ಹೆಚ್ಚಿನ

224 ಕ್ಷೇತ್ರದ ಹೆಸರು ಸರಾಗವಾಗಿ ಹೇಳುವ 6ರ ಬಾಲಕ – ವಿಡಿಯೋ

ಶಿವಮೊಗ್ಗದ 6 ವರ್ಷದ ಹುಡುಗ ಈಗ ರಾಜ್ಯಮಟ್ಟದಲ್ಲಿ ಖ್ಯಾತಿ ಪಡೆದಿದ್ದಾನೆ. ಕೆಲವೇ ನಿಮಿಷದಲ್ಲಿ ಈತ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಹೆಸರನ್ನು ಪಟಪಟನೇ ಎಳ್ಳು ಹುರಿದ ಹಾಗೆ ಹೇಳುತ್ತಾನೆ. ಜಿಲ್ಲಾಧಿಕಾರಿಗಳು ಸಹ ಈ ಹುಡುಗನ ಸಾಧನೆಗೆ ಭೇಷ್ ಎಂದು ಹೇಳಿದ್ದಾರೆ.

 

 

ವಿಧಾನಸಭಾ ಮತಕ್ಷೇತ್ರ ಸಂಖ್ಯೆ ಒಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಿಂದ ಆರಂಭಿಸಿ 224 ನೇ ಕ್ಷೇತ್ರವಾದ ಗುಂಡ್ಲುಪೇಟೆವರೆಗೆ ತಪ್ಪಿಲ್ಲದಂತೆ ಹೇಳುವ ಈ ಬಾಲಕ ಅದರೊಂದಿಗೆ ಎಲ್ಲರೂ ಮೇ 12ರಂದು ನಡೆಯುವ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸುವಂತೆ ಮನವಿಯನ್ನೂ ಕೂಡ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

 

 

ಬಾಲಕ 224 ವಿಧಾನಸಭಾ ಮತಕ್ಷೇತ್ರ ಹೆಸರು ಹೇಳುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲರು ಬಾಲಕನಿಗೆ ಭೇಷ್ ಎನ್ನುತ್ತಿದ್ದಾರೆ. ಶಿವಮೊಗ್ಗದ ರಾಯಲ್ ಡೈಮಂಡ್ ಶಾಲೆಯ ಒಂದನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಇಂದ್ರಜಿತ್ ನನ್ನು ಜಿಲ್ಲಾಧಿಕಾರಿ ಎಂ.ಲೋಕೇಶ್ ಅವರು ಜಿಲ್ಲೆಯ ಚುನಾವಣಾ ಜಾಗೃತಿ ಅಭಿಯಾನದ ಐಕಾನ್ ಆಗಿ ಈ ಹುಡುಗ ಇಂದ್ರಜಿತ್ ನನ್ನು ಘೋಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬಾಲಕ ಇಂದ್ರಜಿತ್ ತಂದೆ ಶಿವಕುಮಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಣೆಹೊಸೂರಿನಲ್ಲಿ ಶಿಕ್ಷಕರಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಡಿಯೋ ನೋಡಿ:

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top