ಕಿರುತೆರೆ

ಶಂಕ್ರಣ್ಣನ ಅದ್ಭುತ ಕನಸುಗಳು ಬಗ್ಗೆ ರಮೇಶ್ ಅರವಿಂದ್ ಹೇಳಿದ್ದೇನು ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ಎಂದೂ ಮರೆಯದ ಅಚ್ಚಳಿದ ಛಾಪು ಮೂಡಿಸಿ ಮರೆಯಾದವರು ಶಂಕರ್‌ನಾಗ್. ಆದರೆ ಮರೆಯಾಗಿ ದಶಕಗಳೇ ಉರುಳಿದರೂ ತಮ್ಮ ಚಿತ್ರಗಳ ಮೂಲಕ, ಬೆರಗಾಗುವಂಥಾ ಕ್ರಿಯೇಟಿವಿಟಿಯ ಮೂಲಕ ಇಂದಿಗೂ ಅವರ ಛಾಯೆ ಹಾಗೆಯೇ ಉಳಿದುಕೊಂಡಿದೆ. ಕನ್ನಡದ ಪ್ರತೀ ಮನಸುಗಳ ಮೇಲೆಯೂ ಸಾರ್ವತ್ರಿಕವಾಗಿ ಶಂಕರ್ ನಾಗ್ ಅವರ ನೆನಪಿನ ಮೊಹರು ಪಡಿಮೂಡಿದೆ. `ಛೇ ಅವರು ಬದುಕಿರಬೇಕಿತ್ತು’ ಅಂತ ಅದೆಷ್ಟು ಮನಸುಗಳು ಏಕಕಾಲದಲ್ಲಿಯೇ ಲೊಚಗುಟ್ಟುತ್ತಿವೆಯೋ. ಇಂಥಾ ಶಂಕರ್ ನಾಗ್ ಅವರ ನೆನಪುಗಳು ಮತ್ತೆ ಮತ್ತೆ ಆಗುತ್ತಲೇ ಇರುತ್ತವೆ ಮೊನ್ನೆಯ ಟಿವಿ ಕಾರ್ಯಕ್ರಮದಲ್ಲೂ ಕೂಡ ಶಂಕರ್ ನಾಗ್ ಅವರ ವಿಶಾಲ ಮನಸ್ಸಿನ ಬೃಹತ್ ಕೆನಸುಗಳ ಅನಾವರಣವಾಗಿದೆ.

 

 

ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದ ಮೊನ್ನೆಯ ಸಂಚಿಕೆಯಲ್ಲಿ ಬಟರ್ ಫ್ಲೈ ಚಿತ್ರತಂಡ ಅಥಿತಿಗಳಾಗಿ ಬಂದಿದ್ದರು. ನಟ ನಿರ್ದೇಶಕ ರಮೇಶ್ ಅರವಿಂದ್ ಮತ್ತು ಅವರ ಸ್ನೇಹಿತ ಗೌರವ್ ಯಾರಿಗಳಾಗಿ ಬಂದಿದ್ದರೇ ನಟಿ ಪರೂಲ್ ಯಾದವ್ ವಿಶೇಷ ಅಥಿತಿಯಾಗಿ ಬಂದಿದ್ದರು. ಸ್ವಲ್ಪ ಮೋಜು ಮಸ್ತಿ ಹರಟೆಗಳೊಂದಿಗೆ ಮಾತುಕತೆ ನಡೆಸುವ ಈ ಕಾರ್ಯಕ್ರಮದಲ್ಲಿ ಶಿವಣ್ಣ ಕೇಳುವ ಥರಥರ ಪ್ರಶ್ನೆಗಳಿಗೆ ಅಥಿತಿಗಳು ಮುಕ್ತವಾಗಿ ಉತ್ತರ ಕೊಡಬೇಕು ಎನ್ನುವುದು ಕಾರ್ಯಕ್ರಮದ ನಿಯಮ. ಅದರಂತೆ ಬಟರ್ ಫ್ಲೈ ಚಿತ್ರತಂಡದವ್ರು ಕೂಡ ತಮ್ಮ ಕುರಿತಾತ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಶಿವಣ್ಣನ ಮುಂದೆ ಬಿಚ್ಚಿಟ್ಟಿದ್ದಾರೆ.

 

 

ಕಾರ್ಯಕ್ರಮದಲ್ಲಿ ರಮೇಶ್ ಅವರಿಗೆ ಶಿವಣ್ಣ “ಒಂದು ವೇಳೆ ಈ ನಟರುಗಳ ಜೀವನ ಚರಿತ್ರೆಯನ್ನು ಬರೆದರೆ ಯಾವ ಹೆಸರನ್ನು ಇಡುತ್ತೀರಾ?” ಎಂದು ಕೇಳಿದರು. ಪ್ರಶ್ನೆಗನುಗುಣವಾಗಿ ರಮೇಶ್ ಅವರು ಶಿವಣ್ಣ ಸೂಚಿಸುವ ನಟರುಗಳ ವ್ಯಕ್ತಿತ್ವಗಳಿಗನುಗುಣವಾಗಿ ಒಂದೊಂದು ಹೆಸರನ್ನು ಕೊಡುತ್ತಾ ಹೋದರು. ಆ ವೇಳೆ ಶಂಕರ್ ನಾಗ್ ಅವರ ಹೆಸರು ಬಂದಾಗ ರಮೇಶ್ ಡೀಮ್ಸ್ ಬಿಯಾಂಡ್ ಕ್ರೆಡಿಟ್ ಡಿಬಿಟ್’ ಅಥವಾ ‘ಆಕಾಶದ ಆಚೆಗೆ ಕನಸು” ಎಂಬ ಹೆಸರನ್ನು ಹೇಳಿ ಅದಕ್ಕೆ ಸ್ವಲ್ಪ ಜಾಸ್ತಿಯೇ ವಿವರಣೆ ನೀಡಿದರು. ತಮ್ಮ ಮತ್ತು ಶಂಕರ್ ನಾಗ್ ಅವರ ನಡುವೆ ನಡೆದ ಒಂದು ಘಟನೆಯನ್ನು ಮೆಲುಕುಹಾಕಿದರು.

 

 

ಶಂಕರ್ ನಾಗ್ ಬಗ್ಗೆ ರಮೇಶ್ ಅರವಿಂದ್ ಹೇಳಿದಿಷ್ಟು!
”ಒಂದು ದಿನ ಪುಂಡ ಪ್ರಚಂಡ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು ಆವಾಗ ಶಂಕರ್ ‘ಕಂಟ್ರಿ ಕ್ಲಬ್’ ಕಟ್ಟುತ್ತಿದ್ದರು. ನಾನಿನ್ನು ಆಗ ತಾನೇ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದೆ. ಅವರು ನನ್ನನ್ನು ‘ಕಂಟ್ರಿ ಕ್ಲಬ್’ ಗೆ ಕರೆದುಕೊಂಡು ಹೋದರು. ಅಲ್ಲಿ ”ಸರ್ ನೀವು ಏನೇನೋ ಕನಸು ಕಾಣುತ್ತಿದ್ದೀರಾ, ಎಲ್ಲೆಲ್ಲಿಂದಲೋ ಸಾಲ ತೆಗೆದುಕೊಳ್ಳುತ್ತಿದ್ದೀರಾ. ನಿಮ್ಮ ಕೈಲಾಗೋದಕ್ಕಿಂತ ಜಾಸ್ತಿಯೇ ಲೋನ್ ತಗೋತಿದ್ದೀರಾ ಅಂತ ಅನಿಸುತ್ತಿದೆ” ಅಂತ ನಾನು ಕೇಳಿದೆ.

ಆಗ ಅವರು ‘ಈ ಕ್ರೆಡಿಟ್, ಡೆಬಿಟ್ ಎಲ್ಲ ಅಕೌಂಟ್ಸ್ ಬುಕ್ ನಲ್ಲಿರೋ ಕಾಲಂಗಳಷ್ಟೇ ರಮೇಶ್. ಅವುಗಳು ನಮ್ಮ ಕನಸುಗಳಿಗೆ ಅಡ್ಡ ಬರಬಾರದು’ ಎಂದರು. ಆಗ ನಾನು ನಿಮ್ಮ ಕನಸುಗಳು ಆಕಾಶಕ್ಕಿಂತ ಎತ್ತರಕ್ಕಿವೆ ಅಂತ ಮನಸಿನಲ್ಲೇ ಅಂದುಕೊಂಡೆ. ಹಾಗಾಗಿ ಒಂದುವೇಳೆ ಶಂಕರ್ ನಾಗ್ ಅವರ ಜೀವನ ಚರಿತ್ರೆಯನ್ನ ನಾನೇನಾದರೂ ಬರೆದರೆ ಅದಕ್ಕೆ ‘ಡೀಮ್ಸ್ ಬಿಯಾಂಡ್ ಕ್ರೆಡಿಟ್ ಡಿಬಿಟ್’ ಅಥವಾ ‘ಆಕಾಶದ ಆಚೆಗೆ ಕನಸು’ ಅಂತ ಇಡುತ್ತೇನೆ ಅಂದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top