ಭವಿಷ್ಯ

ಯಾಕೆ ಸಂಖ್ಯೆ  7 ತುಂಬಾ ಅದೃಷ್ಟ ಅಂತ ಹೇಳ್ತಾರೆ , ಈ ಸಂಖ್ಯೆಯ ಜನರ ವ್ಯಕ್ತಿತ್ವ ಹೇಗಿರುತ್ತೆ ತಿಳ್ಕೊಬೇಕಾದ್ರೆ ಮುಂದೆ ಓದಿ

ಯಾಕೆ  ಸಂಖ್ಯೆ  7 ನ್ನು ಅದೃಷ್ಟದ ಸಂಖ್ಯೆ ಎಂದು ಪರಿಗಣಿಸಲಾಗಿದೆ ? ಈ 7 ನೇ ಸಂಖ್ಯೆಯನ್ನು  ಏನು ಅದೃಷ್ಟವಾಗಿ ಮಾಡುತ್ತದೆ ?

 

ಕೆಲವು ಸಂಖ್ಯೆಗಳಿವೆ. ಅವುಗಳನ್ನು ಸಾರ್ವತ್ರಿಕವಾಗಿ ಅದೃಷ್ಟದ ಸಂಖ್ಯೆಗಳು ಎಂದು ಪರಿಗಣಿಸಲಾಗಿದೆ. ಅದರಲ್ಲಿ ಸಂಖ್ಯೆ 7ನ್ನು ಕೂಡ ಅದೃಷ್ಟದ ಸಂಖ್ಯೆ ಎಂದು ಪರಿಗಣಿಸಲಾಗಿದೆ.

 

 

ಒಂದು ವಾರಕ್ಕೆ ಏಳು ದಿನಗಳು, ಕಾಮನ ಬಿಲ್ಲಿನಲ್ಲಿ ಇರುವ ಏಳು ಬಣ್ಣಗಳು, ವಾದ್ಯದಲ್ಲಿ ಇರುವ ಏಳು ಸಂಗೀತ ಸ್ವರಗಳು, ಸಪ್ತ ಸಾಗರಗಳು, ಏಳು ಖಂಡಗಳು, ಆದ್ದರಿಂದಲೇ ಸಂಖ್ಯೆ ಏಳು ಅವಶ್ಯಕವಾಗಿ ಈ ಜಗತ್ತಿನ ಮೆಚ್ಚಿನ ಸಂಖ್ಯೆಯಾಗಿದೆ.

 

ಹಿಂದೂ ಸಂಪ್ರದಾಯದಲ್ಲಿ ಸಂಖ್ಯೆ ಏಳರ ಪ್ರಾಮುಖ್ಯತೆ ಏನು ?

ಇಂದು ಇಲ್ಲಿ ನಾವು ಈ ಏಳನೇ ಸಂಖ್ಯೆಯಲ್ಲಿರುವ ಅದೃಷ್ಟದ ನಿಗೂಢತೆಯನ್ನು, ಅದರ ರಹಸ್ಯವನ್ನು ಭೇದಿಸಲಿದ್ದೇವೆ. ಅದು ಹೇಗೆ ? ಎಲ್ಲರಿಗೂ ಈ ಸಂಖ್ಯೆ ಅದೃಷ್ಟ ಎಂದೇ ಪರಿಗಣಿಸಲಾಗಿದೆ. ನಮ್ಮ ಭಾರತದ ಕ್ರಿಕೆಟ್ ತಂಡದ ನಾಯಕ ಎಮ್. ಎಸ್ ಧೋನಿಯಿಂದ ಹಿಡಿದು ರೊನಾಲ್ಡೊರ ತನಕ ಈ ಸಂಖ್ಯೆ ಅದೃಷ್ಟದ ಸಂಖ್ಯೆ ಎಂದು ಪರಿಗಣಿಸಿದ್ದಾರೆ. ತಾವು ಧರಿಸುವ ಟೀ ಶರ್ಟ್ (ಜರ್ಸಿ) ಮೇಲೆಯೂ ಕೂಡ ಇದೇ ಸಂಖ್ಯೆಯನ್ನು ನೀವು ನೋಡಬಹುದು .

 

ಅದು ಹೇಗೆ ಈ ಸಂಖ್ಯೆ ಇಷ್ಟೊಂದು ವಿಶೇಷತೆ ಮತ್ತು ಪ್ರಾಮುಖ್ಯತೆಯನ್ನು ಪಡೆದಿದೆ. ಎಂಬುದನ್ನು ನೋಡೋಣ ಬನ್ನಿ

 

 

1.ಈ ಸಂಖ್ಯೆಯನ್ನು ದೈವಿಕ ಸಂಖ್ಯೆ ಎಂದು ಪರಿಗಣಿಸಲಾಗಿದೆ.

ಆಧ್ಯಾತ್ಮಿಕ ಜಗತ್ತಿನಲ್ಲಿ ಸಂಖ್ಯೆ ಏಳನ್ನು ಸತ್ಯದ ಮಾರ್ಗವನ್ನು ದಾರಿಯನ್ನು  ಹುಡುಕಿಕೊಡುವ ಸಂಖ್ಯೆ ಎಂದು ಪರಿಗಣಿಸಲಾಗಿದೆ . ಈ ಸಂಖ್ಯೆ ಎಲ್ಲಿಯೂ ಕೂಡ ಯಾವುದೇ ಧರ್ಮಕ್ಕೆ ಸಂಬಂಧಪಟ್ಟಿಲ್ಲ ಅಥವಾ ಸೀಮಿತವಾಗಿಲ್ಲ. ಆದರೆ ಈ ಸಂಖ್ಯೆಯಲ್ಲಿ ಇರುವ  ಆ ಶಕ್ತಿಯನ್ನು ಏಕರೂಪವಾದ ಶಕ್ತಿಗೆ ಮೀಸಲಿಡಲಾಗಿದೆ .

 

2.ಯಾರೆಲ್ಲ ಜನರು ಈ ಸಂಖ್ಯೆಯನ್ನು ಅದೃಷ್ಟದ ಸಂಖ್ಯೆ ಎಂದು ಪರಿಗಣಿಸಿದ್ದಾರೆ ಎಂದರೆ

 

 

ಯಾವ ಜನರು ಈ ಸಂಖ್ಯೆಯನ್ನು ಅದೃಷ್ಟದ ಸಂಖ್ಯೆ ಎಂದು ಪರಿಗಣಿಸಿದ್ದಾರೆ ಎಂದರೆ ಅವರು ಆಧ್ಯಾತ್ಮಿಕವಾಗಿಯೂ, ಬುದ್ಧಿವಂತರಾಗಿಯೂ, ವಿಶ್ಲೇಷಣಾತ್ಮಕವಾಗಿಯೂ, ತಮ್ಮನ್ನು ತಾವು ಕೇಂದ್ರೀಕರಿಸಿ ಕೊಂಡು, ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ ಹೀಗೆ  ಇನ್ನೂ ಅನೇಕ.. ಹೀಗೆ ಇವುಗಳನ್ನು ಹೊರತುಪಡಿಸಿ ಅವರು ಬುದ್ಧಿವಂತರು, ಪ್ರತ್ಯಕ್ಷವಾದಿಗಳು ಮತ್ತು ಅತೀವವಾದ ಜ್ಞಾನ ಉಳ್ಳವರು ಸಹ ಆಗಿರುತ್ತಾರೆ.

3.ಈ ಸಂಖ್ಯೆ ಸೃಷ್ಟಿಕರ್ತನ ಒಳ ಜ್ಞಾನವನ್ನು ಪ್ರದರ್ಶಿಸುತ್ತದೆ .

ಯಾರ ಅದೃಷ್ಟದ ಸಂಖ್ಯೆ ಏಳು ಆಗಿರುತ್ತದೆ, ಅವರು ಕೆಲವು ನಿರ್ದಿಷ್ಟ ಗುಣಗಳನ್ನು ಹೊಂದಿರುತ್ತಾರೆ. ಅವರು ಚಿಂತನಶೀಲರು, ಗಂಭೀರ ವಾಗಿರುವವರು , ಸಂಸ್ಕಾರವಂತರು ಮತ್ತು ಮನೋಹರವಾದ ಲಕ್ಷಣಗಳನ್ನು ಹೊಂದಿದವರು ಆಗಿರುತ್ತಾರೆ. ಹಾಗೆ ಅವರು ತಮ್ಮ ಒಳಗಿರುವ ಅತೀವ ಜ್ಞಾನವನ್ನು ಸಹ ಹೊರಗೆ ಪ್ರದರ್ಶಿಸುತ್ತಾರೆ.

4.ಈ ಸಂಖ್ಯೆಯ ವ್ಯಕ್ತಿಗಳು ವ್ಯಕ್ತಿತ್ವ .

ಈ ಸಂಖ್ಯೆಯ ವ್ಯಕ್ತಿಗಳಿಗೆ ಹಣ ಎಂದರೆ ಏನೇನೂ ಅಲ್ಲ. ಯಾರು ಈ ಏಳನೇ ಸಂಖ್ಯೆಯನ್ನು ಅದೃಷ್ಟದ ಸಂಖ್ಯೆ ಎಂದು ಪರಿಗಣಿಸಿರುತ್ತಾರೆ , ಅವರಿಗೆ ಹಣವೆಂದರೆ ಏನೇನೂ ಅಲ್ಲ. ಹಾಗೆ ಅವರು ಎಂದಿಗೂ ಸಹ ತಮ್ಮ ಜೀವನದಲ್ಲಿ ಕೆಟ್ಟ ನಿರ್ಧಾರಗಳನ್ನು ಮತ್ತು ಕೆಟ್ಟ ಆಯ್ಕೆಗಳನ್ನು ಅವರು ಅಂದುಕೊಳ್ಳುವಷ್ಟು ಹಣ ಕಾಸಿನ ಆದಾಯವಿದ್ದರೂ ಸಹ  ಅಂತಹ ಕೆಟ್ಟ ನಿರ್ಧಾರಗಳನ್ನು ಎಂದಿಗೂ ತೆಗೆದುಕೊಳ್ಳುವುದಿಲ್ಲ. ಹಾಗೂ ಇವರು ಗಾಳಿ ಸುದ್ದಿಯನ್ನು ದ್ವೇಷಿಸುತ್ತಾರೆ.ಕೆಟ್ಟ ಮತ್ತು ಕ್ರೂರ ಮನಸ್ಸನ್ನು ಹೊಂದಿರುವ ಮನುಷ್ಯರಿಂದ ಮತ್ತು ಇವರಿಗೆ ಕೆಟ್ಟದ್ದನ್ನು ಅಥವಾ  ಅಪಾಯವನ್ನು ಉಂಟು ಮಾಡುವ ಮನುಷ್ಯರಿಂದಲೂ ಇವರು ಪ್ರತಿ ರಕ್ಷಣೆಯನ್ನು ಸಹ ಪಡೆದವರಾಗಿರುತ್ತಾರೆ.

 

 

5.ಯಾವ ಮಹಿಳೆಯರು ಈ ಸಂಖ್ಯೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೋ .

ಯಾವ ಮಹಿಳೆಯರು ಈ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೋ, ಅವರು ತುಂಬಾ ಸುಂದರವಾಗಿ ಇರುತ್ತಾರೆ ಎಂದು ನಂಬಲಾಗಿದೆ. ಅವರು ಕನ್ನಡಿಯ ಮುಂದೆ ಗಡಿಬಿಡಿ ಮಾಡಿಕೊಳ್ಳುವುದಿಲ್ಲ ಅಥವಾ ಗಡಿಬಿಡಿ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ .ಆದರೆ ನೋಡಲು ತುಂಬಾ ಆಕರ್ಷಕರಾಗಿ ಇರುತ್ತಾರೆ .ನಿಜ ಏನೆಂದರೆ ಇವರ ಸುತ್ತ ಮುತ್ತ ಇರುವ  ತುಂಬಾ ಜನರು ಮನಸ್ಸಿನಲ್ಲಿ ವಿವಿಧ ರೀತಿಯ ಭಾವನೆಗಳನ್ನು ಹೊಂದಿರುತ್ತಾರೆ, ಆದರೆ ಬೇರೆಯವರ ಮನಸ್ಸುಗಳ ಒಳಗೆ ಏನು ಇರುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಪ್ರಜ್ಞೆ ಇಲ್ಲದವರಾಗಿರುತ್ತಾರೆ .

6.ಈ ಸಂಖ್ಯೆಯ ನಕಾರಾತ್ಮಕತೆ ಏನೆಂದರೆ 

ಯಾವ ಜನರು ಈ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೋ, ಅವರು ನಕಾರಾತ್ಮಕತೆಯನ್ನು ಸಹ ಹೊಂದಿರುತ್ತಾರೆ. ಅದು ಏನೆಂದರೆ ಅವರು ಎಲ್ಲರಿಗಿಂತ ವಿಭಿನ್ನವಾಗಿ,  ಪ್ರತ್ಯೇಕವಾಗಿ ಇರುತ್ತಾರೆ. ಬೇರೆಯವರಿಂದ ತಾವೇ ದೂರ ಉಳಿಯುತ್ತಾರೆ. ಕಟು ವಾದಿಗಳು ಹಾಗೆ ಸಾಮಾಜಿಕವಾಗಿಯೂ ವಿಚಿತ್ರವಾಗಿರುತ್ತಾರೆ. ಇವರಿಗೆ ಕೋಪ ಬಂದರೆ ಕೆಟ್ಟ ಸಮಯದಲ್ಲಿ ಮತ್ತು ಸಂದರ್ಭದಲ್ಲಿದ್ದರೆ ಅಪಾಯವನ್ನು ಸಹ ಉಂಟು ಮಾಡುವವರು ಆಗಿರುತ್ತಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top