fbpx
ವಿಶೇಷ

ಸೌಂಡ್ ನಲ್ಲೆ ಖದರ್ ಹುಟ್ಟಿಸೋ ‘ಬುಲೆಟ್’ ಬೈಕ್ ಬಗ್ಗೆ ಈ 11 ವಿಷಯಗಳು ತಿಳ್ಕೊಂಡ್ಮೇಲೆ ಬೈಕ್ನ ಇನ್ನು ಜಾಸ್ತಿ ಪ್ರೀತಿ ಮಾಡ್ತೀರಾ

ಪ್ರಪಂಚದಲ್ಲಿ ಇವತ್ತೀರೋ ವಸ್ತು ನಾಳೆ ಜನರಿಗೆ ಇಷ್ಟ ಆಗೋದೇ ದೌಟು ಹೀಗಿರೋವಾಗ ಈ ಮೋಟಾರ್ ಸೈಕಲ್ ಹಣ್ಣಣ್ಣು ಮುದುಕುರಿಂದ ಹಿಡಿದು ಕಿಸಿ ಕಿಸಿ ಓಡಾಡೋ ಹುಡುಗುರವರೆಗೂ ಎಲ್ಲರಿಗು ಇಷ್ಟ , ವಿಶ್ವದಲ್ಲೇ ಒಂದೇ ಮೋಟಾರ್ ಬೈಕ್ ಮಾಡೆಲ್ ಅತಿ ಹೆಚ್ಚು ಕಾಲ ಚಲಾವಣೆ ಮಾಡಿರೋ ದೊಡ್ಡಸ್ಥಿಕೆ ಈ ‘ಬುಲೆಟ್’ ಗಾಡಿದು .

 

1901 ರಲ್ಲಿ, ರಾಯಲ್ ಎನ್ಫೀಲ್ಡ್ ಶುರು ಮಾಡಿದ್ರು ಇದರ ಓನರ್ ಊರಿಂದ ಮಾರು ದೂರದಲ್ಲಿದ್ರು ಮನೆಯವರಿಗೆ ಬರಿ ಸೌಂಡ್ ಇನ್ದಲೇ ಗೊತ್ತಾಗ್ತಿತ್ತು , ಇದರ ಗತ್ತು ಹಂಗಿತ್ತು ಇದೆ ಕಾರಣಕ್ಕೆ ಜನ ಮುಗಿ ಬಿದ್ದು ಬುಲೆಟ್ ಕೊಂಡ್ಕೋತಿದ್ರು .

 

 

ಬುಲೆಟ್ ಅಂದ್ರೆ ಪಂಚ ಪ್ರಾಣ ಅನ್ನೋ ಜನ ಈ 13 ವಿಷ್ಯ ತಿಳ್ಕೊಂಡ್ರೆ ಬುಲೆಟ್ ಮೇಲಿನ ಪ್ರೀತಿ ಜಾಸ್ತಿ ಆಗೋದ್ರಲ್ಲಿ ಯಾವದೇ ಡೌಟ್ ಇಲ್ಲ

 

ರಾಯಲ್ ಎನ್ಫೀಲ್ಡ್ ಯುದ್ಧ ಶಸ್ತ್ರಾಸ್ತ್ರ ತಯಾರು ಮಾಡೋ ಕಂಪನಿ ಆಗಿತ್ತು , ಇವ್ರು ‘ಎನ್ಫೀಲ್ಡ್ ರೈಫೆಲ್’ ತಯಾರು ಮಾಡೋದ್ರಲ್ಲಿ ನಿಸ್ಸಿಮರು, ರಾಯಲ್ ಎನ್ಫೀಲ್ಡ್ ಯುದ್ಧ ಶಸ್ತ್ರಾಸ್ತ್ರ ತಯಾರು ಮಾಡೋ ಕಂಪನಿ ಆಗಿತ್ತು , ಇವ್ರು ‘ಎನ್ಫೀಲ್ಡ್ ರೈಫೆಲ್’ ತಯಾರು ಮಾಡೋರು ಇದೆ ಕಾರಣಕ್ಕೆ ಬುಲೆಟ್ ಅಂತ ಕರೆಯೋದು .

 

 

ಮೊದಲ ರಾಯಲ್ ಎನ್ಫೀಲ್ಡ್ ಬೈಕ್ ನೋಡೋಕೆ ಒಳ್ಳೆ ಸೈಕಲ್ ತರ ಇರ್ತಿತ್ತು

 

 

ರಾಯಲ್ ಎನ್ಫೀಲ್ಡ್ ಲಾಂಛನ (ಲೋಗೋ ) ದಲ್ಲಿ ಫಿರಂಗಿ ಇತ್ತು ಅಡಿ ಬರಹ ಬಂದು ‘ ಮೇಡ್ ಲೈಕ್ ಎ ಗನ್, ಗೋಸ್ ಲೈಕ್ ಎ ಬುಲೆಟ್ ಅಂತಿತ್ತು ‘ , ಇದರ ಅರ್ಥ ‘ಗನ್ ತರ ತಯಾರಿ ಮಾಡಿದ್ದೀವಿ ಬುಲೆಟ್ ತರ ಓಡುತ್ತೆ ‘ ಅಂತ.

 

 

ರಾಯಲ್ ಎನ್ಫೀಲ್ಡ್ ಜೊತೆ ಸೈಡ್ ಕಾರ್ ಕೂಡ ಇರೋದು ಇದನ್ನ ಡಿಸೈನ್ ಮಾಡಿದ್ದು ಮೊದಲ ವಿಶ್ವ ಯುದ್ಧದ ಸಂದರ್ಭದಲ್ಲಿ ಯಾಕಂದ್ರೆ ಗನ್ ಮತ್ತೆ ಬೇರೇನಾದ್ರೂ ಶಸ್ತ್ರಾಸ್ತ್ರ ಬೇಕಾದ್ರೆ ಮಿಲಿಟರಿ ನವರು ಇಟ್ಕೊಂಡೋಗಕೆ ಅನುಕೂಲ ಆಗೋದು .

 

 

1990 ರಲ್ಲಿ ರಾಯಲ್ ಎನ್ಫೀಲ್ಡ್ ಡೀಸೆಲ್ ಬೈಕ್ ಗಳನ್ನ ತಯಾರಿ ಮಾಡೋಕೆ ಶುರು ಹಚ್ಚಿತ್ತು ಅದನ್ನ ‘ಟಾರಸ್’ ಅಂತ ಕರೀತಿದ್ರು ಆಮೇಲೆ ಅದು ಅಷ್ಟೊಂದು ಸೇಲ್ ಆಗಿಲ್ಲ ಅಂತ 2002 ರಲ್ಲಿ ತಯಾರಿ ಮಾಡೋದು ನಿಲ್ಲಿಸ್ಬಿಟ್ರು .

 

 

ಈಗ್ಲೂ ಅತಿ ಹೆಚ್ಚು ಮಾರಾಟ ಆಗೋ ಬುಲೆಟ್ ಗಾಡಿ ಬಂದು ಬುಲೆಟ್ 350 ಆದ್ರೆ ಇದನ್ನ ಮೊದಲು ತಯಾರಿ ಮಾಡಿದ್ದು ಗ್ರೇಟ್ ಬ್ರಿಟನ್ನಲ್ಲಿ , 1955 ರ ನಂತ್ರ ಭಾರತದಲ್ಲೂ ತಯಾರಿ ಮಾಡ್ತಿದ್ದಾರೆ .

 

 

1970 ಯಲ್ಲಿ 650,700 ಸಿಸಿ ಬೈಕ್ ಗಳು ತಯಾರಿ ಮಾಡಿದ್ರು ಅದು ಅಂದ್ಕೊಂಡಷ್ಟು ಯಶಸ್ವಿ ಆಗ್ಲಿಲ್ಲ , ಜಾಸ್ತಿ ಡಿಮ್ಯಾಂಡ್ ಇರಲಿಲ್ಲ ಅದಕ್ಕೆ ನಿಲ್ಸ್ಬಿಟ್ರು

 

 

ಹಾರ್ಲೆ ಡೇವಿಡ್ ಸನ್ ಬೈಕ್ ಇಷ್ಟು ದಿನ ಪ್ರಪಂಚದಲ್ಲೆಲ್ಲ ಸೇಲ್ ಆದಷ್ಟು ಭಾರತ ಒಂದ್ರಲ್ಲೇ ಬುಲೆಟ್ ಸೇಲ್ ಆಗಿದೆ ಅಂದ್ರೆ ಬುಲೆಟ್ ರೇಂಜ್ ಹೇಗಿದೆ ಲೆಕ್ಕ ಹಾಕಿ .

 

 

1965 ರಲ್ಲಿ ಭಾರತ ಸರ್ಕಾರ ಪೊಲೀಸರಿಗೆ ಬಾರ್ಡರ್ ಗಳಲ್ಲಿ ಗಸ್ತು ತಿರುಗೋಕೆ ಯಾವ ಬೈಕ್ ಸೂಕ್ತ ಅಂತ ಹುಡ್ಕೋವಾಗ ಆಯ್ಕೆ ಮಾಡಿದ್ದು ಬುಲೆಟ್ ನ ,ಆ ಕಾಲಕ್ಕೆ 800, 350-ಸಿಸಿ ಬೈಕ್ ಗಳನ್ನ ಕೊಂಡ್ಕೊಂಡಿತ್ತು , ಉತ್ತರ ಸೇನಾ ಪಡೆಗಳು ಮತ್ತು ವಾಯುವ್ಯ ಗಡಿ ಪಡೆಗಳು ಈಗ್ಲೂ ಸಾವಿರಾರು ಬೈಕ್ ಗಳನ್ನ ಬಳಸುತ್ತಿದ್ದಾವೆ .

 

 

ಬ್ರಿಟಿಷ್ ಸಾರ್ವಜನಿಕರಿಗೆ 1984 ರಲ್ಲಿ ‘ಎನ್ಫೀಲ್ಡ್ ಆಫ್ ಇಂಡಿಯಾ’ ಎನ್ಫೀಲ್ಡ್ ಬುಲೆಟ್ ಮೋಟಾರ್ ಸೈಕಲ್ ಗಳನ್ನ ಯುಕೆ ಗೆ ರಫ್ತು ಮಾಡೋಕೆ ಶುರು ಮಾಡ್ಕೊಂಡಿತ್ತು .ಇವತ್ತು ರಾಯಲ್ ಎನ್ಫೀಲ್ಡ್ ಯುಎಸ್, ಜಪಾನ್ ಮತ್ತು ಜರ್ಮನಿ ಸೇರಿದಂತೆ ಜಗತ್ತಿನಾದ್ಯಂತ 42 ದೇಶಗಳಿಗೆ ತನ್ನ ಮೋಟಾರ್ಸೈಕಲ್ಗಳನ್ನು ರಫ್ತು ಮಾಡುತ್ತಿದೆ .

 

 

ಒಂದು ತಿಂಗಳಿಗೆ 30,000 ಬೈಕ್ ಗಳನ್ನ ಬುಲೆಟ್ ಮಾರಾಟ ಮಾಡುತ್ತೆ ,ಬುಲೆಟ್ ಟ್ಯಾಂಕ್ ಮೇಲೆ ಇರೋ ಡಿಸೈನ್ ಕೈಯಲ್ಲೇ ಬರೆಯೋದು ಇದಕ್ಕೆ ಅಂತ 15 ರಿಂದ 20 ವರ್ಷಗಳಿಂದ ಟ್ರೈನಿಂಗ್ ಆಗಿರೋ ಜನ ಇದಾರೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top