ಭವಿಷ್ಯ

ನಾವು ಹುಟ್ಟಿರೋ ನಕ್ಷತ್ರಕ್ಕೆ ಅನುಗುಣವಾಗಿ ಜಾತಕದಲ್ಲಿರೋ ದೋಷ ,ನಕ್ಷತ್ರದ ದೋಷಗಳನ್ನ ಪರಿಹಾರ ಮಾಡೋದಕ್ಕೆ ಈ ಚಿಕ್ಕ ಕೆಲಸಗಳನ್ನ ಮಾಡಿ ಸಾಕು ಸರಿ ಹೋಗುತ್ತೆ

ನಾವು ಹುಟ್ಟಿರುವ ನಕ್ಷತ್ರಕ್ಕೆ ಅನುಗುಣವಾಗಿ , ನಮ್ಮ ಜಾತಕದಲ್ಲಿ ಇರುವ ದೋಷ ಮತ್ತು ನಕ್ಷತ್ರದ ದೋಷವನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ, ನಿಮ್ಮ ನಕ್ಷತ್ರಕ್ಕೆ ಅನುಗುಣವಾಗಿ ಈ ಚಿಕ್ಕ ಕೆಲಸವನ್ನು ಮಾಡಿ .

 

ಪ್ರತಿಯೊಬ್ಬ ಜೀವಿಯೂ ಕೂಡ ಮನುಷ್ಯನಾಗಿ ಹುಟ್ಟಿದವರು, ಜೀವನದಲ್ಲಿ ಒಂದಲ್ಲ ಒಂದು ಕಷ್ಟ ನಷ್ಟಗಳನ್ನು ಅನುಭವಿಸುತ್ತಲೇ ಇರುತ್ತಾರೆ. ಇದಕ್ಕೆಲ್ಲ ಕಾರಣ ನಮ್ಮ ಜಾತಕ , ಹುಟ್ಟಿದ ಸಮಯ ಮತ್ತು ಗ್ರಹಗತಿಗಳು ಎಂದು ಸಾಮಾನ್ಯವಾಗಿ ಹೇಳುವುದನ್ನು ನಾವು ಕೇಳುತ್ತಿರುತ್ತೇವೆ. ನಾವು ಹುಟ್ಟಿದ ಸಮಯ ಮತ್ತು ದಿನಾಂಕಕ್ಕೆ ಅನುಗುಣವಾಗಿ ಯಾವ ನಕ್ಷತ್ರ ಆ ಸಮಯದಲ್ಲಿ ಇರುತ್ತದೋ ಆ ನಕ್ಷತ್ರವೇ ನಾವು ಹುಟ್ಟಿದ ನಕ್ಷತ್ರವಾಗಿರುತ್ತದೆ .ನಮ್ಮ ಜೀವನ ಮತ್ತು ನಮ್ಮಲ್ಲಿರುವ ಗುಣಲಕ್ಷಣಗಳು ಮತ್ತು ವ್ಯಕ್ತಿತ್ವ ಕೂಡ ಆ ನಕ್ಷತ್ರದ ಮಾದರಿಯಲ್ಲಿಯೇ ಇರುತ್ತದೆ. ನಮ್ಮ ಜಾತಕದ ಪ್ರಕಾರ ಮತ್ತು ಹುಟ್ಟಿರುವ ನಕ್ಷತ್ರದ ಪ್ರಕಾರ ನಮ್ಮಲ್ಲಿ ಅನೇಕ ರೀತಿಯ ದೋಷಗಳು ಇರುತ್ತವೆ. ಅವುಗಳೆಂದರೆ ಕುಜ ದೋಷ, ಸರ್ಪ ದೋಷ, ಶುಕ್ರ ದೋಷ, ಶನಿ ದೋಷ ಹೀಗೆ ..

 

 

ಇವುಗಳನ್ನೆಲ್ಲಾ ನಾವು ಪರಿಹಾರ ಮಾಡಿಕೊಳ್ಳಬೇಕು. ಇಲ್ಲವೆಂದರೆ ನಮ್ಮ ಜೀವನದಲ್ಲಿ ನಾವು ಈ ಭೂಮಿಯ ಮೇಲೆ ಬದುಕಿರುವವರೆಗೂ ಅನೇಕ ಕಷ್ಟಗಳನ್ನು ಎದುರಿಸುತ್ತೇವೆ ಎಂದು ಸಾಮಾನ್ಯವಾಗಿ ಶಾಸ್ತ್ರಗಳು ಮತ್ತು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಿರುತ್ತಾರೆ .ಆದ್ದರಿಂದ ಅದಕ್ಕೆಂದೇ ಅನೇಕ ಪರಿಹಾರಗಳು , ಪೂಜೆ, ವ್ರತ,  ಹೋಮ,  ಇನ್ನು ಇತ್ಯಾದಿ ಪೂಜೆಗಳನ್ನು ನಾವು ನಮ್ಮ ಹಿಂದೂ ಧರ್ಮದಲ್ಲಿ ಮಾಡುತ್ತೇವೆ.

ಇದರ ಜೊತೆಗೆ ಇನ್ನೂ ಕೆಲವು ಸುಲಭವಾದ ಪರಿಹಾರಗಳನ್ನು ನಾವು ನಮ್ಮ ಮನೆಯಲ್ಲೇ ಇದ್ದುಕೊಂಡು ಮಾಡಬಹುದು.

ಅದು ಹೇಗೆ ? ಯಾವ ಪರಿಹಾರ ಎಂಬುದನ್ನು ಈಗ ತಿಳಿದುಕೊಳ್ಳೋಣ ಬನ್ನಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 27 ನಕ್ಷತ್ರಗಳು,9 ಗ್ರಹಗಳು  ಇವೆ . ಪ್ರತಿಯೊಂದು ನಕ್ಷತ್ರಕ್ಕೂ ಕೂಡ ಒಂದೊಂದು ಗ್ರಹ ಅಧಿಪತಿ ಯಾಗಿರುತ್ತದೆ. ಆ ಗ್ರಹದ ಅಧಿಪತಿಯ ಪ್ರಕಾರ ನಾವು ಯಾವ ಗಿಡಗಳನ್ನು ನೆಟ್ಟು, ನಮ್ಮ ಮನೆಯಲ್ಲಿ ಬೆಳೆಸಿ, ಪೂಜಿಸಿದರೆ ನಮ್ಮ ಗ್ರಹದೋಷ, ಜಾತಕ ದೋಷಗಳು ಪರಿಹಾರವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ

 

 

1.ಅಶ್ವಿನಿ ,ಮಘ ಮತ್ತು ಮೂಲ ನಕ್ಷತ್ರ .

 

 

ಈ ನಕ್ಷತ್ರಗಳಿಗೆ ಅಧಿಪತಿ ಕೇತು ಗ್ರಹ .ಆದ್ದರಿಂದ ಈ ನಕ್ಷತ್ರದವರು ಜಾಜಿ ಗಿಡ ಹಾಗೂ ದರ್ಬೆಯನ್ನು ತಂದು ಮನೆಯಲ್ಲಿ ನಿಟ್ಟು ಬೆಳೆಸಿ, ಪೂಜಿಸಿದರೆ ಕೇತು ಗ್ರಹದ ದೋಷ ನಿವಾರಣೆಯಾಗುತ್ತದೆ.

 

2. ಭರಣಿ, ಪುಬ್ಬ ಮತ್ತು ಪೂರ್ವಾಷಾಢ ನಕ್ಷತ್ರ .

 

 

ಈ ನಕ್ಷತ್ರಗಳಿಗೆ ಅಧಿಪತಿ ಶುಕ್ರ ಗ್ರಹ. ಆದ್ದರಿಂದ ಔದುಂಬರ ವೃಕ್ಷ ಮತ್ತು ಕಮಲದ ಗಿಡಗಳನ್ನು ಮನೆಯಲ್ಲಿ ತಂದು ಬೆಳೆಸಿ, ಪೂಜಿಸಿದರೆ ಶುಕ್ರ ಗ್ರಹದ ದೋಷ ನಿವಾರಣೆಯಾಗುತ್ತದೆ

3.ಕೃತ್ತಿಕಾ, ಉತ್ತರ ಮತ್ತು ಉತ್ತರಾಷಾಢ ನಕ್ಷತ್ರ.

 

 

ಈ ನಕ್ಷತ್ರಗಳಿಗೆ ಅಧಿಪತಿ ಸೂರ್ಯ ದೇವನಾಗಿದ್ದಾನೆ. ಆದ್ದರಿಂದ ಸೂರ್ಯ ದೋಷ ನಿವಾರಣೆಗೆ ಬಿಳಿ ಎಕ್ಕದ ಗಿಡ ಹಾಗೂ ಕನಕಾಂಬರ ಹೂವಿನ ಗಿಡಗಳನ್ನು ತಂದು ನೆಟ್ಟು, ಬೆಳೆಸಿ ಮನೆಯಲ್ಲಿ ಪೂಜಿಸಬೇಕು.

 

4. ರೋಹಿಣಿ, ಹಸ್ತ ಮತ್ತು ಶ್ರವಣ ನಕ್ಷತ್ರ .

 

 

ಈ ನಕ್ಷತ್ರಗಳಿಗೆ ಅಧಿಪತಿ ಚಂದ್ರ ಗ್ರಹ . ಆದ್ದರಿಂದ ಈ ನಕ್ಷತ್ರದವರು ಮುತ್ತುಗದ ಮರ ಹಾಗೂ ಬಿಳಿ ತಾವರೆ ಗಿಡಗಳನ್ನು ಮನೆಯಲ್ಲಿ ಬೆಳೆಸಿ ಪೂಜಿಸಬೇಕು.

 

5. ಮೃಗಶಿರ , ಚಿತ್ತ ಮತ್ತು ಧನಿಷ್ಠ ನಕ್ಷತ್ರ .

 

 

ಈ ನಕ್ಷತ್ರಕ್ಕೆ ಅಧಿಪತಿ ಕುಜ ಗ್ರಹ , ಆದ್ದರಿಂದ ಕಗ್ಗಲಿ ಮರ, ಬಾಳೆ ಗಿಡ ಹಾಗೂ ದತ್ತೂರಿ ಹೂವಿನ ಗಿಡಗಳನ್ನು ಬೆಳೆಸಿ ಪೂಜಿಸಬೇಕು.ಇದರಿಂದ ಕುಜ ದೋಷ ನಿವಾರಣೆಯಾಗುತ್ತದೆ.

 

6. ಆರಿದ್ರಾ, ಸ್ವಾತಿ ಮತ್ತು ಶತಭಿಷಾ ನಕ್ಷತ್ರ.

 

 

ಈ ನಕ್ಷತ್ರಗಳಿಗೆ ಅಧಿಪತಿ ರಾಹು ಗ್ರಹ . ಆದ್ದರಿಂದ ಗರಿಕೆಯನ್ನು ಹಾಗೂ ಬೆಟ್ಟದ ತಾವರೆ ಹೂವಿನ ಗಿಡಗಳನ್ನು ಮನೆಯಲ್ಲಿ ಬೆಳೆಸಿ ಪೂಜಿಸಬೇಕು.ಇದರಿಂದ ರಾಹು ಗ್ರಹದ ದೋಷ ನಿವಾರಣೆಯಾಗುತ್ತದೆ.

 

7. ಪುನರ್ವಸು, ವಿಶಾಖ ಮತ್ತು ಪೂರ್ವಭಾದ್ರಪದ ನಕ್ಷತ್ರ.

 

 

ಈ ನಕ್ಷತ್ರಗಳಿಗೆ ಅಧಿಪತಿ ಗುರು ಗ್ರಹ . ಆದ್ದರಿಂದ ಈ ನಕ್ಷತ್ರದವರು ಅರಳಿ ಗಿಡ ಹಾಗೂ ಪಾರಿಜಾತ ಗಿಡಗಳನ್ನು ಬೆಳೆಸಿ ಪೂಜಿಸಬೇಕು .ಇದರಿಂದ ಗುರು ಗ್ರಹದ ದೋಷ ನಿವಾರಣೆಯಾಗುತ್ತದೆ.

 

8.ಪುಷ್ಯ, ಅನುರಾಧ ಮತ್ತು ಉತ್ತರ ಭಾದ್ರಪದ ನಕ್ಷತ್ರ.

 

 

ಈ ನಕ್ಷತ್ರಗಳಿಗೆ ಅಧಿಪತಿ ಶನಿ ಗ್ರಹ. ಆದ್ದರಿಂದ ತುಳಸಿ ಗಿಡ ಮತ್ತು ತಾರೆ ಗಿಡವನ್ನು ಬೆಳೆಸಿ ಪೂಜಿಸಬೇಕು. ಆಗ ಶನಿ ದೋಷ ನಿವಾರಣೆಯಾಗುತ್ತದೆ.

 

9. ಆಶ್ಲೇಷ, ಜ್ಯೇಷ್ಠ ಮತ್ತು ರೇವತಿ ನಕ್ಷತ್ರ .

 

 

ಈ ನಕ್ಷತ್ರಗಳಿಗೆ ಅಧಿಪತಿ ಚಂದ್ರ. ಆದ್ದರಿಂದ ಮಲ್ಲಿಗೆ ಮತ್ತು ಉತ್ತರಾಣಿ ಗಿಡಗಳನ್ನು ಮನೆಯಲ್ಲಿ ಬೆಳೆಸಿ, ಪೂಜಿಸಬೇಕು. ಇದರಿಂದ ಚಂದ್ರ ದೋಷ ನಿವಾರಣೆಯಾಗುತ್ತದೆ.

ಹೀಗೆ ನಿಮ್ಮ ನಕ್ಷತ್ರಕ್ಕೆ ಅನುಗುಣವಾಗಿ , ನಿಮ್ಮದು ಯಾವ ನಕ್ಷತ್ರ ಎಂದು ತಿಳಿದು, ಮನೆಯಲ್ಲಿ ಆ ನಕ್ಷತ್ರದ ಗಿಡವನ್ನು ತಂದು ಬೆಳೆಸಿ ಪೂಜಿಸಿ ಆಗ ನಿಮ್ಮಲ್ಲಿರುವ ದೋಷಗಳು ಪರಿಹಾರವಾಗುತ್ತವೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top