ವಿಶೇಷ

ಮನುಷ್ಯ ಬಂಗಲೆ ಮೇಲೆ ಬಂಗಲೆ ಕಟ್ಕೊಂಡು ಹಾಯಾಗಿದ್ರೆ ಈ ಊರಲ್ಲಿ ಹಾವಿನ ಹುತ್ತದಲ್ಲಿ ಸಾವಿರಾರು ವರ್ಷಗಳಿಂದ ಬದುಕುತ್ತ ಇರೋರ್ನ ನೋಡಿದ್ರೆ ಆಶ್ಚರ್ಯ ಆಗುತ್ತೆ

ನೋಡುವುದಕ್ಕೆ ಹಾವಿನ ಹುತ್ತದ ಹಾಗೆಯೇ ಇದೆ. ಆದರೆ ಇವು ಹಾವಿನ ಹುತ್ತಗಳು ಅಲ್ಲ. ಥೇಟ್ ಹಾವಿನ ಹುತ್ತದ ರೀತಿಯಲ್ಲಿಯೇ  ಇರುವ ಮನೆ. ನೋಡುವುದಕ್ಕೆ ವಿಚಿತ್ರವಾಗಿ, ವಿಭಿನ್ನವಾಗಿ ಇರುವ ಈ ಹುತ್ತಗಳಲ್ಲಿ ಮನುಷ್ಯರು ಹೇಗೆ ಬದುಕುತ್ತಿದ್ದಾರೆ ಎಂದು ಅಂದುಕೊಳ್ಳುತ್ತಿದ್ದೀರಾ ? ಹೌದು ಇದು  ನಿಜ .ಈ ಹಾವಿನ ಹುತ್ತದ ಮನೆಯಲ್ಲಿ ಮನುಷ್ಯರು ವಾಸಿಸುತ್ತಿದ್ದಾರೆ .

 

 

ಅದು ಕೇವಲ ಕೆಲವು ತಿಂಗಳಿಂದ ಅಲ್ಲ . ಬದಲಾಗಿ ನೂರು ವರ್ಷಗಳಿಂದ ಈ ಹಾವಿನ ಹುತ್ತದಲ್ಲಿ ಮನುಷ್ಯರು ವಾಸಿಸುತ್ತಿದ್ದಾರೆ. ಇಷ್ಟಕ್ಕೂ ಇದು ಎಲ್ಲಿ ಇದೆ ? ಎಂದರೆ ಇರಾಕಿನಲ್ಲಿ ಕಂಡ ಮಾನ್ ಗ್ರಾಮದಲ್ಲಿ . ಎಲ್ಲಿ ನೋಡಿದರೆ ಅಲ್ಲಿ ಈ ಹಾವಿನ ಹುತ್ತಗಳ ಮನೆಗಳು ಕಾಣಿಸುತ್ತವೆ. ಅಂದರೆ ಇರಾನ್ ನ ಪಶ್ಚಿಮ ಭಾಗದಲ್ಲಿರುವ ಅಜರ್ ಬಜಾರ್ ನ ಪ್ರಾಂತ್ಯಕ್ಕೆ ಅರುವತ್ತು ಕಿಲೋಮೀಟರ್ ದೂರದಲ್ಲಿ  ಈ ರೀತಿಯ ಮನೆಗಳನ್ನು ನೀವು ನೋಡಬಹುದು .

 

 

ತುಂಬಾ ಎತ್ತರವಾದ ಹುತ್ತಗಳು ಹೇಗಿರುತ್ತವೋ ಹಾಗೇ ಈ ಪ್ರಾಂತ್ಯದ ಮನೆಗಳು ಸಹ ಹಾಗೆಯೇ ಇವೆ ತಲೆತಲಾಂತರಗಳಿಂದ ಈ ಮನೆಯಲ್ಲೇ ಅಲ್ಲಿನವರು ವಾಸಿಸುತ್ತಿದ್ದಾರೆ. ಈ ಹುತ್ತದ ಮನೆಗಳೇ ಇಲ್ಲಿನ ಸೌಂದರ್ಯವನ್ನು ಹೆಚ್ಚಿಸುತ್ತವೆ.

ಈ ವಿಭಿನ್ನವಾದ, ವಿಚಿತ್ರವಾದ ಹುತ್ತದ ಮನೆಯನ್ನು ನೋಡಲು ಪ್ರವಾಸಿಗರು ತಂಡೋಪತಂಡವಾಗಿ ಬರುತ್ತಿದ್ದಾರೆ. ಇದರಿಂದ ಅಲ್ಲಿನ ಕೆಲವು ಹುತ್ತದ ಮನೆಗಳನ್ನು ಲಾಡ್ಜ್ ಗಳ ರೀತಿಯಾಗಿ ಬದಲಿಸಿ ಬಾಡಿಗೆಗೆ ನೀಡುತ್ತಿದ್ದಾರೆ.

 

 

ಅಲ್ಲಿನ ಗ್ರಾಮದ ಜನಸಂಖ್ಯೆ ಕೇವಲ ಸಾವಿರ ಜನರು ಮಾತ್ರ ಈ ಒಂದು ಒಂದು ಹಾವಿನ ಹುಟ್ಟಿದ ಮನೆಯಲ್ಲಿ ಮೂರು ಕೊಠಡಿಗಳು ಇರುತ್ತವೆ ಮತ್ತೆ ಈ ರೀತಿಯ ಹಾವಿನ ಹುತ್ತದ ಮನೆಗಳನ್ನು ನೀವು ನೋಡಬೇಕು ಎಂದರೆ ಇರಾನ್ ಗೆ ಹೋಗಲೇ ಬೇಕಾಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top