ದೇವರು

ಶ್ರೀರಾಮನ ಬಗ್ಗೆ ನಿಮಗೆಷ್ಟು ಗೊತ್ತು? ಹಾಗಿದ್ರೆ ರಾಮ ಬಗೆಗಿನ ಈ ಚಿಕ್ಕ ಚಿಕ್ಕ ಪ್ರಶ್ನೆಗಳಿಗೆ ಉತ್ತರ ಗೊತ್ತಾ?

ಸಾಕ್ಷಾತ್ ವಿಷ್ಣುವಿನ ಏಳನೇ ಅವತಾರ ಎಂದು ನಂಬಲ್ಪಟ್ಟಿರುವ ನಂಬಿರುವ ಹಿಂದೂಗಳ ಆರಾಧ್ಯದೈವ ಶ್ರೀರಾಮನ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ತ್ರೇತಾಯುಗದಲ್ಲಿನ ರಾಮಾಯಣದ ಕಥಾನಾಯಕನಾಗಿರುವ ರಾಮ ಈಗಲೂ ಆದರ್ಶಪುರುಷ. ಹೇಗೆ ಶ್ರೇಷ್ಠ ಪ್ರತಿವ್ರತೆ ಎಂದರೆ ಸೀತೆ, ದ್ರೌಪದಿಯಾರಂತಹ ಮಹಾನ್ ಶ್ರೀಗಳನ್ನು ಹೆಸರಿಸುತ್ತಾರೋ ಹಾಗೆ ಪುರುಷರ ಚಾರಿತ್ರವನ್ನು ಹೊಗಳಬೇಕಾದರೆ ಶ್ರೀರಾಮನಂತವನು ಎಂದು ಸಂಭೋದಿಸುವುದು ಜನರಲ್ಲಿ ರೂಡಿಯಲ್ಲಿದೆ. ಇಂತಹ ಶ್ರೀರಾಮನ ಬಗ್ಗೆ ಭಕ್ತರುಗಳಾದ ಬಗ್ಗೆ ನಿಮಗೆಷ್ಟು ಗೊತ್ತು? ಆತನ ಜೀವನದ ಸಣ್ಣ ಸಣ್ಣ ವಿಚಾರಗಳ ಬಗ್ಗೆ ಇಲ್ಲಿ ತಿಳ್ಕೊಳಿ. ಇದೊಂಥರಾ ಸಣ್ಣ ಕ್ವಿಜ್ ಅನ್ಕೋಳಿ.

 

1. ಶ್ರೀರಾಮನಿಗೆ ಶ್ರೀರಾಮ ಅಂತ ಹೆಸರು ಕೊಟ್ಟಿದ್ದು ಯಾರು?
ಉತ್ತರ: ವಸಿಷ್ಠ ಮಹರ್ಷಿ. ರಘುಕುಲದ ಮಹರ್ಷಿಯಾದ ವಸಿಷ್ಠರು ರಾಮನಿಗೆ ರಾಮ ಎಂದು ಹೆಸರು ಕೊಡುತ್ತಾರೆ. ಅಗ್ನಿ ಮತ್ತು ಅಮೃತ ಬೀಜಗಳಿಂದ ಕೂಡಿರುವ ಹೆಸರು ‘ರಾಮ’ ಅಂತ ವಸಿಷ್ಠ ಉಲ್ಲೇಖಿಸಿದ್ದು ಈ‌ ಹೆಸರು ಕೇಳಿದರೆ ದೇಹ ಮತ್ತು ಮನಸ್ಸುಗಳಿಗೆ ಚೈತನ್ಯ ಬರುತ್ತದೆ.

2.ರಾಮ ವನವಾಸಕ್ಕೆ ಹೋದಾಗ ಅವನಿಗೆ ಎಷ್ಟು ವರ್ಷ?
ಉತ್ತರ: 27 ವರ್ಷ

3. ರಾಮನ ಅವತಾರದ ಅಂತ್ಯದಲ್ಲಿ ಶ್ರೀರಾಮ ತನ್ನ ದೇಹವನ್ನ ಎಲ್ಲಿ ಮತ್ತೆ ಹೇಗೆ ಬಿಟ್ಟು ಹೋಗ್ತಾನೆ?
ಉತ್ತರ: ಸರಯೂ ನದಿಯಲ್ಲಿ, ಜಲಸಮಾಧಿಯಾಗುತ್ತಾನೆ.

4.ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸಕ್ಕೆ ಹೋಗಿದ್ದ ಅರಣ್ಯ ಯಾವುದು?
ಉತ್ತರ: ದಂಡಕಾರಣ್ಯ.

5.ರಾಮಸೇತು ಎಷ್ಟು ಉದ್ದ ಇತ್ತು? ಅದನ್ನ ನಿರ್ಮಿಸೋಕೆ ಒಟ್ಟು ಎಷ್ಟು ದಿನ ಹಿಡಿತು?
ಉತ್ತರ: ಮೂವತ್ತು ಕಿಲೋಮೀಟರ್,, ಆರು ದಿನ.

6.ರಾವಣನ ಮಾಯಾ ಶಕ್ತಿಗಳ ಕುರಿತು ರಾಮನಿಗೆ ಹೇಳಿದ್ದು ಯಾರು?
ಉತ್ತರ: ವಿಭೀಷಣ

7. ಯಾವುದೇ ಆಯುಧಗಲಿದ ರಾಮನನ್ನು ಸೋಲಿಸಿದ್ದವರು ಯಾರು?
ಉತ್ತರ: ಹನುಮಂತ, ರಾಮನಿಂದ ಯಯಾತೀಯನ್ನ ಉಳಿಸಲು ಹನುಮಂತ ರಾಮನ ವಿರುದ್ಧ ಕಾದಾಡಿ ಯಾವುದೇ ಆಯುಧಗಲಿದೆ ಸೋಲಿಸುತ್ತಾನೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top