ದೇವರು

ಶಿವನಿಗೆ ನಾಗಾಭರಣ, ನಾಗಾರ್ಜುನ ಎನ್ನುವ ಹೆಸರು ಏಕೆ ಬಂತು. ಸರ್ಪವನ್ನು ತನ್ನ ಕುತ್ತಿಗೆಯಲ್ಲಿ ಏಕೆ ಸುತ್ತು ಕೊಂಡಿದ್ದಾನೆ , ಅದರ ಹಿಂದಿರುವ ರಹಸ್ಯ ಏನು ಗೊತ್ತಾ

ಶಿವನಿಗೆ ನಾಗಾಭರಣ, ನಾಗಾರ್ಜುನ ಎನ್ನುವ ಹೆಸರು ಏಕೆ ಬಂತು. ಸರ್ಪವನ್ನು ತನ್ನ ಕುತ್ತಿಗೆಯಲ್ಲಿ ಏಕೆ ಸುತ್ತು ಕೊಂಡಿದ್ದಾನೆ ? ಅದರ ಹಿಂದಿರುವ ರಹಸ್ಯ ಏನು ? ಎಂಬುದು ನಿಮಗೆ ಗೊತ್ತಾ ?

 

 

ಮಹೇಶ್ವರನ ಕೊರಳಿನಲ್ಲಿ ಇರುವ ಸರ್ಪವನ್ನು ತಾವೆಲ್ಲರೂ ನೋಡಿರುತ್ತೀರಾ. ಶಿವನು ಏತಕ್ಕಾಗಿ ಈ ಸರ್ಪವನ್ನು ತನ್ನ ಕೊರಳಿನಲ್ಲಿ ಸುತ್ತು ಕೊಂಡಿದ್ದಾನೆ. ಪರಮೇಶ್ವರನ ಕುತ್ತಿಗೆಯಲ್ಲಿರುವ ನಾಗರಹಾವು, ನಾಗಾಭರಣವಾಗಿ ನಾಗ ಸರ್ಪ ವಾಸುಕಿ  ಆ ಪರಮೇಶ್ವರನ ಸೇವೆಯನ್ನು ಮಾಡುತ್ತಾ ಪುನೀತಳಾಗುತ್ತಿದ್ದಾಳೆ.

 

ಇದರ ಹಿಂದಿರುವ  ಈ ಕಥೆ.

 

ಕಶ್ಯಪ  ಪ್ರಜಾಪತಿಗೆ ಇರುವ ಹದಿನಾಲ್ಕು ಜನ  ಪತ್ನಿಯರಲ್ಲಿ ವಿನುತಾ ಕದೃಮ  ಎಂಬ ಇಬ್ಬರು ಹೆಂಡತಿಯರು ಇದ್ದರು. ವಿನುತಳಿಗೆ ಗರುಡ ಮತ್ತು ಅನುರಾ ಎಂಬ ಇಬ್ಬರು ಪುತ್ರರಿದ್ದರು, ಇವರಲ್ಲಿ ಅನುರನು ಸೂರ್ಯನ ರತ ಸಾರಥಿಯಾಗಿ ಕಾರ್ಯವನ್ನು ನಿರ್ವಹಿಸುತ್ತಾ ಇರುತ್ತಾನೆ.

ಕದೃವಳಿಗೆ ಸಾವಿರ ಸರ್ಪಗಳ ಸಂತಾನ. ಇವರಲ್ಲಿ ಹಿರಿಯವನು ಆದಿಶೇಷನು. ಕ್ಷೀರ  ಸಮುದ್ರದ ಬಳಿ ಇರುವ ಉಚೈಶ್ರಮ ಎಂಬ ಪ್ರದೇಶದಲ್ಲಿ ಒಂದು ಬಿಳಿಯ  ಕುದುರೆಯನ್ನು ದೂರದಿಂದ ನೋಡಿದ ಕದ್ರುವ, ತನ್ನ ಸಹೋದರಿ ವಿನುತಾಳೊಂದಿಗೆ ಅದರ ಬಾಲ ಕಪ್ಪಾಗಿದೆ ಎಂದು ಹೇಳುತ್ತಾಳೆ. ಆದರೆ ಅದನ್ನು ವಿನುತಾ ಅಂಗೀಕರಿಸದೆ. ಇಲ್ಲ ಇಲ್ಲ ಬಾಲ  ಕೂಡ ಬಿಳಿಯಾಗಿದೆ  ಎಂದು ವಾದಿಸುತ್ತಾಳೆ.

 

 

ಹಾಗೆ ಇಬ್ಬರೂ ವಾದಿಸುತ್ತಾ ಭಿನ್ನಾಭಿಪ್ರಾಯ ಮೂಡುತ್ತದೆ. ವಿಷಯ ಗಂಭೀರವಾಗುತ್ತದೆ. ಆಗ ಬಾಲ ಕಪ್ಪಾಗಿದ್ದರೆ ಅಕ್ಕ ತನ್ನ ಬಳಿ ಸಾವಿರ ವರ್ಷಗಳು ದಾಸಿಯಾಗಿ ಕೆಲಸ ಮಾಡಬೇಕೆಂದು ಹೇಳುತ್ತಾಳೆ. ಒಂದು ವೇಳೆ ಬಾಲ ಬಿಳಿಯಾಗಿದ್ದರೆ ತಾನೇ ವಿನುತಾಳ ಬಳಿ ಸಾವಿರ ವರ್ಷ ದಾಸಿಯಾಗಿ ಕೆಲಸ ಮಾಡುತ್ತೇನೆ ಎಂದು ಆಳಾಗಿ ದುಡಿಯುತ್ತಾನೆ ಎಂದು ಕದ್ರುವಿಗೆ ಸವಾಲು ಹಾಕಿ ಹೇಳುತ್ತಾಳೆ.

ಅಷ್ಟರಲ್ಲಿ ಆಗಲೇ ಕತ್ತಲಾಗಿದ್ದರಿಂದ ಪ್ರಾತ ಕಾಲದಲ್ಲಿ ಬೆಳಗ್ಗೆ ಬೇಗನೆ ಎದ್ದು ಪರೀಕ್ಷಿಸೋಣ ಎಂದು ಹೊರಟು ಹೋಗುತ್ತಾರೆ. ಆದರೆ ಕುದುರೆಯ ಬಾಲ ಬಿಳಿಯ ಬಣ್ಣದ್ದೇ ಆಗಿರುತ್ತದೆ.ಅದನ್ನು ತಿಳಿದುಕೊಂಡ ಕದೃವ  ಆ ಸಮಯದಲ್ಲಿ ಆ ಸವಾಲನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂಬ ಉದ್ದೇಶದಿಂದ ಒಂದು ಯೋಚನೆಯನ್ನು ಮಾಡುತ್ತಾಳೆ. ತಟ್ಟನೆ ಆಕೆಗೆ ಒಂದು ಯೋಚನೆ ನೆನಪಾಗುತ್ತದೆ.

ತನ್ನ ಮಕ್ಕಳನ್ನು ಬಳಿಗೆ ಕರೆದು ಕಪ್ಪಾಗಿ ಇರುವವರು ಹೋಗಿ ಕುದುರೆಯ ಬಾಲವನ್ನು ಸುತ್ತಿಕೊಳ್ಳಬೇಕು ಎಂದು ಕೇಳಿಕೊಳ್ಳುತ್ತಾಳೆ .ಇದನ್ನು ಮಕ್ಕಳು ಅಂಗೀಕರಿಸುವುದಿಲ್ಲ . ಇದು ಧರ್ಮ ಬದ್ಧವಾದದ್ದು  ಆಲ್ಲವೆಂದು ವಾದಿಸುತ್ತಾರೆ. ತಾಯಿಗೆ ತಿಳಿ ಹೇಳಿ ಬುದ್ಧಿವಾದ ಹೇಳುತ್ತಾರೆ ,ಆದರೆ ಅವರ ವಾದ ಧರ್ಮದ ಮಾತುಗಳನ್ನು ಕೇಳಿದ ಕದೃವ ಕೋಪೋದ್ರಿಕ್ತಳಾಗಿ ತಾಯಿಯ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಮಾತು ಮೀರುತ್ತಿರುವುದರಿಂದ, ಮುಂದೆ ಭವಿಷ್ಯತ್ತಿನಲ್ಲಿ ಜರುಗುವ ಸರ್ಪ ಯಾಗದಲ್ಲಿ ಸರ್ಪಗಳು ಬಿದ್ದು ಸರ್ವನಾಶವಾಗುತ್ತವೆ ಎಂದು ಶಾಪ ನೀಡುತ್ತಾಳೆ.

 

 

ಹೀಗೆ ಶಾಪಕ್ಕೆ ಗುರಿಯಾದ ಕೆಲವು ಸರ್ಪಗಳು ಯಾವುದೇ ಅಭ್ಯಂತರ ಇಲ್ಲದೆ ಕುದುರೆಯ ಬಾಲವನ್ನು ಸುತ್ತಿಕೊಳ್ಳುವುದರಿಂದ ಕುದುರೆಯ ಬಾಲ ಕಪ್ಪು ಬಣ್ಣಕ್ಕೆ ತಿರುಗಿದೆ ಎಂದು ಭ್ರಮಿಸುತ್ತಾಳೆ  ವಿನುತ. ಆಗ ವಿನುತಾ ತನ್ನ ಮಾತಿನಂತೆ ಕುದ್ರುವಳನ್ನು ತನ್ನ  ಬಳಿ ದಾಸಿಯಾಗಿ ತನ್ನ ಕೆಲಸವನ್ನು ಆರಂಭಿಸುತ್ತಾಳೆ.

ತದನಂತರ ಕೆಲವು ಕಾಲದ ಬಳಿಕ ಆಕೆಯ ಪುತ್ರನಾದ ಗರುಡ ಬಂದು ದಾಸಿ ಬಂಧನದಿಂದ ಆಕೆಗೆ ವಿಮುಕ್ತಿಯನ್ನು ಕೊಡಿಸುತ್ತಾನೆ. ತಾಯಿಯ ಮಾತನ್ನು ಪಾಲಿಸದ ಆದಿಶೇಷನು, ಶ್ರೀ ಮಹಾವಿಷ್ಣುವಿನ ಕುರಿತು ಘೋರ ತಪಸ್ಸು ಮಾಡುತ್ತಾನೆ. ಶ್ರೀಮನ್ನಾರಾಯಣನು ಆತನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾಗಿ ಆದಿಶೇಷನನ್ನು ತನ್ನ ಶೇಷ ತಲ್ಪವಾಗಿ ಇರು ಎಂದು ವರ ನೀಡುತ್ತಾನೆ . ಇದರಿಂದ ಅಂದಿನಿಂದ ಆದಿಶೇಷನು ಶ್ರೀಮನ್ನನಾರಾಯಣನ ಸೇವೆಯಲ್ಲಿ ತೊಡಗಿಕೊಂಡು ಅಕಾಲ ಮೃತ್ಯುವಿನ ಭಯವನ್ನು ತೊಲಗಿಸಿ ಕೊಳ್ಳುತ್ತಾನೆ.

 

 

ಎರಡನೆಯವನಾದ ವಾಸುಕಿಯು ಮಹೇಶ್ವರನಿಗಾಗಿ ಘೋರ ತಪಸ್ಸನ್ನು ಮಾಡಿ , ಶಂಭೋ ಶಂಕರನನ್ನು ಪ್ರತ್ಯಕ್ಷ ಮಾಡಿಕೊಂಡು ತನ್ನನ್ನು ಆಭರಣವಾಗಿ ಸ್ವೀಕರಿಸಬೇಕೆಂದು ಬೇಡಿಕೊಳ್ಳುತ್ತಾನೆ. ಹಾಗೆ ಮಹೇಶ್ವರನು ವಾಸುಕಿಯನ್ನು ತನ್ನ ಕಂಠಾಭರಣವಾಗಿ ಇರುವಂತೆ ಅಭಯ ನೀಡಿ ಮೃತ್ಯು ಭಯವನ್ನು ತೊಲಗಿಸುತ್ತಾನೆ.

ಶಿವ, ಶಂಕರ, ಬೋಲೇನಾಥ, ಮೃತ್ಯುಂಜಯ ಇದರಿಂದ ವಾಸುಕಿ ಕೂಡ ಪರಮೇಶ್ವರನ ಕಂಠವನ್ನು ಸೇರಿ ಮೃತ್ಯು ಭಯದಿಂದ ದೂರವಾದಳು ಎಂದು ಹೇಳಲಾಗುತ್ತದೆ . ಅಂದಿನಿಂದ ವಾಸುಕಿಯು ಮಹೇಶ್ವರನ ಕಂಠದಲ್ಲಿ ಆಭರಣವಾಗಿ  ಎಲ್ಲರಿಗೂ ದರ್ಶನ ನೀಡುತ್ತಾ ಶೋಭಾಯಮಾನವಾಗಿ ಬೆಳಗುತ್ತಿದೆ. ಆದ್ದರಿಂದಲೇ ನಾವು ಪರಮೇಶ್ವರನನ್ನು ನಾಗಾಭರಣ, ನಾಗಭೂಷಣ ಎಂದು ಕರೆದು ಪ್ರಾರ್ಥಿಸುತ್ತೇವೆ . ಇದು ಪರಮೇಶ್ವರನ ಕಂಠಕ್ಕೆ ಸರ್ಪ ವಾಸುಕಿ ನಾಗಾಭರಣವಾದ  ಕಥೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top