ಕಿರುತೆರೆ

ಲೈಂಗಿಕ ಕ್ರಿಯೆ ನಡೆಸಿ ವಂಚನೆ: ಕಿನ್ನರಿ ಸೀರಿಯಲ್ ನಟ ಕಿರಣ್’ಗೆ ಜಾಮೀನು ಮಂಜೂರು!

ವಿವಾಹವಾಗುವುದಾಗಿ ನಂಬಿಸಿ ಮುಂಬೈನ ರೂಪದರ್ಶಿ ಜೊತೆ ಲೈಂಗಿಕ ಕ್ರಿಯೆ ನಡೆಸಿವಂಚಿಸಿದ್ದ ಆರೋಪದಡಿ ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿ ಇದುವರೆಗೂ ಪೊಲೀಸ್ ಕಸ್ಟಡಿಯಲ್ಲಿದ್ದ ಕಿರುತೆರೆ ನಟ ಕಿರಣ್‌ ರಾಜ್ ಅವರಿಗೆ 54ನೇ ಎಸಿಎಂಎಂ ನ್ಯಾಯಾಲಯವು ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

 

 

ಜಾಮೀನು ಸಿಕ್ಕಿರುವುದು ಕಿರಣ್‌‌ ರಾಜ್‌‌‌ಗೆ ಸದ್ಯಕ್ಕೆ ಸ್ವಲ್ಪ ರಿಲೀಫ್ ಸಿಕ್ಕಂತಾಗಿದ್ದು ಒಂದು ಲಕ್ಷ ಮೌಲ್ಯದ ಬಾಂಡ್‌ ನೀಡಬೇಕು. ಪ್ರಕರಣಕ್ಕೆ ಸಂಭಂದಿಸಿದ ಸಾಕ್ಷ್ಯ ನಾಶ ಮಾಡಬಾರದು. ಇಬ್ಬರು ವ್ಯಕ್ತಿಗಳ ಶ್ಯೂರಿಟಿ ನೀಡಬೇಕು’ ಎಂದು ಜಾಮೀನಿಗೆ ನ್ಯಾಯಾಲಯ ಷರತ್ತು ವಿಧಿಸಲಾಗಿದೆ.

ಏನಿದು ಪ್ರಕರಣ:
ಕಿರುತೆರೆ ನಟ ಕಿರಣ್ ರಾಜ್ ವಿರುದ್ಧ ಮುಂಬೈ ಮಾಡೆಲ್ ಒಬ್ಬಳು ದೂರು ನೀಡಿದ್ದರು ಈ ಸಂಭಂದ ಕಿರಣ್ ವಿರುದ್ಧ ಎಫ್‍ಐಆರ್ ದಾಖಲಾಗಿ ಈತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು.. ಕನ್ನಡದ ಖಾಸಗಿ ಚಾನೆಲ್ ವೊಂದರಲ್ಲಿ ಪ್ರಸಾರವಾಗುತ್ತಿರುವ ಕಿನ್ನರಿ ಧಾರವಾಹಿಯ ನಾಯಕ ನಟನಾಗಿರುವ ಕಿರಣ್ “ತನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಿ ಮದುವೆಯಾಗದ್ದೆ ಮೋಸ ಮಾಡಿದ್ದಾನೆ ಅಲ್ಲದೆ ತನ್ನ ಮೇಲೆ ಹಲ್ಲೆ ಮಾಡಿದ್ದಾಗಿ” ಮಾಡೆಲ್​ ಯಾಸ್ಮಿನ್​ ಎಂಬಾಕೆ ಆರೋಪಿಸಿ ದೂರು ನೀಎಡಿದ್ದಳು.

 

 

ದೂರಿನಲ್ಲಿರುವುದೇನು?
“ನಾನು ಮತ್ತು ಕಿರಣ್ ರಾಜ್ ಲಿವಿಂಗ್ ರಿಲೇಶನ್ ಶಿಪ್ ಹೊಂದಿದ್ದೆವು. ಕಿರಣ್ ನನ್ನ ಜೊತೆ ದೈಹಿಕ ಸಂಪರ್ಕ ಮಾಡಿ ನನ್ನನ್ನು ಮದುವೆಯಾಗದೆ ವಂಚಿಸಿದ್ದಾನೆ. ಮಾರ್ಚ್ 29 ರಂದು ತಮ್ಮನ್ನು ಕಾರಿನಲ್ಲಿ ಕರೆದುಕೊಂಡು ಹೊಡಿ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. . ಅಲ್ಲದೇ ಮನೆ ಬಳಿಯಲ್ಲಿರುವ ಗ್ಯಾರೇಜ್ ನಲ್ಲಿ ನನ್ನನ್ನು ಅಕ್ರಮವಾಗಿ ಭಂದಿಸಿ ಹಲ್ಲೆ ನಡೆಸಿದ್ದಾನೆ. ಬಳಿಕ ನಾನು ಹೇಗೋ ಕಿರಣ್ ನಿಂದ ತಪ್ಪಿಸಿಕೊಂಡು ಮುಂಬೈ ಗೆ ಬಂದಿದ್ದೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top