ದೇವರು

ಮದುವೆಯ ಸಂದರ್ಭದಲ್ಲಿ ಮದುವೆ ಗಂಡು ಹೆಣ್ಣಿನ ಮೇಲೆ ಅಕ್ಕಿ ಏಕೆ ಸುರಿಯುತ್ತಾರೆ ಈ ಸಂಪ್ರದಾಯದ ಹಿಂದಿರುವ ಅರ್ಥವೇನು ಗೊತ್ತಾ

ಮದುವೆಯ ಸಂದರ್ಭದಲ್ಲಿ ವಧು ವರನ ಮೇಲೆ ಮತ್ತು ವರ ವಧುವಿನ ಮೇಲೆ ಅಕ್ಕಿಯನ್ನು ಏಕೆ ? ಸುರಿಯುತ್ತಾರೆ. ಅದನ್ನು ಏನೆಂದು ಕರೆಯುತ್ತಾರೆ ? ಈ ಸಂಪ್ರದಾಯದ ಹಿಂದಿರುವ ಅರ್ಥವೇನು ?

 

 

ಮದುವೆಯವರೆಗೂ ಜವಾಬ್ದಾರಿ ಇಲ್ಲದೆ ಬೆಳೆದಿರುವ ಯುವತಿ ಯುವಕರಿಗೆ ಮದುವೆಯಿಂದ ಪ್ರಪಂಚದಲ್ಲಿ ಮುಳುಗಿ ಪ್ರಪಂಚ ಜ್ಞಾನವನ್ನೇ ಸಂಪಾದಿಸಿಕೊಳ್ಳುತ್ತಾ ,ಬದುಕಲು ತಿಳಿಸಿದಂತೆ ಅರ್ಥಹೀನವಾದ ಮದುವೆ ಇಂದಿನ ಕಾಲದಲ್ಲಿ ಮಾಡುತ್ತಿದ್ದಾರೆ. ಪೂರ್ವ ಕಾಲದಲ್ಲಿ ಹಾಗಲ್ಲದೆ, ಧರ್ಮ ಯುಕ್ತವಾದ ಸಂಪ್ರದಾಯಗಳ ಆಚರಣೆಯಿಂದಲೇ ಮದುವೆ ಮಾಡುತ್ತಿದ್ದರು. ಮದುವೆ ಎನ್ನುವುದು ಮಹತ್ತರ ಜ್ಞಾನೋಪದೇಶವಾಗಿ ಭಾವಿಸುತ್ತಿದ್ದರು .

ಅಕ್ಷತೆಗಳು ಎಂಬ ಜ್ಞಾನ ಕಿರಣಗಳು ಮಹಾತ್ಮರಿಂದ ತಮ್ಮ ಶಿರಸ್ಸುಗಳನ್ನು ತಾಕಿದ ನಂತರ ಬದುಕಿರುವ ಜೀವನ ಕಾಲವನ್ನೆಲ್ಲ ಜ್ಞಾನ  ಸಂಪಾದನೆಯಲ್ಲಿಯೇ ಬದುಕುತ್ತಾ, ದಾಂಪತ್ಯ ಜೀವನವನ್ನು ಕಳೆಯಬೇಕೆಂದು ಆಗಿನ ಹಿರಿಯರ ಸಂದೇಶವಾಗಿದೆ.

 

 

ದಾಂಪತ್ಯ ಜೀವನದಲ್ಲಿ ಸತಿಗೆ ಜ್ಞಾನ ಇಲ್ಲದೇ ಹೋದರೆ, ಪತಿ ಜ್ಞಾನ ತಿಳಿಸಬೇಕೆಂದು, ಒಂದು ವೇಳೆ ಪತಿಗೆ ಜ್ಞಾನ ಇಲ್ಲದೇ ಹೋದರೆ, ಸತಿ ತಿಳಿಸಬೇಕೆಂದು ಆಗಿನ ಹಿರಿಯರ ಸಂದೇಶವಾಗಿತ್ತು  . ಪತಿ ಸತಿಯರ ತಲೆಗೆ ಜ್ಞಾನ ಸೇರಿಸಬೇಕೆಂದು, ಹಾಗೆಯೇ ಸತಿ ಪತಿಯ ತಲೆಗೆ ಜ್ಞಾನ ಸೇರಿಸಬೇಕೆಂದು, ತೋರಿಸುವುದೇ ತಲಂಬರಗಳು. ಒಬ್ಬರ ನೆತ್ತಿಯ ಮೇಲೆ ಒಬ್ಬರು ಸುರಿದುಕೊಳ್ಳುವುದು ಎಂದು ತಿಳಿಯಬೇಕು .

 

ತಲಂಬರಗಳು ಎಂದರೇನು ?

 

ಮದುವೆಯ ಸಂದರ್ಭದಲ್ಲಿ ವಧುವಿನ ಮೇಲೆ ವರ ಮತ್ತು ವರನ ಮೇಲೆ ವಧು ಅಕ್ಕಿಯನ್ನು ಬೊಗಸೆ ಕೈಯಲ್ಲಿ ಹಿಡಿದು ಸುರಿಯುವುದಕ್ಕೆ ತಲಂಬರಗಳು ಎಂದು ಹೆಸರು.

ಅಕ್ಕಿ ಜ್ಞಾನದ ಚಿಹ್ನೆ ಎಂದು ಮೊದಲೇ ತಿಳಿದುಕೊಂಡಿದ್ದೇವೆ .ಅಂಬರವೆಂದರೆ ಆಕಾಶ, ತಲಂಬರವೆಂದರೆ ಆಕಾಶದಿಂದ ತಲೆಗೆ ಸೇರುವುದು ಎಂದು ಅರ್ಥ. ಜ್ಞಾನ ಆಕಾಶದಿಂದ ಶಬ್ದ ರೂಪವಾಗಿ ಸೇರುತ್ತದೆ .

 

 

ಬಯಲಿನಿಂದ ಬರುವ ಶಬ್ದ ಕಿವಿಗಳ ಮೂಲಕ ತಲೆಯಲ್ಲಿ ಸೇರುತ್ತದೆ. ಆದ್ದರಿಂದ ಜ್ಞಾನವನ್ನು ತಲಂಬರ ಎಂದಿದ್ದಾರೆ. ಸತಿಯಿಂದ ಪತಿಗೂ ಪತಿಯಿಂದ ಸತಿಗೆ, ಜ್ಞಾನ ಹರಡಬೇಕೆಂದು ಒಬ್ಬರ ಸಹಕಾರದಿಂದ ಒಬ್ಬರು ಉಪದೇಶ ಹೊಂದಿ ನಂತರ ಜ್ಞಾನವನ್ನು ಬೆಳೆಸಿಕೊಳ್ಳುತ್ತಾ ಹೋಗಬೇಕೆಂದು ತಿಳಿಸುವುದೇ, ಒಬ್ಬರ ನೆತ್ತಿಯ ಮೇಲೆ ಒಬ್ಬರು ತಲಂಬರಗಳನ್ನು ಸುರಿದುಕೊಳ್ಳುವುದು ಎಂದು ಪೂರ್ವಿಕರ ಭಾವವಾಗಿದೆ .

ಅಷ್ಟು ದೊಡ್ಡ ಅರ್ಥದಿಂದ ಕೂಡಿಕೊಂಡಿರುವ ಆಚಾರ , ಈ ಕಾಲದಲ್ಲಿ ಅರ್ಥಹೀನವಾದರೂ ಆ ಕಾರ್ಯವಾದರೂ ಉಳಿದುಕೊಂಡಿರುವುದಕ್ಕೆ ಸಂತೋಷ ಪಡೋಣ. ಇಷ್ಟಕ್ಕೆ ಸಂತೋಷ ಪಟ್ಟು ಸುಮ್ಮನಿರದೆ, ಇದು ಧರ್ಮ ಯುಕ್ತವಾದ ಆಚರಣೆ ಎಂದು , ಈ ಆಚರಣೆಯ  ಅರ್ಥದಿಂದ ಕೂಡಿಕೊಂಡಾಗಲೇ ಪ್ರಯೋಜನವೆಂದು, ಹಾಗೆ ಮಾಡದೆ ಹೋದರೆ ಮದುವೆ ಸಣ್ಣ ಮಕ್ಕಳ ಆಟದ ಹಾಗೆ, ಕೊಂಡುಕೊಳ್ಳುವ ಗೊಂಬೆಗಳ ಆಟಕ್ಕೆ ಸಮಾನವೆಂದು ಗುರುತು ಇಟ್ಟುಕೊಳ್ಳಬೇಕು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top