fbpx
ಕಿರುತೆರೆ

ಡಾ.ರಾಜ್, ಡಾ.ವಿಷ್ಣು, ಶಂಕ್ರಣ್ಣ, ಅಂಬಿಯವರ ಜೀವನ ಚರಿತ್ರೆಗಳಿಗೆ ರಮೇಶ್ ಕೊಡುವಂಥ ಹೆಸರುಗಳನ್ನ ಕೇಳಿ!

ಕನ್ನಡ ಚಿತ್ರರಂಗದ ಮೇರು ನಟರುಗಳಾದ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್ ಮತ್ತು ಶಂಕರ್ ನಾಗ್ ಅವರುಗಳು ಕನ್ನಡ ಚಿತ್ರರಂಗಕ್ಕೆ ಭದ್ರ ಭುನಾದಿಗಳನ್ನು ಹಾಕಿಕೊಟ್ಟವರು ಎಂದರೆ ತಪ್ಪಾಗಲಾಗದು. ದಶಕಗಳ ವರೆಗೆ ಕನ್ನಡ ಚಿತ್ರರಂಗವನ್ನು ಆಳಿ ಅದ್ಬುತ ಚಿತ್ರಗಳ ಮೂಲಕ ಜನರ ಮನಸಿನಲ್ಲಿ ಶಾಸ್ವತವಾಗಿ ಉಳಿದುಕೊಂಡಿರುವ ಇಂತಹ ಮಹಾನು ವ್ಯಕ್ತಿಗಳ ಜೀವನ ಚರಿತ್ರೆ ಬರೆದರೆ ಅವಕ್ಕೆ ಏನಂತ ಹೆಸರು ಇಡಬಹುದು? ಈ ಪ್ರಶ್ನೆಗೆ ಒಬ್ಬೊಬರು ಒಂದೊಂದು ರೀತಿಯ ಉತ್ತರವನ್ನು ನೀಡುತ್ತಾರೆ. ಹಾಗೆಯೇ ಒಂದು ವೇಳೆ ನಟ ನಿರ್ದೇಶಕ ರಮೇಶ್ ಅರವಿಂದ್ ಈ ಹಿರಿಯ ನಟರುಗಳ ಜೀವನ ಚರಿತ್ರೆಯನ್ನು ಬರೆದರೇ ಅವಕ್ಕೆ ಯಾವ ಹೆಸರುಗಳನ್ನೂ ನೀಡುತ್ತಾರೆ ಗೊತ್ತಾ? ಬನ್ನಿ ಅವರ ಮಾತಲ್ಲೇ ಕೇಳೋಣ!

 

 

ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದ ಮೊನ್ನೆಯ ಸಂಚಿಕೆಯಲ್ಲಿ ಬಟರ್ ಫ್ಲೈ ಚಿತ್ರತಂಡ ಅಥಿತಿಗಳಾಗಿ ಬಂದಿದ್ದರು. ನಟ ನಿರ್ದೇಶಕ ರಮೇಶ್ ಅರವಿಂದ್ ಮತ್ತು ಅವರ ಸ್ನೇಹಿತ ಗೌರವ್ ಯಾರಿಗಳಾಗಿ ಬಂದಿದ್ದರೇ ನಟಿ ಪರೂಲ್ ಯಾದವ್ ವಿಶೇಷ ಅಥಿತಿಯಾಗಿ ಬಂದಿದ್ದರು. ಸ್ವಲ್ಪ ಮೋಜು ಮಸ್ತಿ ಹರಟೆಗಳೊಂದಿಗೆ ಮಾತುಕತೆ ನಡೆಸುವ ಈ ಕಾರ್ಯಕ್ರಮದಲ್ಲಿ ಶಿವಣ್ಣ ಕೇಳುವ ಥರಥರ ಪ್ರಶ್ನೆಗಳಿಗೆ ಅಥಿತಿಗಳು ಮುಕ್ತವಾಗಿ ಉತ್ತರ ಕೊಡಬೇಕು ಎನ್ನುವುದು ಕಾರ್ಯಕ್ರಮದ ನಿಯಮ. ಅದರಂತೆ ಬಟರ್ ಫ್ಲೈ ಚಿತ್ರತಂಡದವ್ರು ಕೂಡ ತಮ್ಮ ಕುರಿತಾತ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಶಿವಣ್ಣನ ಮುಂದೆ ಬಿಚ್ಚಿಟ್ಟಿದ್ದಾರೆ.

 

 

ಕಾರ್ಯಕ್ರಮದಲ್ಲಿ ರಮೇಶ್ ಅವರಿಗೆ ಶಿವಣ್ಣ “ಒಂದು ವೇಳೆ ಈ ನಟರುಗಳ ಜೀವನ ಚರಿತ್ರೆಯನ್ನು ಬರೆದರೆ ಯಾವ ಹೆಸರನ್ನು ಇಡುತ್ತೀರಾ?” ಎಂದು ಕೇಳಿದರು. ಪ್ರಶ್ನೆಗನುಗುಣವಾಗಿ ರಮೇಶ್ ಅವರು ಶಿವಣ್ಣ ಸೂಚಿಸುವ ನಟರುಗಳ ವ್ಯಕ್ತಿತ್ವಗಳಿಗನುಗುಣವಾಗಿ ಒಂದೊಂದು ಹೆಸರನ್ನು ಕೊಡುತ್ತಾ ಹೋದರು..

ರಾಜ್ ಕುಮಾರ್ ಅವರ ಜೀವನ ಚರಿತ್ರೆಗೆ ‘ಪ್ರೀತಿಯ ವಿಳಾಸ’, ಡಾ.ವಿಷ್ಣುವರ್ಧನ್ ಅವರ ಜೀವನ ಚರಿತ್ರೆಗೆ ‘ಸಿಂಹ ಘರ್ಜನೆ’, ಶಂಕರ್ ನಾಗ್ ಚರಿತ್ರೆಗೆ ‘ಆಕಾಶದ ಆಚೆಗೆ ಕನಸು’,ಮತ್ತು ಅಂಬರೀಶ್ ಅವರ ಚರಿತ್ರೆಗೆ ಸ್ನೇಹಲೋಕ ಎಂಬ ಹೆಸರನ್ನು ನೀಡುತ್ತೇನೆ ಎಂದು ಉತ್ತರ ನೀಡಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top