ಭವಿಷ್ಯ

ಮದುವೆ ಹೆಚ್ಚಿಗೆ ಕಾಲ ಬಾಳ್ಬೇಕು ಅಂತ ಆಸೆ ಇದ್ರೆ ಅಪ್ಪಿ ತಪ್ಪಿನೂ ಈ ರಾಶಿಯ ಜೋಡಿಗಳಿಗೆ ಮದುವೆ ಮಾಡ್ಬೇಡಿ

ಅತ್ಯಂತ ಭಯಾನಕ ಮತ್ತು ಅಪಾಯಕಾರಿ ಈ ರಾಶಿಯ ಜೋಡಿಗಳು. ಅವು ನಿಮ್ಮನ್ನು ವಿಪರೀತವಾಗಿ ಹಾಳು ಮಾಡುತ್ತವೆ.

 

ಈ ಜಗತ್ತು ಮತ್ತು ನಕ್ಷತ್ರಗಳು ತುಂಬಾ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಮಗೆ ಏನು ಇಷ್ಟ ? ಏನು ಇಷ್ಟವಿಲ್ಲ ? .ನಿಮ್ಮ ಗುಣ ಮತ್ತು ಸ್ವಭಾವವನ್ನು ತಿಳಿಸುತ್ತವೆ ನಿಮ್ಮ ರಾಶಿಗಳು. ರಾಶಿ ಒಂದು ಮುಖ್ಯವಾದ ಅಂಶಗಳಲ್ಲಿ ಒಂದಾಗಿದ್ದು, ತುಂಬಾ ಪ್ರಾಮುಖ್ಯತೆಯನ್ನು ಪಡೆದಿವೆ .ಅದು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಸಹ ತಿಳಿಸುತ್ತದೆ. ಆ ರಾಶಿ ಹೊಂದಾಣಿಕೆಯಾಗದೇ ಹೋದರೆ ವ್ಯಕ್ತಿಗಳು ಒಬ್ಬರು ಇನ್ನೊಬ್ಬರ ಮೇಲೆ ಯಾವುದೇ ಕಾರಣವಿಲ್ಲದೆ ಕೋಪ ಮತ್ತು ಜಗಳವಾಡಿಕೊಂಡು  ಕೊನೆಯಾಗುತ್ತವೆ .

 

 

ಈ ಜಗತ್ತಿನಲ್ಲಿ ತುಂಬಾ ಜನರಿದ್ದಾರೆ, ಅವರು ಜ್ಯೋತಿಷ್ಯದಲ್ಲಿ ನಂಬಿಕೆಯೇ ಇರುವುದಿಲ್ಲ. ಆದರೆ  ಆವರ ಸಾಮಾನ್ಯ ಗುಣ, ಸ್ವಭಾವ, ವ್ಯಕ್ತಿತ್ವ , ನಡೆ ,ನುಡಿ ಅವರ ರಾಶಿಯಲ್ಲಿ ನಮೂದಿಸಿರುವ ಪ್ರಕಾರವೇ ಅವರ ಗುಣ ಸ್ವಭಾವಗಳು ಇರುತ್ತವೆ. ಹಾಗೂ ಅದು ನಿಜ ಸಹ ಆಗಿದೆ .

ಇಲ್ಲಿ  ಸಂಪೂರ್ಣವಾಗಿ ರಾಶಿ ಜೋಡಿ ಅಥವಾ ಹೊಂದಾಣಿಕೆಯ ಬಗ್ಗೆ ವಿವರವನ್ನು ವಿವರಿಸಲಾಗಿದೆ. ಅವು ಅತ್ಯಂತ ಭಯಾನಕ ಮತ್ತು ಅಪಾಯಕಾರಿ ಎಂದು ಸಾಬೀತುಪಡಿಸಿದೆ. ಆದ್ದರಿಂದ ಇಲ್ಲಿ ನಾವು ಅಂತಹ ರಾಶಿಯ ಜೋಡಿಗಳನ್ನು ಹೇಳುತ್ತಿದ್ದೇವೆ. ಪ್ರತಿಯೊಂದು ವಿಷಯದಲ್ಲಿಯೂ ಸಹ ಅವು ತುಂಬಾ  ಅಪಾಯವನ್ನು ಉಂಟು ಮಾಡುತ್ತವೆ.

 

ಮೇಷ ಮತ್ತು ಕಟಕ ರಾಶಿ.

 

 

ಮೇಷ ಮತ್ತು ಕಟಕ ರಾಶಿಯ ಜೋಡಿಯು ಯಾವಾಗಲೂ ಅಸಮಾಧಾನದಿಂದಲೇ ಕೂಡಿರುತ್ತವೆ. ಜಗಳ ಇವರಿಬ್ಬರ ಮಧ್ಯೆ ಆಗಾಗ್ಗೆ ಉಂಟಾಗುತ್ತದೆ. ಮೇಷ ಮತ್ತು ಕಟಕ ರಾಶಿ ಎಂದಿಗೂ ಒಟ್ಟಿಗೆ ಕೆಲಸ ಮಾಡುವುದಿಲ್ಲ .ಯಾಕೆಂದರೆ ಅವರಿಬ್ಬರೂ ಸಹ ಒಬ್ಬರು ಇನ್ನೊಬ್ಬರ ನಿರ್ಧಾರಗಳನ್ನು ಒಪ್ಪಿಕೊಳ್ಳುವುದಿಲ್ಲ. ಇನ್ನೊಂದು ಕಡೆ ಕಟಕ ರಾಶಿಯವರು ತುಂಬಾ ಸೂಕ್ಷ್ಮ ಸ್ವಭಾವದವರಾಗಿದ್ದು ,ಮೇಷ ರಾಶಿಯವರು ತುಂಬಾ ಪ್ರಾಬಲ್ಯವನ್ನು ಹೊಂದಿದ್ದು, ಅಧಿಕಾರ ಚಲಾಯಿಸುವವರು ಆಗಿರುತ್ತಾರೆ. ಇವರಿಬ್ಬರೂ ಯಾವಾಗಲೂ ಅತ್ಯಂತ ಕೆಟ್ಟ ಜೋಡಿಗಳಾಗಿ ಸಾಬೀತು ಪಡಿಸಿಕೊಳ್ಳುತ್ತಾರೆ .

 

ವೃಷಭ ಮತ್ತು ಕುಂಭ ರಾಶಿ.

 

 

ಯಾರು ವೃಷಭ ಮತ್ತು ಕುಂಭ ರಾಶಿಯವರಾಗಿರುತ್ತಾರೆ, ಅವರು ತುಂಬಾನೇ ನೇರ ನುಡಿ ಮತ್ತು ನೇರ ವ್ಯಕ್ತಿತ್ವದವರಾಗಿದ್ದು, ಇವರು ತುಂಬಾ ಹೆಚ್ಚು ಪ್ರಾಬಲ್ಯವನ್ನು ಹೊಂದಿದವರಾಗಿದ್ದು ,ಅಂತಹ ಗುಣವನ್ನು ಸಹ ಹೊಂದಿರುತ್ತಾರೆ. ಪ್ರೀತಿಗೆ ಸಂಬಂಧಪಟ್ಟ ವಿಷಯಕ್ಕೆ ಬಂದಾಗ ವೃಷಭ ಮತ್ತು ಕುಂಭ ರಾಶಿ ಎಂದಿಗೂ ಒಟ್ಟಾಗಿ ಇರುವುದಿಲ್ಲ . ಎಲ್ಲಿಯೂ ಸಹ ಒಟ್ಟಾಗಿ ಕೆಲಸ ಮಾಡುವುದಿಲ್ಲ . ಯಾಕೆಂದರೆ ಈ ಎರಡು ರಾಶಿಯವರು ಮುಂಚೂಣಿಯಲ್ಲಿ ಪ್ರಾಬಲ್ಯದ ಗುಣವನ್ನು ಹೊಂದಿರುತ್ತಾರೆ. ಅವರು  ಒಬ್ಬರು ಇನ್ನೊಬ್ಬರಿಗೆ ಹೊಂದಿಕೊಂಡು ಹೋಗುವುದು ತುಂಬಾ ಕಷ್ಟಕರವಾಗುತ್ತದೆ. ಪ್ರತಿ ಬಾರಿಯೂ ಕೂಡ ಇವರ ಮಾತು  ಜಗಳಗಳಲ್ಲಿಯೇ  ಕೊನೆಯಾಗುತ್ತದೆ .

 

ವೃಶ್ಚಿಕ ಮತ್ತು ಮೇಷ ರಾಶಿ.

 

 

ಮೇಷ ರಾಶಿಯು ಅಗ್ನಿತತ್ತ್ವ ರಾಶಿಯಾಗಿದ್ದು, ವೃಶ್ಚಿಕ ರಾಶಿಯು  ಜಲತತ್ವ ರಾಶಿಯಾಗಿದೆ. ಅವರ ವ್ಯಕ್ತಿತ್ವ ಒಂದೇ ತರವಾಗಿ ಇರುತ್ತದೆ. ಇಬ್ಬರೂ ಸ್ಪರ್ಧಾತ್ಮಕವಾಗಿ ಗುಣವನ್ನು ಹೊಂದಿರುತ್ತಾರೆ ಮತ್ತು ಈ ಎರಡು ರಾಶಿಯವರು ಬೇಗನೆ ಕೋಪ ಮಾಡಿಕೊಳ್ಳುವ ಸ್ವಭಾವದವರಾಗಿದ್ದು, ಇವರಿಬ್ಬರ ಮಧ್ಯದಲ್ಲಿರುವ ಸಂಬಂಧ ಅಧಿಕ ದಿನಗಳವರೆಗೆ ಮತ್ತು ತುಂಬಾ ಸಮಯದವರೆಗೆ ಉಳಿಯುವುದಿಲ್ಲ .

 

ಸಿಂಹ ಮತ್ತು ವೃಶ್ಚಿಕ ರಾಶಿ .

 

 

ಸಿಂಹ ಮತ್ತು ವೃಶ್ಚಿಕ ರಾಶಿಯ ವ್ಯಕ್ತಿಗಳು, ಇವರಿಬ್ಬರೂ ತುಂಬಾ ಗಾಢವಾದ ವ್ಯಕ್ತಿತ್ವವನ್ನು ಹೊಂದಿದವರಾಗಿರುತ್ತಾರೆ . ಇದು ಅವರನ್ನು ಪ್ರಕೃತಿ ದತ್ತವಾಗಿ ಪ್ರಾಬಲ್ಯ ಹೊಂದಿರುವಂತೆ ಮಾಡುತ್ತದೆ. ಹಾಗೆ ಇವರು ತುಂಬಾ ನಾಟಕೀಯ ಸ್ವಭಾವದವರಾಗಿದ್ದು ಇಬ್ಬರೂ ಬೇರೆಯವರಿಗೆ ಸಲಹೆಯನ್ನೂ ಕೊಡುತ್ತಾರೆ . ಇವರಿಬ್ಬರೂ ಒಂದೇ ಮಾದರಿಯ ಗುಣ ಸ್ವಭಾವವನ್ನು ಹೊಂದಿರುತ್ತಾರೆ. ಅದು ಅವರಿಗೆ ಇಷ್ಟವಿಲ್ಲದೆ ಹೋದರೂ ರಾಜಿ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ. ಇಬ್ಬರೂ ಜೊತೆಗೆ ಎಂದಿಗೂ ಹೊಂದಿಕೊಂಡು ಹೋಗುವುದಿಲ್ಲ. ಯಾವುದೇ ಕೆಲಸವನ್ನು ಕೂಡ ಒಟ್ಟಾಗಿ ಮಾಡಲು ಇವರು ಅನುತ್ತೀರ್ಣರಾಗುತ್ತಾರೆ. ಶಾಂತಿ ಮತ್ತು ಸಹಬಾಳ್ವೆಯಿಂದ ಇವರು ಎಂದಿಗೂ ಜೀವನವನ್ನು ಸಾಗಿಸುವುದಿಲ್ಲ .

 

ಧನಸ್ಸು ಮತ್ತು ಕನ್ಯಾ ರಾಶಿ.

 

 

ಧನಸ್ಸು ಮತ್ತು ಕನ್ಯಾ ರಾಶಿಗಳ ಮದ್ಯೆ  ಎಂದಿಗೂ ಒಳ್ಳೆಯ ನೆನಪುಗಳು ಇರುವುದಿಲ್ಲ. ಇವರಿಬ್ಬರೂ ಹೊರಗೆ ಸುತ್ತಾಡಲು ಹೋದರೆ ಒಬ್ಬರು ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಧನಸ್ಸು ರಾಶಿಯವರು ಜೀವನದಲ್ಲಿ ತುಂಬಾ ಗುರಿಗಳನ್ನು ಹೊಂದಿದವರಾಗಿರುತ್ತಾರೆ. ಕನ್ಯಾ ರಾಶಿಯವರು ಒಂದು ರೀತಿಯಲ್ಲಿ ಶಾಂತ ಸ್ವಭಾವ ಮತ್ತು ಸಮಾಧಾನವಾಗಿ ಇರುತ್ತಾರೆ. ತುಂಬಾ ಕಷ್ಟಕರ ಪರಿಸ್ಥಿತಿಯಲ್ಲಿಯೂ ಸಹ  ಕನ್ಯಾ ರಾಶಿಯವರು ಸ್ಥಿರತೆಯನ್ನು ಕಾಪಾಡಿಕೊಂಡು ಹೋಗುತ್ತಾರೆ ಹಾಗೆ ಇರುವುದಕ್ಕೂ ಸಹ ಇವರು ಇಷ್ಟ ಪಡುತ್ತಾರೆ. ಆದರೆ ಧನಸ್ಸು ರಾಶಿಯವರು ತುಂಬಾ ಅಪಾಯವನ್ನು ತೆಗೆದುಕೊಳ್ಳುವಲ್ಲಿ ಮುಂದಾಗುತ್ತಾರೆ. ಆದ್ದರಿಂದ ಈ ಎರಡು ಜೋಡಿಗಳು ತುಂಬಾ ಅಪಾಯಕಾರಿ ಎಂದು ಸಾಬೀತು ಪಡಿಸಿವೆ .

ಕಟಕ ಮತ್ತು ತುಲಾ ರಾಶಿ .

 

 

ಕಟಕ ರಾಶಿ ಮಾನಸಿಕವಾಗಿ ಹೊಂದಾಣಿಕೆ ಯಾಗುವುದಕ್ಕೆ ನೋಡುತ್ತಾರೆ , ಆದರೆ ತುಲಾ ರಾಶಿಯವರು ಯಾವಾಗಲೂ ಭಾವನಾತ್ಮಕವಾಗಿ ಹೊಂದಾಣಿಕೆ ಯಾಗುವುದಕ್ಕೆ ನೋಡುತ್ತಾರೆ . ಒಬ್ಬರನ್ನು ಇನ್ನೊಬ್ಬರು ಅರ್ಥ ಮಾಡಿಕೊಳ್ಳುವ ವಿಷಯಕ್ಕೆ ಬಂದರೆ ಕಟಕ ಮತ್ತು ತುಲಾ ರಾಶಿ ಎಂದಿಗೂ ಕೂಡ ಒಬ್ಬರನ್ನು ಇನ್ನೊಬ್ಬರು ಅರ್ಥ ಮಾಡಿಕೊಳ್ಳುವುದಿಲ್ಲ. ಆದ್ದರಿಂದ ಇವರಿಬ್ಬರೂ ಕಿತ್ತಾಡಿಕೊಂಡ ಸಮಯವನ್ನು ಪ್ರತಿ ಬಾರಿಯೂ ಕೊನೆಗೊಳಿಸುತ್ತಾರೆ. ಇವರು ಒಬ್ಬರ ಮೇಲೆ ಇನ್ನೊಬ್ಬರಿಗೆ  ನಂಬಿಕೆ ಕೂಡ ಇರುವುದಿಲ್ಲ. ಆದ್ದರಿಂದ ಈ ಜೋಡಿಗಳು ದೂರ ಇರುವುದೇ ಒಳ್ಳೆಯದು.

 

ಸಿಂಹ ಮತ್ತು ಕನ್ಯಾ ರಾಶಿ.

 

 

ಸಿಂಹ ಮತ್ತು ಕನ್ಯಾ ರಾಶಿವರಿಬ್ಬರೂ ಕೂಡ ತರ್ಕಬದ್ಧವಾಗಿ  ಯೋಚನೆಯನ್ನು ಮಾಡುತ್ತಾರೆ . ಇದು ಇವರಿಬ್ಬರನ್ನು ಹತ್ತಿರ ಇರುವುದಕ್ಕೆ ಕಷ್ಟಕರವಾಗಿ ಮಾಡುತ್ತಾರೆ . ಆದರೆ ಈ ಎರಡು ರಾಶಿಯವರು ಒಬ್ಬರನ್ನು ಇನ್ನೊಬ್ಬರು ಅರ್ಥ ಮಾಡಿಕೊಳ್ಳುವುದರಲ್ಲಿ ಅನುತ್ತೀರ್ಣರಾಗುತ್ತಾರೆ. ಭಾವನಾತ್ಮಕವಾಗಿಯೂ ಸಂಬಂಧ ಇರುವುದಿಲ್ಲ. ಸಿಂಹ ರಾಶಿಯವರು ಕನ್ಯಾ ರಾಶಿಯ ಮೇಲೆ ತಮ್ಮ ಪ್ರಾಬಲ್ಯವನ್ನು ತೋರಿಸಲು ಹೋದರೆ ಇಬ್ಬರು ಕಿತ್ತಾಡಿಕೊಂಡು ಕೊನೆಯಾಗುತ್ತಾರೆ. ಕನ್ಯಾ ರಾಶಿಯವರು ಸಿಂಹ ರಾಶಿಯವರ ಮೇಲೆ ತಮ್ಮ ಪ್ರಾಬಲ್ಯವನ್ನು ತೋರಿಸಲು ಹೋದರೆ ಅದು ತುಂಬಾ ದೊಡ್ಡ ಜಗಳಕ್ಕೆ ತಿರುಗಿ ವಿಕೋಪಕ್ಕೆ ತಲುಪುತ್ತದೆ. ಮಾನಸಿಕ ಮತ್ತು ಭಾವನಾತ್ಮಕವಾಗಿ ಹೊಂದಾಣಿಕೆ ಇಲ್ಲದಿರುವುದರಿಂದ, ಇವರಿಬ್ಬರ ಜೋಡಿ ಎಂದಿಗೂ ಒಟ್ಟಾಗಿ ಇರುವುದಿಲ್ಲ, ಎಲ್ಲಿಯೂ ಒಟ್ಟಾಗಿ ಕೆಲಸ ಕೂಡ ಮಾಡುವುದಿಲ್ಲ.

ಇವು ಅತ್ಯಂತ ಅಪಾಯಕಾರಿ ರಾಶಿ ಜೋಡಿಗಳಾಗಿದ್ದು , ಈ ರಾಶಿಯವರು ಎಂದಿಗೂ ಕೂಡ ಸಂಬಂಧವನ್ನು ಬೆಳೆಸದೆ ಇರುವುದೇ ಒಳ್ಳೆಯದು .ಇನ್ನು ಕೆಲವು ರಾಶಿ ಜೋಡಿಗಳು ಹೀಗಿವೆ. ಅವುಗಳನ್ನು ಸಹ ಆದಷ್ಟು ತಡೆಗಟ್ಟಬೇಕು  ಮತ್ತು ಹಾಗೆ ತಡೆಗಟ್ಟಿದರೆ ಒಳ್ಳೆಯದು.

ತುಲಾ ಮತ್ತು ವೃಷಭ ರಾಶಿ.

ಕುಂಭ ಮತ್ತು ಕಟಕ ರಾಶಿ.

ಮೀನ ಮತ್ತು ಸಿಂಹ ರಾಶಿ.

ಮಿಥುನ ಮತ್ತು ಮಕರ ರಾಶಿ .

ಕನ್ಯಾ ಮತ್ತು ಮಿಥುನ ರಾಶಿ.

ಸಿಂಹ ಮತ್ತು ಕುಂಭ ರಾಶಿ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top