿಮೆ ಮಾಡಿ

ಸುಮಾರು ಮೂರರಲ್ಲಿ ಒಂದು ಮಗು ಅಧಿಕ ರಕ್ತದೊತ್ತಡದೊಂದಿಗೆ ಬಳಲುತ್ತಿರುತ್ತದೆ ಅದಕ್ಕಾಗಿಯೇ ಅಧಿಕ ರಕ್ತದೊತ್ತಡವನ್ನು ಕಡಿಮೆಮಾಡುವ ಆಹಾರದ ಶಿಫಾರಸುಗಳು ಈ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ.

ಅಧಿಕ ರಕ್ತದೊತ್ತಡಕ್ಕೆ ಕಾರಣವೇನು? ಸಾಧಾರಣವಾಗಿ ಸಾಕಷ್ಟು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸದೆ ಹೆಚ್ಚಿನ ಸೋಡಿಯಂ ಮತ್ತು ಪೊಟ್ಯಾಸಿಯಮ್ ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಉಂಟಾಗುತ್ತದೆ ಆದ್ದರಿಂದ ಅಧಿಕ ರಕ್ತದೊತ್ತಡವನ್ನು, ಕಡಿಮೆಮಾಡಲು ಸೋಡಿಯಂ ಮತ್ತು ಕೊಬ್ಬುಗಳಿಂದ ಕೂಡಿದ ಆಹಾರವನ್ನು ಕಡಿಮೆ ಸೇವಿಸಿ.

1. ಉಪ್ಪಿನಕಾಯಿ ಕಡಿಮೆ ಸೇವಿಸಿ

 

ಉಪ್ಪಿನಕಾಯಿಯಲ್ಲಿ ಕ್ಯಾಲೋರಿ ಮತ್ತು ಕೊಬ್ಬು ಕಡಿಮೆ ಪ್ರಮಾಣದಲ್ಲಿರುತ್ತವೆ, ಮತ್ತು ವಿಟಮಿನ್ “ಕೆ” ಹೆಚ್ಚಿನ ಪ್ರಮಾಣದಲ್ಲಿರುತ್ತವೆ, ಇದು ಗಾಯದ ನಂತರ ನಿಮ್ಮ ರಕ್ತ ಹೆಪ್ಪುವಿಕೇಗೆ ಸಹಾಯ ಮಾಡುತ್ತದೆ. ಆದರೆ ಉಪ್ಪಿನಕಾಯಿಯಲ್ಲಿ ಸೋಡಿಯಂ ಜಾಸ್ತಿ ಇದೆ , ಉಪ್ಪಿನಕಾಯಿ 570mg ಕ್ಕಿಂತ ಹೆಚ್ಚು ಸೋಡಿಯಂ ಅನ್ನು ಹೊಂದಿರುತ್ತದೆ. ಆದ್ದರಿಂದ ನೀವು ಅಧಿಕ ರಕ್ತದೊತ್ತಡವನ್ನು ಹೊಂದಿದ್ದರೆ, ನಿಮ್ಮ ಉಪ್ಪಿನಕಾಯಿ ಸೇವನೆಯನ್ನು ಮಿತಿಗೊಳಿಸಿ.

2.ಹಾಲು ಕಡಿಮೆ ಸೇವಿಸಿ

ನೀವು ಸ್ನಾಯುವನ್ನು ಗಟ್ಟಿಯಾಗಿಡಲು ಪ್ರಯತ್ನಿಸುತಿದ್ದರೆ,ಹಾಲು ಅತ್ಯುತ್ತಮ ಆಯ್ಕೆಯಾಗಿದೆ, ಇದು ನಿಮಗೆ ಬೇಕಾದಷ್ಟು ಕೊಬ್ಬು ಒದಗಿಸುತ್ತದೆ, ಹಾಲಿನ ಸೇವನೆಯು ಒಂದು ಲೋಟ ಹಾಲಿನಲ್ಲಿ 8 ಗ್ರಾಂ ಕೊಬ್ಬು ಇರುತ್ತದೆ. ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ಸ್ಯಾಚುರೇಟೆಡ್ ಕೊಬ್ಬುಗಳನ್ನು ಒಳಗೊಂಡಿರುವ ಸಂಪೂರ್ಣ ಹಾಲು ನಿಮಗೆ ಕೆಟ್ಟದು ಮತ್ತು ಹೃದ್ರೋಗಕ್ಕೆ , ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.

3 . ಡೊನಟ್ಸ್ ಸೇವನೆ ಬೇಡ

ಜನರು ಸಿಹಿ ರುಚಿಗೆ ಡೋನಟ್ಗಳನ್ನು ಇಷ್ಟಪಡುತ್ತಾರೆ, ಆದರೆ ಅದು ನಿಮ್ಮ ಆರೋಗ್ಯಕ್ಕೆ ಉತ್ತಮವಲ್ಲ. ಒಂದು ಡೋನಟ್ 300 ಕ್ಕೂ ಹೆಚ್ಚು ಕ್ಯಾಲೊರಿಗಳನ್ನು ಮತ್ತು 12 ಗ್ರಾಂ ಕೊಬ್ಬು ಹೊಂದಿರುತ್ತದೆ, ಇದು ನಿಮ್ಮ ಹೃದಯ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ.

4. ನೂಡಲ್ಸ್ ಸೇವನೆ ಬೇಡ

ನೂಡಲ್ಸ್ ಪ್ರಪಂಚದಾದ್ಯಂತ ಜನಪ್ರಿಯವಾಗಿವೆ ಆದರೆ ನೂಡಲ್ಸ್ ಸೇವನೆ ಆರೋಗ್ಯಕ್ಕೆ ಕೆಟ್ಟದು, ಅದರಲ್ಲಿ ಪೋಷಕಾಂಶಗಳ ಕೊರತೆ ಮತ್ತು ಅನಾರೋಗ್ಯಕರ ಘಟಕಗಳನ್ನು ಹೊಂದಿದೆ ಒಂದು ಪ್ಯಾಕೇಜ್ ನೂಡಲ್ಸ್ನಲ್ಲಿ ಸ್ಯಾಚುರೇಟೆಡ್ ಕೊಬ್ಬು 6 ಗ್ರಾಂ ಮತ್ತು ಸೋಡಿಯಂ 1731 ಗ್ರಾಂ ಇರುತ್ತದೆ, ಆದ್ದರಿಂದ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಅಧಿಕ ರಕ್ತದೊತ್ತಡದಿಂದ ಪಾರಾಗಲು ನೂಡಲ್ಸ್ ಸೇವನೆ ಬೇಡ.

5 . ಮದ್ಯಪಾನ ಸೇವನೆ ತಪ್ಪಿಸಿ:

ಹೆಚ್ಚು ಆಲ್ಕೋಹಾಲ್ ಸೇವಿಸುವುದರಿಂದ ಅನಾರೋಗ್ಯದ ಮಟ್ಟ ಜಾಸ್ತಿಯಾಗಿ ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಆಲ್ಕೊಹಾಲ್ ರಕ್ತನಾಳಗಳ ಗೋಡೆಗಳನ್ನು ಹಾನಿಗೊಳಿಸುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವವರು ಮದ್ಯಪಾನವನ್ನು ಸಂಪೂರ್ಣವಾಗಿ ತಪ್ಪಿಸಿ ಅಥವಾ ಮಿತವಾಗಿ ಸೇವಿಸಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top