ಹೆಚ್ಚಿನ

ಕಾಲೆಳೆಯಲು ಬಂದ ಕಿಡಿಗೇಡಿಗಳಿಗೆ ಮುಟ್ಟಿನೋಡಿಕೊಳ್ಳುವ ಹಾಗೆ ಖಡಕ್ ಉತ್ತರ ಕೊಟ್ಟ ರಣಜಿ ಆಟಗಾರ ಸ್ಟುವರ್ಟ್ ಬಿನ್ನಿಯ ಪತ್ನಿ ಮಯಾಂತಿ ಲ್ಯಾಂಗರ್‌!

ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹಾಟ್ ಆ್ಯಂಡ್ ಬೋಲ್ಡ್ ಹೋಸ್ಟ್ ಯಾರು ಅಂದರೆ? ತಕ್ಷಣ ನೆನಪಾಗೋದು ನಿರೂಪಕಿ ಮಯಾಂತಿ ಲ್ಯಾಂಗರ್ ಬಿನ್ನಿ. ಟೀಮ್ ಇಂಡಿಯಾದ ಆಲ್ ರೌಂಡರ್ ಕರ್ನಾಟಕದ ಸ್ಟುವರ್ಟ್ ಬಿನ್ನಿ ಅವರ ಮಡದಿಯಾಗಿರುವ ಮಯಾಂತಿ ಅವರ ಸೌಂದರ್ಯಕ್ಕೆ ಲಕ್ಷಾಂತರ ಅಭಿಮಾನಿಗಳಿದ್ದಾರೆ, ಹಾಗೆಯೇ ಇವರನ್ನು ಕಾಲೆಳೆಯುವವರೂ ಸೋಷಿಯಲ್ ಮೀಡಿಯಾಗಳಲ್ಲಿ ಇದ್ದಾರೆ. ಹೀಗೆ ಕಾಲೆಳೆಯಲು ಬಂದ ಕಿಡಿಗೇಡಿಯೊಬ್ಬನಿಗೆ ಮಾಯಾಂತಿ ಮುಖಕ್ಕೆ ಹೊಡೆದ ಹಾಗೆ ಉತ್ತರ ಕೊಟ್ಟಿದ್ದಾರೆ.

 

 

”ನಿಮ್ಮನ್ನು ಕಂಡಾಗಲೆಲ್ಲಾ ನನಗೆ ಐಪಿಎಲ್‌ ಮ್ಯಾಚುಗಳನ್ನು ನೋಡಲು ಮನಸ್ಸೇ ಆಗುವುದಿಲ್ಲ. ನೀವು ಕ್ಲಾಸ್‌ ಮತ್ತು ಅಸಾಧಾರಣ ವ್ಯಕ್ತಿತ್ವದ ಪರಿಪೂರ್ಣ ಮಿಶ್ರಣವಿದ್ದಂತೆ. ನಾನು ನಿಮ್ಮನ್ನು ಒಮ್ಮೆ ಡಿನ್ನರ್’ಗೆ ಕರೆದೊಯ್ಯಬೇಕೆಂಬ ಆಸೆಯಿದೆ. ನೀವು ಎಷ್ಟೊಂದು ಸುಂದರವಾಗಿದ್ದೀರಿ ಎಂಬುದನ್ನು ಹೋಗಲು ನನ್ನಲ್ಲಿ ಪದಗಳೇ ಇಲ್ಲ,” ಎಂದು ಫಹಾದ್‌ ಎಂಬ ವ್ಯಕ್ತಿ ಟ್ವಿಟ್‌ ಮಾಡಿದ್ದರು.

 

 

ಈ ಟ್ವೀಟ್ ಗೆ ರಿಪ್ಲೇ ಮಾಡಿರುವ ಮಯಾಂತಿ, ”ಥ್ಯಾಂಕ್ ಯೂ. ನಾನು ಮತ್ತು ನನ್ನ ಗಂಡ ಜೊತೆಯಾಗಿ ನಿಮ್ಮ ಜೊತೆ ಡಿನ್ನರ್ ಗೆ ಬರುತ್ತೇವೆ,” ಎಂದು ಟ್ವೀಟ್‌ ಮಾಡಿದ್ದಾರೆ. ಕಾಲೆಳೆಯಲು ಬಂದ ಈ ವ್ಯಕ್ತಿಗೆ ಮುಟ್ಟಿನೋಡಿಕೊಳ್ಳುವ ಹಾಗೆ ಉತ್ತರ ಕೊಟ್ಟ ಮಯಾಂತಿ ಲ್ಯಾಂಗರ್‌ ಅವರ ಖಡಕ್‌ ಉತ್ತರಕ್ಕೆ ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top