ಐಪಿಎಲ್

ಕಾವೇರಿ ಗಲಾಟೆ: ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯ ಕೂಡ ಸ್ಥಳಾಂತರ!

ತಮಿಳುನಾಡು ಮತ್ತು ಕರ್ನಾಟಕದ ನಡುವೆ ಹೊತ್ತಿಕೊಂಡಿರುವ ಕಾವೇರಿ ಜಲವಿವಾದಕ್ಕೆ ಸುದೀರ್ಘವಾದೊಂದು ಇತಿಹಾಸವೇ ಇದೆ. ಪ್ರತೀ ವರ್ಷ ತಮಿಳುನಾಡು ನೀರಿಗಾಗಿ ಕ್ಯಾತೆ ತೆಗೆಯೋದಾಗಲಿ, ಒಡಲನ್ನೇ ಕಾವೇರಿಯನ್ನು ಕಂಡು ಕನ್ನಡಿಗರು ಹೋರಾಟಕ್ಕಿಳಿಯೋದಾಗಲಿ ಹೊಸತಲ್ಲ. ಆದರೆ ಈ ವರೆಗೂ ಎರಡೂ ಕಡೆಗಳ ಮಂದಿ ರಾಜಕೀಯ ದಾಳಗಳಾಗುತ್ತಿದ್ದಾರೇ ಹೊರತು, ವಿವೇಚನೆಯಿಂದ ಮುಂದಡಿ ಇಡುವ ಪ್ರಯತ್ನಗಳಾಗಿರಲಿಲ್ಲ. ಇದೀಗ ಈ ಕಾವೇರಿ ಗಲಾಟೆ ಐಪಿಎಲ್ ಪಂದ್ಯಗಳಿಗೂ ತಟ್ಟಿದೆ.

 

 

ಕಾವೇರಿ ನದಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಬೇಕಿರುವ ಐಪಿಎಲ್‌ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಬಿಸಿಸಿಐ ನಿರ್ಧರಿಸಿದ್ದು ಚೆನ್ನೈನಲ್ಲಿ ನಡೆಯಬೇಕಿದ್ದ ಪಂದ್ಯಗಳು ವಿಶಾಖಪಟ್ಟಣ, ತಿರುವನಂತಪುರಂ, ಪುಣೆ ಮತ್ತು ರಾಜ್‌ಕೋಟ್‌ ನಲ್ಲಿ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದು ಪುಣೆಯಲ್ಲಿ ನಡೆಸುವ ತೀರ್ಮಾನವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

 

 

ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ತಮಿಳುನಾಡಿನಲ್ಲಿ ತೀವ್ರ ಪ್ರತಿಭಟನೆ ಮಾಡಲಾಗುತ್ತಿದ್ದು, ಮೊನ್ನೆ ಪಂದ್ಯ ನಡೆದಿದ್ದ ವೇಳೆ ಮೈದಾನದಲ್ಲಿ ಕೆಲ ಕೀಡಿಗೇಡಿಗಳು ಶೂ ಎಸೆದ ಘಟನೆ ಸಹ ನಡೆದಿತ್ತು. ಹೀಗಾಗಿ ಭದ್ರತೆ ದೃಷ್ಟಿಯಿಂದ ಐಪಿಎಲ್‌ ಪಂದ್ಯಗಳನ್ನು ಚೆನ್ನೈನಿಂದ ಸ್ಥಳಾಂತರಗೊಳಿಸಲಾಗಿದೆ. ಆದರೆ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯಕೂಡ ಈಗ ಸ್ಥಳಾಂತರ ಗೊಂಡಿದ್ದು ಬೆಂಗಳೂರಿನ ಬದಲು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಷಿಯನ್ ನ ಅಂತರಾಹ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.

ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ಗಲಾಟೆ ನಡೆಯುತ್ತಿರುವುದರಿಂದ ಬೆಂಗಳೂರಿನಲ್ಲಿ ಪಂದ್ಯ ನಡೆದರೆ ಅಹಿತಕರ ಘಟನೆಗಳಾಗುವ ಸಾಧ್ಯತೆಯಿದ್ದು ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯಕೂಡ ಸ್ಥಳಾಂತರ ಗೊಂಡಿದೆ ಎಂದು ಹೇಳಲಾಗುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top