fbpx
ವಿಶೇಷ

ಈ 13 ಊರುಗಳ ಬಗ್ಗೆ ಮುಂಚೆ ಯಾವತ್ತೂ ಕೇಳಿರ್ಲಿಲ್ಲ ,ನೋಡಿರ್ಲಿಲ್ಲ ಅನ್ನೋರು ಮೊದ್ಲು ಇದ್ರ ವಿಶೇಷ ಕೇಳಿ ಆಮೇಲೆ ನೋಡ್ಕೊಂಡು ಬನ್ನಿ

ಕೋಡಿಂಹಿ ,ಕೇರಳ

 

 

ಈ ಊರನ್ನ ಅವಳಿ ಜವಳಿ ಮಕ್ಕಳ ಊರು ಅಂತಲೇ ಕರೀತಾರೆ ಯಾಕಂದ್ರೆ ಈ ಊರಲ್ಲಿ 1000 ಮಕ್ಕಳು ಹುಟ್ಟಿದ್ರೆ 45 ಮಕ್ಕಳು ಅವಳಿ ಜವಳಿ ಮಕ್ಕಳು ಹುಟ್ಟುತ್ತಾರೆ , ಇದು ಪ್ರಪಂಚದಲ್ಲೆ 700 ಪಟ್ಟು ಜಾಸ್ತಿ .

 

ಶನಿ ಶಿಂಗಾಪುರ ,ಮಹಾರಾಷ್ಟ್ರ

 

 

ಈ ಊರಲ್ಲಿ ಯಾವದೇ ಮನೆಗಳಿಗೆ ಬೀಗ ಹಾಕಲ್ಲ ಯಾಕಂದ್ರೆ ಶನಿ ದೇವ್ರು ಇಲ್ಲಿರೋ ಜನರನ್ನ ಕಾಪಾಡ್ತಾನಂತೆ ,ಯಾರು ಕಳ್ತನ ಮಾಡೋಕೆ ಧೈರ್ಯ ಕೂಡ ಮಾಡಲ್ಲ ,ಇದು ವರೆಗೆ ಯಾವುದೇ ಕಳ್ತನ ಆಗಿಲ್ಲ ,ಅಷ್ಟು ಜನ ಅರಿತು ಬೇರೆತ್ಕೊಂಡು ಬಾಳ್ತಿದ್ದಾರೆ .

 

ಮೈವಲಿನ್ನಿಂಗ್ ,ಮೇಘಾಲಯ

 

 

2013 ರ ಸರ್ವೇ ಪ್ರಕಾರ ಏಷ್ಯಾದಲ್ಲೇ ಸ್ವಚ್ಛವಾಗಿರೋ ಹಳ್ಳಿ ಇದು , ಇಲ್ಲಿ ಏನಾದ್ರು ಅಪ್ಪಿ ತಪ್ಪಿ ಗಲೀಜು ಮಾಡಿದ್ರೆ ಇಲ್ಲಿನ ಜನ ಸುಮ್ನೆ ಬಿಡಲ್ಲ .

 

ಧರನಿ , ಬಿಹಾರ್

 

 

ಈ ಹಳ್ಳಿ ನಮ್ಮೂರುಗಳ ತರ ಅಲ್ಲ ಇಲ್ಲಿ ಅಪ್ಪಿ ತಪ್ಪಿನೂ ಕರೆಂಟ್ ಹೋಗಲ್ಲ ಯಾಕಂದ್ರೆ ಮೂವತ್ತು ವರ್ಷಗಳಿಂದ ಸೌರ ಶಕ್ತಿ ಉಪಯೋಗ ಮಾಡ್ತಿದ್ದಾರೆ ಈ ಊರಿನ ಜನ .

 

ಪೋಥಾನಿಕ್ಕಡ್ , ಕೇರಳ

 

 

ಈ ಊರಲ್ಲಿ ಎಲ್ರು ವಿದ್ಯಾವಂತರೇ , ವಿದ್ಯೆ ಅಂದ್ರೆ ಗೌರವ ಕೊಡೊ ಜನ ಇವ್ರು .

 

ಪುನ್ಸರಿ , ಗುಜರಾತ್

 

 

ಇವ್ರು ಟೆಕ್ನಾಲಜಿ ಲಿ ತುಂಬಾ ಮುಂದೆ , 24 ಗಂಟೇನು ಸ್ಕೂಲ್ ಗಳಲ್ಲಿ ಇಂಟರ್ನೆಟ್ , ಸಿಸಿ ಟಿವಿ ಇದ್ದೆ ಇರುತ್ತೆ , ಎಲೆಕ್ಟ್ರಿಕ್ ಶುದ್ದಿ ಮಾಡಿರಿ ನೀರೇ ಇವ್ರು ಕುಡಿಯೋದು.

 

ಭದ್ರಾಪುರ್

 

 

ಈ ಊರಲ್ಲಿ ಮಕ್ಕಳಿಗೆ ಗೂಗಲ್ ,ಫೇಸ್ ಬುಕ್ , ಕಾಂಗ್ರೆಸ್ ,ಒಬಾಮ ಈ ತರದ ವಿಚಿತ್ರ ಹೆಸರುಗಳನ್ನ ಇಡ್ತಾರೆ .

 

ಶಿವ ನಗರ್ ,ಮುಝ್ಅಫರ್ ನಗರ್

 

 

ಸ್ನ್ಯಾಪ್ ಡೀಲ್ ಕಂಪನಿ 15 ಕೈ ಪಂಪುಗಳನ್ನ ಈ ಊರಲ್ಲಿ ಹಾಕಿಸಿಕೊಟ್ಟ ಮೇಲೆ ಈ ಊರಿಗೆ ಸ್ನ್ಯಾಪ್ ಡೀಲ್ . ಕಂ ಅಂತ ಹೆಸರಿಟ್ರು .

 

ಶೆಟ್ಫಲ್ ,ಮಹಾರಾಷ್ಟ್ರ

 

 

ಈ ಊರಲ್ಲಿ ನಾಗ ಬನಗಳಿವೆ, ಇಲ್ಲಿ ಹಾವು ಯಾವಾಗ ಬೇಕಿದ್ರೂ ಬಂದು ಆರಾಮವಾಗಿ ಇರ್ಬಹುದು , ಈವರೆಗೂ ಯಾರಿಗೂ ಕಚ್ಚಿಲ್ಲ .

 

ಹಿವಾರೇ ಬಜಾರ್ , ಮಹಾರಾಷ್ಟ್ರ

 

 

ಮಹಾರಾಷ್ಟ್ರದ ಈ ಊರಲ್ಲಿ 60 ಜನ ಲಕ್ಷಾಧಿಪತಿಗಳು , ಬಡವರು ಯಾರು ಇಲ್ಲ , ಹಳ್ಳಿಯ ಮುಖ್ಯಸ್ಥ ಸರಪಂಚ್ ಮಧ್ಯಪಾನ ,ಧೂಮಪಾನ ಇವೆಲ್ಲ ಬ್ಯಾನ್ ಮಾಡಿದ್ದಾರೆ .

 

ಕೊಕ್ಕರೆ ಬೆಳ್ಳೂರು , ಕರ್ನಾಟಕ

 

 

ಈ ಜಾಗದಲ್ಲಿ ಕೊಕ್ಕರೆ ಜಾಸ್ತಿ ಇರ್ತವೆ , ಕೊಕ್ಕರೆಗೆ ಅಂತಾನೆ ಇಲ್ಲಿ ಜಾಗ ಬಿಟ್ಕೊಂಡಿರ್ತಾರೆ .

 

ಬೋಂಡಾ ಸಮುದಾಯ ,ಮಲ್ಕಂಗಿರಿ

 

 

ಒಡಿಸ್ಸಾ ರಾಜ್ಯದ ಮಲ್ಕಂಗಿರಿಯ ಬೋಂಡಾ ಸಮುದಾಯದಲ್ಲಿರೋ ಈ ಹೆಣ್ಣು ಮಕ್ಕಳು , ಮೈ ಮೇಲೆ ಬಟ್ಟೆ ಹಾಕೊಳೋಲ್ಲ ,ತಲೆ ಬೋಳಿಸಿಕೊಂಡು ಇರ್ತಾರಂತೆ , ಸೀತೆ ಶಾಪನೆ ಇದಕ್ಕೆ ಕಾರಣ ಅಂತಾರೆ .

 

ಮಲನ ,ಕಸೋಲ್

 

 

ಗಾಂಜಾ ಬೆಳೆಯೋ ಈ ಊರಲ್ಲಿ ಅತಿ ಕ್ರಮ ಪ್ರವೇಶ ಮಾಡೋಹಾಗಿಲ್ಲ ಇಲ್ಲಿ ಬೆಳೆಯೋ ಗಾಂಜಾಕ್ಕೆ ‘ಮಲನ ಕ್ರೀಮ್ ‘ ಅಂತ ಕರೀತಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top