ದೇವರು

ಭಗವಂತ ಹನುಮಂತ ಈಗ್ಲೂ ಭೂಮಿಯ ಮೇಲೆ ಜೀವಂತವಾಗಿದ್ದಾನೆ ಅನ್ನೋಕೆ ನಂಬೋಕೆ ಕಷ್ಟ ಆಗೋ ಈ 7 ಕಾರಣ ಸಾಕು ಕಣ್ರೀ

1.ಹನುಮಂತನು ಶಾಶ್ವತವಾಗಿ ಇದ್ದಾನೆ .

ನಾವು ಆಗಾಗ ಹೇಳುತ್ತಿರುತ್ತೇವೆ. ಆತ್ಮಕ್ಕೆ ಎಂದಿಗೂ ಸಾವಿಲ್ಲವೆಂದು. ಆತ್ಮ ಯಾವುದೋ ಒಂದಲ್ಲ ಇನ್ನೊಂದು ರೂಪದಲ್ಲಿ ಅವತಾರವನ್ನು ತಾಳಿ ಪುನರ್ಜನ್ಮ ಪಡೆಯುತ್ತದೆ. ಆದರೆ ಹಿಂದೂ ಪುರಾಣಗಳ ಪ್ರಕಾರ ಕೆಲವರು ಅದೇ ಅವತಾರದಲ್ಲಿ ಅನೇಕ ವರ್ಷಗಳವರೆಗೂ ಕೂಡ ಬದುಕಿರುತ್ತಾರೆ ಎಂದೂ ಸಹ ನಂಬಲಾಗಿದೆ. ಅವರನ್ನು ಚಿರಂಜೀವಿ ಎಂದು ಕರೆಯುತ್ತಾರೆ. ಅಂತಹ ಚಿರಂಜೀವಿಗಳಲ್ಲಿ ಈಗಲೂ ಸಹ ಜೀವಂತವಾಗಿರುವ ಭಗವಂತನೇ ಹನುಮಂತ. ನೀವು ಎಂದಾದರೂ ಹನುಮಂತನ ಸಾವಿನ ಬಗ್ಗೆ ಕೇಳಿದ್ದೀರಾ ?

 

 

2.ಯಾಕೆ ಹನುಮಂತನು ಇನ್ನೂ ನಮ್ಮ ಸುತ್ತಮುತ್ತಲೂ ಇದ್ದಾನೆ.

ದಂತಕತೆಗಳ ಪ್ರಕಾರ ಹನುಮಂತನು ಅಮರತ್ವವನ್ನು ಪಡೆದಿದ್ದಾನೆ. ಯಾಕೆಂದರೆ ಅವನು ಈ ಭೂಮಿಯ ಮೇಲೆ ಎಲ್ಲಿಯವರೆಗೂ ರಾಮನ ಭಕ್ತರು ಇರುತ್ತಾರೋ,ರಾಮನ ಕಥೆಗಳು ಜನಗಳ ಮನಸ್ಸಿನಲ್ಲಿ ಇರುತ್ತವೋ  ಮತ್ತು ರಾಮನ  ಹೆಸರನ್ನು ಜಪಿಸುತ್ತಾರೋ ಅಲ್ಲಿಯವರೆಗೂ ಹನುಮಂತನು ಈ ಭೂಮಿಯ ಮೇಲೆ ಜೀವಂತವಾಗಿ ಇರುತ್ತಾನೆ ಎಂದು ನಂಬಲಾಗಿದೆ .

 

 

3.ಹನುಮಂತನ ಹೆಜ್ಜೆ ಗುರುತುಗಳು.

ಹನುಮಂತನ ಹೆಜ್ಜೆ ಗುರುತುಗಳನ್ನು ನಾವು ಭಾರತದೆಲ್ಲೆಡೆ ಅನೇಕ ಕಡೆಗಳಲ್ಲಿ ಕಾಣಬಹುದಾಗಿದೆ. ಇವುಗಳನ್ನು ಕಂಡು ಹಿಡಿದು ತುಂಬಾ ಪವಿತ್ರ ಸ್ಥಳಗಳು ಎಂದು ಅವುಗಳನ್ನು ಪರಿಗಣಿಸಲಾಗಿದೆ ಮತ್ತು ಜನರು ಅವುಗಳನ್ನು ಪೂಜಿಸುತ್ತಾರೆ. ಈ ಹೆಜ್ಜೆ ಗುರುತುಗಳ ಕಾರಣ ಹನುಮಂತನು ಇನ್ನೂ ಜೀವಂತವಾಗಿ ಈ ಭೂಮಿಯ ಮೇಲೆ ಇದ್ದಾನೆ ಎಂದು ನಂಬಲಾಗಿದೆ. ಶಿಮ್ಲಾದಲ್ಲಿ ಇರುವ ಜಕು ದೇವಾಲಯದಲ್ಲಿ ಹನುಮಂತನು ಇದ್ದಾನೆ ಎಂದು ನಂಬುತ್ತಾರೆ. ಇಲ್ಲಿ ಕೆಲವು ಸಮಯದವರೆಗೆ ಹನುಮಂತನು ಕುಳಿತು ವಿಶ್ರಾಂತಿ ತೆಗೆದುಕೊಂಡಿದ್ದನು ಎಂದು ಹೇಳಲಾಗುತ್ತದೆ.

 

 

4.ಕಲಿಯುಗದಲ್ಲಿ .

ಕಲಿಯುಗದಲ್ಲಿ ಅನೇಕ ನಿದರ್ಶನಗಳು ನಮಗೆ ಸಿಗುತ್ತವೆ .ಜನರು ನಾವು ಹನುಮಂತನನ್ನು ನೋಡಿದ್ದೇವೆ ಎಂದು ಹೇಳುತ್ತಾರೆ. ಈಗ ನಾವು ಕೂಡ ಯೋಚನೆ ಮಾಡುತ್ತಿರುತ್ತೇವೆ ಇದು ನಿಜವೇ ? ಕಲಿಯುಗದಲ್ಲಿಯೂ ಸಹ ಭಗವಂತನಾಗಿರುವ ಹನುಮಂತನು ಜೀವಂತವಾಗಿದ್ದು ಕಣ್ಣಿಗೆ ಕಾಣಿಸುತ್ತಾನೆಯೇ ? ಇದು ಭ್ರಮೆ ಅಷ್ಟೇ ಇರಬೇಕು ? ಎಂದು ಕೆಲವರು ಊಹಿಸುತ್ತಾರೆ. ಆದರೆ ಮಧ್ವಾಚಾರ್ಯರ ರೀತಿಯಲ್ಲಿ ಜನರು ಇರುತ್ತಾರೆ .ಅವರು ಹನುಮಂತನನ್ನು ಜೀವಂತವಾಗಿ ಇರುವುದನ್ನು ಮತ್ತು ಇರುವಿಕೆಯನ್ನು ಹದಿಮೂರನೇ ಶತಮಾನದಲ್ಲಿ ಕ್ರಿಸ್ತಶಕ 1600 ನೇ  ಇಸವಿಯಲ್ಲಿ ನೋಡಿದ್ದಾರೆ.

 

 

ಭಗವಂತನಾದ ಹನುಮಂತನನ್ನು  ತುಳಸಿ ದಾಸರು ಕೂಡ ಭೇಟಿಯಾಗಿದ್ದಾರೆ. ಅವರಿಂದ ಹನುಮಂತನಿಂದ ಸ್ಫೂರ್ತಿಯಾಗಿ ತುಳಸಿ ದಾಸರು ರಾಮಾಯಣವನ್ನು ಬರೆದಿದ್ದಾರೆ ಎಂದು ಹೇಳಲಾಗುತ್ತದೆ .ರಾಮದಾಸ ಸ್ವಾಮಿ, ರಾಘವೇಂದ್ರ ಸ್ವಾಮಿ, ಸ್ವಾಮಿ ರಾಮದಾಸ ಮತ್ತು ಶ್ರೀ ಸತ್ಯ ಸಾಯಿಬಾಬಾ ಇವರೆಲ್ಲರಿಗೂ ಹನುಮಂತನ ದರ್ಶನ ಭಾಗ್ಯ ದೊರೆತಿದೆ .

 

5.ಭಗವಂತನಾದ ಹನುಮಂತನು ಜೀವಂತವಾಗಿ ಇದ್ದಾನೆ  . ಯಾವಾಗಲೂ ರಾಮ ನಾಮವನ್ನು ಜಪಿಸುತ್ತಾರೆ.

ಭಗವಂತನಾದ ಹನುಮಂತನು ಅಮರತ್ವವನ್ನು ವರದಾನವಾಗಿ ಪಡೆದಿದ್ದಾನೆ. ಆದ್ದರಿಂದಲೇ ಇನ್ನೂ ಜೀವಂತವಾಗಿ ಈ ಭೂಮಿಯ ಮೇಲೆ ಚಿರಂಜೀವಿಯಾಗಿ ಇದ್ದಾನೆ. ಹನುಮಂತನು ಹಿಮಾಲಯದಲ್ಲಿ ಮತ್ತು ಕಾಡುಗಳಲ್ಲಿ ಜೀವಿಸುತ್ತಾನೆ ಎಂದು ನಂಬಲಾಗಿದೆ.

 

 

6.ಹನುಮಂತನ ಮನೆ.

ಹೌದು, ಈ ಭೂಮಿಯ ಮೇಲೆ ಪ್ರತಿಯೊಬ್ಬರಿಗೂ ನೆಲೆಸುವುದಕ್ಕೆ ಮನೆ ಬೇಕು. ಹನುಮಂತನ ಮನೆ ತಮಿಳುನಾಡಿನ ಗಂಧಮದನ ಪರ್ವತದಲ್ಲಿ ಇದೆ. ಅದು ರಾಮೇಶ್ವರಂನ ಹತ್ತಿರದಲ್ಲಿದೆ .

 

 

7.ಹಿಂದೂ ಪುರಾಣಗಳು ಏನು ಹೇಳುತ್ತವೆ 

ನಮಗೆಲ್ಲ ಒಂದು ವಿಷಯ ಗೊತ್ತಿದೆ.ಅದೇನೆಂದರೆ ಆತ್ಮಕ್ಕೆ ಸಾವಿಲ್ಲ ಎಂಬುದು ಗೊತ್ತಿದೆ. ಪುನರ್ಜನ್ಮ ವನ್ನು ಆತ್ಮ ಮತ್ತೆ ಮತ್ತೆ ಪಡೆದು ಹುಟ್ಟುತ್ತಿರುತ್ತದೆ. ದೇಹಕ್ಕೆ ಮಾತ್ರ ಸಾವು .ಆತ್ಮಕ್ಕೆ ಸಾವಿಲ್ಲ. ಹಿಂದೂ ಪುರಾಣಗಳ ಪ್ರಕಾರ ಕೆಲವು ಆತ್ಮಗಳಿಗೆ ಸಾವೆಂಬುದು ಇರುವುದೇ ಇಲ್ಲ. ಒಂದೇ ದೇಹದಲ್ಲಿ ಅನೇಕ ವರ್ಷಗಳವರೆಗೆ ಜೀವಿಸಿ ಚಿರಂಜೀವಿಯಾಗಿ ಈ ಭೂಮಿಯ ಮೇಲೆ ಬದುಕುತ್ತಾರೆ .ಆ ಪಟ್ಟಿಯಲ್ಲಿ ಹನುಮಂತ ದೇವರು ಸಹ  ಒಬ್ಬರಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top