ಹೆಚ್ಚಿನ

ಬ್ರಾವೋ-ಪೊಲ್ಲಾರ್ಡ್ 400 ಸಂಖ್ಯೆಯ ಜೆರ್ಸಿ ತೊಟ್ಟಿರುವ ರಹಸ್ಯ ಬಯಲಾಯ್ತು

ಐಪಿಎಲ್ ಕ್ರಿಕೆಟ್ 11ನೇ ಆವೃತ್ತಿಯ ಮೊದಲ ಕ್ರಿಕೆಟ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಚೆನ್ನೈ ಕ್ಯೂಪೆರ್ ಕಿಂಗ್ಸ್ ಡ್ವೇನ್ ಬ್ರಾವೋ ಮತ್ತು ಮುಂಬೈ ಇಂಡಿಯನ್ಸ್ ಕೀರನ್ ಪೊಲ್ಲಾರ್ಡ್ ಇಬ್ಬರೂ 400 ಸಂಖ್ಯೆಯುಳ್ಳ ಜೆರ್ಸಿ ತೊಟ್ಟು ಆಡಿದ್ದರು. ಅಪಾರ ಕ್ರಿಕೆಟ್ ಅಭಿಮಾನಿಗಳಲ್ಲಿ ಇವರೇಕೆ ಒಂದೇ ಸಂಖ್ಯೆಯ ಜೆರ್ಸಿಯ್ ತೊಟ್ಟಿದ್ದಾರೆ ಎಂಬ ಕುತೂಹಲ ಸಹಜವಾಗಿ ಮೂಡಿತ್ತು. ಇದಕ್ಕೊಂದು ವಿಶೇಷ ಕಾರಣವಿತ್ತು ಎಂಬುದು ಈಗ ಗೊತ್ತಾಗಿದೆ.


‘ಪೊಲ್ಲಾರ್ಡ್ 400 ಟಿ20 ಪಂದ್ಯಗಳನ್ನು ಆಡಿರುವ ಮೊದಲ ಆಟಗಾರ. ಬ್ರಾವೊ 400 ವಿಕೆಟ್ ಪಡೆದ ಮೊದಲ ಬೌಲರ್. ಐಪಿಎಲ್‌’ನ ಮೊದಲ ಪಂದ್ಯದಲ್ಲಿ ಇಬ್ಬರೂ ಆಡಿದರೆ, ಏನಾದರೂ ವಿಭಿನ್ನವಾಗಿ ಈ ಮೈಲಿಗಲ್ಲನ್ನು ಆಚರಿಸೋಣ ಎಂದು ನಿರ್ಧಾರ ಮಾಡಿದ್ದೆವು’ ಎಂದು ಶನಿವಾರ ಚೆನ್ನೈ ತಂಡಕ್ಕೆ ರೋಚಕ ಗೆಲುವು ತಂಡ ಬಳಿಕ ಬ್ರಾವೋ ತಿಳಿಸಿದ್ದಾರೆ.

ಬ್ರಾವೋ-ಪೊಲ್ಲಾರ್ಡ್ ಉತ್ತಮ ಗೆಳೆಯರಾಗಿದ್ದು , ಈ ಇಬ್ಬರು ಆಟಗಾರರು ತಮ್ಮ ಪ್ರಾಂಚೈಸಿಗಳೊಟ್ಟಿಗೆ ಮಾತನಾಡಿ 400 ಸಂಖ್ಯೆಯ ಜೆರ್ಸಿ ತೊಟ್ಟಿರುವುದಾಗಿ ಪಂದ್ಯ ಮುಕ್ತಾಯವಾದ ಬಳಿಕ ಹೇಳಿದ್ದಾರೆ.

ಬ್ರಾವೋ-ಪೊಲ್ಲಾರ್ಡ್ ಇಬ್ಬರು ಉತ್ತಮ ಆಲ್ ರೌಂಡರ್ಸ್ ಆಗಿದ್ದು ಪಂದ್ಯದ ಕೊನೆಯ ಹಂತದಲ್ಲಿ ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯ ಇವರಿಗಿದೆ. ಮೊದಲ ಪಂದ್ಯದಲ್ಲಿ ಬ್ರಾವೊ ತಮ್ಮ ತಂಡ ಸೋಲಿನಂಚಿನಲ್ಲಿದ್ದಾಗ ಬಿರುಸಿನ ಬ್ಯಾಟಿಂಗ್ ಮಾಡಿ ಗೆಲುವು ತಂದು ಕೊಟ್ಟರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top