fbpx
ಕಿರುತೆರೆ

ಈ ವ್ಯಕ್ತಿಯನ್ನ ತಬ್ಬಿಕೊಂಡ ಮೇಲೆ ಶಿವಣ್ಣ ಮೂರು ದಿನ ಸ್ನಾನ ಮಾಡಿರಲಿಲ್ಲ! ಯಾರವರು?

ಕನ್ನಡ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡು ಅಭಿಮಾನದಾಚೆಗೂ ಆದರಕ್ಕೆ ಪಾತ್ರರಾಗಿರುವವರು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್..ವಯಸು ಐವತ್ತು ದಾಟಿದ್ದರು ಇಂದಿಗೂ ಮೂವತ್ತರ ಯುವಕರಂತೆ ಎನರ್ಜಿ ಹೊಂದಿರುವ ಶಿವಣ್ಣ ಸದ್ಯ ಚಿತ್ರರಂಗದಲ್ಲಿ ಅತ್ಯಂತ ಬ್ಯುಸಿ ಇರುವ ನಟ. ಇದರ ನಡುವೆಯೂ ಶಿವಣ್ಣ ಖಾಸಗಿ ವಾಹಿನಿಯೊಂದರಲ್ಲಿ ಯಾರಿ ನಂಬರ್.1 ವಿಥ್ ಶಿವಣ್ಣ ಎಂಬ ಟಾಕ್ ಶೋವನ್ನು ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಿವಣ್ಣ ತಮ್ಮ ಹಿಂದಿನ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.. ಏನು ಆ ಘಟನೆ ಅಂತೀರಾ? ಮುಂದೆ ಓದಿ.

 

 

ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದ ಮೊನ್ನೆಯ ಸಂಚಿಕೆಯಲ್ಲಿ ಬಟರ್ ಫ್ಲೈ ಚಿತ್ರತಂಡ ಅಥಿತಿಗಳಾಗಿ ಬಂದಿದ್ದರು. ನಟ ನಿರ್ದೇಶಕ ರಮೇಶ್ ಅರವಿಂದ್ ಮತ್ತು ಅವರ ಸ್ನೇಹಿತ ಗೌರವ್ ಯಾರಿಗಳಾಗಿ ಬಂದಿದ್ದರೇ ನಟಿ ಪರೂಲ್ ಯಾದವ್ ವಿಶೇಷ ಅಥಿತಿಯಾಗಿ ಬಂದಿದ್ದರು. ಸ್ವಲ್ಪ ಮೋಜು ಮಸ್ತಿ ಹರಟೆಗಳೊಂದಿಗೆ ಮಾತುಕತೆ ನಡೆಸುವ ಈ ಕಾರ್ಯಕ್ರಮದಲ್ಲಿ ಶಿವಣ್ಣ ಕೇಳುವ ಥರಥರ ಪ್ರಶ್ನೆಗಳಿಗೆ ಅಥಿತಿಗಳು ಮುಕ್ತವಾಗಿ ಉತ್ತರ ಕೊಡಬೇಕು ಎನ್ನುವುದು ಕಾರ್ಯಕ್ರಮದ ನಿಯಮ. ಅದರಂತೆ ಬಟರ್ ಫ್ಲೈ ಚಿತ್ರತಂಡದವ್ರು ಕೂಡ ತಮ್ಮ ಕುರಿತಾತ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಶಿವಣ್ಣನ ಮುಂದೆ ಬಿಚ್ಚಿಟ್ಟಿದ್ದಾರೆ.

 

 

ಕಾರ್ಯಕ್ರಮದಲ್ಲಿ ಲೋಕಾಭಿರಾಮವಾಗಿ ಚರ್ಚೆ ನಡೆಸುವಾಗ ತಮಿಳು ನಟ ಕಮಲ್ ಹಾಸನ್ ಅವರ ಬಗ್ಗೆ ವಿಚಾರ ಬಂತು ಆಗ ಶಿವಣ್ಣ “ನಾನು ಕಮಲ್ ಹಾಸನ್ ಅವರ ದೊಡ್ಡ ಫ್ಯಾನ್, ಅವರ ಎಲ್ಲ ಚಿತ್ರಗಳನ್ನೂ ಮಿಸ್ ಮಾಡದೆ ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದೆ. ಅವರ ಸಿನಿಮಾ ರಿಲೀಸ್ ಆಗುವ ಟೈಮ್ ನಲ್ಲಿ ರಾಜಕುಮಾರ್ ಮನೆಗೆ ಟಿಕೆಟ್ ಬೇಕು ಅಂತ ಸುಳ್ಳು ಹೇಳಿ ಹದಿನೈದು ಟಿಕೆಟ್ ತರಿಸಿಕೊಂಡು ಫ್ರೆಂಡ್ಸ್ ಜೊತೆ ಹೋಗಿ ಸಿನಿಮಾ ನೋಡುತ್ತಿದ್ದೆ. ಆಗ ನನಗೆ 14-15 ವರ್ಷ ವಯಸ್ಸು ಅನ್ಸುತ್ತೆ. ಚೆನ್ನೈನಲ್ಲಿ ಒಮ್ಮೆ ಅವರನ್ನು ಭೇಟಿಯಾಗಿ ತಬ್ಬಿಕೊಂಡಾಗ ನಾನು ಮೂರು ದಿನ ಸ್ನಾನನೇ ಮಾಡಿರಲಿಲ್ಲ” ಎಂದು ಶಿವಣ್ಣ ಕಮಲ್ ಹಾಸನ್ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top