ದೇವರು

ಎಷ್ಟು ತರಹದ ಶಂಖಗಳು ಇವೆ ಅಂತ ಗೊತ್ತಾ ?ನಿಮ್ಮ ಕಷ್ಟಗಳ ಪರಿಹಾರಕ್ಕೆ ಯಾವ ಶಂಖ ಬಳಸಬೇಕು ತಿಳ್ಕೊಳ್ಳಿ

ಶಂಖಗಳ ಬಗ್ಗೆ ನಿಮಗೆಷ್ಟು ಗೊತ್ತು ?

ಶಂಖವು ಹಿಂದೂಗಳ ಭಕ್ತಿಯ ಪ್ರತೀಕವಾಗಿದೆ. ಶಂಖವು 8 ಮಂಗಳಕರ ವಸ್ತುಗಳಲ್ಲಿ ಇದು ಸಹ ಒಂದಾಗಿದೆ.ಎಲ್ಲದಕ್ಕೂ ಸೇರಿ ಒಟ್ಟಾಗಿ ಅಷ್ಟಮಂಗಳ ಎಂದು ಕರೆಯಲಾಗುತ್ತದೆ. ಸ್ವಸ್ತಿಕ ಚಿಹ್ನೆಯ ಹಾಗೆ ಶಂಖವು ಸಹ ಹಿಂದೂಗಳ ದೈವಿಕ ಚಿಹ್ನೆಯಾಗಿದೆ.ಶಂಖವನ್ನು ಮನೆಯಲ್ಲಿ ಮತ್ತು ದೇವಸ್ಥಾನದಲ್ಲಿ ಮಂಗಳಕರ ದ್ವನಿಯನ್ನು ಮೊಳಗಿಸಲು ಉಪಯೋಗಿಸಲಾಗುತ್ತದೆ. ಅದು ಎಲ್ಲಾ  ಋಣಾತ್ಮಕ ಶಕ್ತಿಗಳನ್ನು ಹೊರದಬ್ಬುತ್ತದೆ.(ಅಂತಹ ಋಣಾತ್ಮಕ ಶಕ್ತಿಗಳು ಮನಸ್ಸಿಗೆ ಗೊಂದಲವನ್ನು ಮೂಡಿಸುತ್ತವೆ)

ಶಂಖನಾದ ಎಂದರೇನು ?

ಶಂಖದಿಂದ ಹೊರ ಬರುವ ಇಂಪಾದ ನಾದ  ಮತ್ತು ಮಂಗಳಕರ ದ್ವನಿಗೆ ‘ಶಂಖನಾದ’ ಎಂದು ಹೆಸರು.

ಶಂಖದಲ್ಲಿ ಎಷ್ಟು ವಿಧಗಳು ?

ಶಂಖದಲ್ಲಿ  ಮುಖ್ಯವಾಗಿ ಎರಡು ವಿಧಗಳು ಎಡಮುರಿ ಶಂಖ  ಮತ್ತು ಬಲಮುರಿ ಶಂಖ.

ಬಲಮುರಿ ಶಂಖವನ್ನು ಅತ್ಯಂತ ಶ್ರೇಷ್ಠ ಶಂಖ ಎಂದು ನಂಬಲಾಗಿದೆ. ಬಲಮುರಿ ಶಂಖ ವಿಷ್ಣು ದೇವನೆಂದು .ವಿಷ್ಣು ರಕ್ಷಿಸುವವನು ಆದ್ದರಿಂದ ಇದು ಶ್ರೇಷ್ಠವೆನಿಸಿದೆ.ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ವಿಷ್ಣು ಶಂಖ ಲಾಭದಾಯಕ.

ಎಡಮುರಿ  ಶಂಖವು ಹಾಳು ಮಾಡುವ ಪ್ರವೃತ್ತಿಯನ್ನು  ಹೊಂದಿದೆ ಎಂದು ನಂಬಲಾಗಿದೆ.ಎಡಮುರಿ ಶಂಖವು ಶಿವನೆಂದು. ಶಿವ ನಾಶ ಮಾಡುವವನು.ಆದ್ದರಿಂದ ಇದು ಒಳ್ಳೆಯದಲ್ಲ.

ಶಂಖಗಳಲ್ಲಿ  ವಿಭಿನ್ನ ರೀತಿಯ ಶಂಖಗಳಿವೆ.

1.ಗಣೇಶ ಶಂಖ.

ಗಣೇಶ ಶಂಖವು ಅತ್ಯಂತ ಶ್ರೇಷ್ಠ ಮತ್ತು ಬಹಳಷ್ಟು ಜನರು  ಇದನ್ನು ಮನೆಯಲ್ಲಿಟ್ಟು ಪೂಜೆ ಮಾಡುತ್ತಾರೆ.ಇದು ಅಡೆತಡೆಗಳನ್ನು ನಿವಾರಿಸುತ್ತದೆ. ಗಣೇಶನ ಗೌರವಾರ್ಥವಾಗಿ ಪೂಜೆಯನ್ನು ಮಾಡಲಾಗುತ್ತದೆ.ಇದು ಯಾವ ಮನೆಯಲ್ಲಿ ಇರುತ್ತದೆಯೋ ಅಲ್ಲಿ ಸುಖ,ಸಂತೋಷ,ಸಮೃದ್ಧಿ ನೆಲೆಸುತ್ತದೆ.

2.ದಕ್ಷಿಣಾವರ್ತಿ ಶಂಖ.

ಬಲಮುರಿ ಶಂಖವನ್ನು ದಕ್ಷಿಣಾವರ್ತಿ ಶಂಖವೆಂದು ಕರೆಯಲಾಗುತ್ತದೆ. ಇದು  ಧನ ಸಂಪತ್ತು ಮತ್ತು ಸಮೃದ್ಧಿಯನ್ನು ಕರುಣಿಸುತ್ತದೆ.ಇದು ಶಂಖಗಳಲ್ಲೇ ಅತ್ಯಂತ ಶ್ರೇಷ್ಠ ಶಂಖವೆಂದು ನಂಬಲಾಗಿದೆ.ಇದು ಸಮುದ್ರದ ಆಳದಲ್ಲಿ ಅಡಗಿರುತ್ತದೆ.ಆದ್ದರಿಂದ ಇದು ತುಂಬ ವಿರಳ ಹಾಗೂ ಮಂಗಳಕರವೂ ಹೌದು.

ಪ್ರತಿಯೊಂದು ಶುಭ ಕಾರ್ಯದಲ್ಲೂ ಸಹ ಈ ಶಂಖವನ್ನು ಬಳಸಲಾಗುತ್ತದೆ.ದೇವರ ಪೂಜೆಯಿಂದ ಹಿಡಿದು ಮದುವೆ ಸಮಾರಂಭದಲ್ಲಿಯೂ ಸಹ  ಈ ಶಂಖವನ್ನು ಮಂಗಳಕರವೆಂದು, ಶುಭವೆಂದು ಪರಿಗಣಿಸಲಾಗಿದೆ. ಈ ಶಂಖದಿಂದ ಐಶ್ವರ್ಯ ಪ್ರಾಪ್ತಿಯಾಗುತ್ತದೆ.

ತಾಯಿ ಲಕ್ಷ್ಮೀಯು ಕೈಯಲ್ಲಿ ಹಿಡಿದಿರುವುದು ದಕ್ಷಿಣಾವರ್ತಿ ಶಂಖವೇ. ಆದ್ದರಿಂದ ಇದನ್ನು ಲಕ್ಷ್ಮೀ ಶಂಖವೆಂದು ಸಹ ಕರೆಯಲಾಗುತ್ತದೆ. ದಕ್ಷಿಣಾವರ್ತಿ ಶಂಖವನ್ನು ಪೂಜಾ ಕೋಣೆಯಲ್ಲಿ  ಕೆಂಪು ಬಟ್ಟೆಯಲ್ಲಿ ಇಟ್ಟು  ಪೂಜಿಸಿದರೆ ನಿಮ್ಮ ಮನೆಯಲ್ಲಿ ತಾಯಿ ಲಕ್ಷ್ಮೀ ದೇವಿ ಸದಾ ನೆಲೆಸುವಳು.

ವರಹಾ ಪುರಾಣದ ಪ್ರಕಾರ ದಕ್ಷಿಣಾವರ್ತಿ  ಶಂಖದಿಂದ ಸ್ನಾನ ಮಾಡಿದರೆ ಮನುಷ್ಯನು ತನ್ನೆಲ್ಲಾ ಕರ್ಮಗಳಿಂದಲೂ ಮುಕ್ತಿ ಹೊಂದುತ್ತಾನೆ.

ಸ್ಕಂದ ಪುರಾಣದ ಪ್ರಕಾರ ದಕ್ಷಿಣಾವರ್ತಿ ಶಂಖದಿಂದ  ಸ್ನಾನ ಮಾಡಿದರೆ ಎಲ್ಲಾ ಏಳು ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳಿಂದಲೂ ಸಹ ಮನುಷ್ಯನಿಗೆ  ಮುಕ್ತಿ ದೊರೆಯುತ್ತದೆ.

3.ವಾಮಾವರ್ತಿ ಶಂಖ.

ಎಡಮುರಿ ಶಂಖವನ್ನು ವಾಮಾವರ್ತಿ ಶಂಖ ಎಂದು ಕರೆಯಾಲಾಗುತ್ತದೆ. ಇವು  ಸಮುದ್ರದಲ್ಲಿ ಯಥೇಚ್ಛವಾಗಿ ಸಿಗುತ್ತವೆ.ಇದನ್ನು ಮನೆಯಲ್ಲಿ ವಾಸ್ತು ಪ್ರಕಾರ ಸರಿಯಾದ ಸ್ಥಳದಲ್ಲಿ ಇಟ್ಟರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೊರದೋಡಿಸುತ್ತದೆ.ಆದ್ದರಿಂದ ಇದನ್ನು ಶ್ರೀ ಯಂತ್ರದಲ್ಲಿ ಧನಾತ್ಮಕ ಶಕ್ತಿಗೋಸ್ಕರ ಬಳಸಲಾಗುತ್ತದೆ.

4.ಕವಡೆ ಶಂಖ.

ಕವಡೆ ಶಂಖವು ಅತ್ಯಂತ ಪವಿತ್ರವಾದದ್ದು.ಇದು ಸಮುದ್ರವನ್ನು ಸಮುದ್ರ ಮಂಥನದ ಸಮಯದಲ್ಲಿ ಕಡೆಯುವಾಗ ಹೊರ ಬಂದಿದ್ದು.ಇದು ಶಿವನ ಕೂದಲಿನ(ಜಡೆಯ) ಆಕಾರದಲ್ಲಿ ಇದೆ.

5.ಗೋಮುಖ ಶಂಖ.

ಗೋ ಎಂದರೆ ಹಸು ಎಂದರ್ಥ, ಮುಖ ಎಂದರೆ ಹಸುವಿನ ಮುಖ. ಹಸುವಿನ  ಮುಖದ ಆಕಾರವನ್ನು ಹೊಂದಿರುವ ಶಂಖಕ್ಕೆ ಗೋಮುಖ ಶಂಖ ಎಂದು ಕರೆಯಲಾಗುತ್ತದೆ.ಗೋಮಾತೆಗೆ ಅಂದರೆ ಹಸುವಿಗೆ ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನ ನೀಡಲಾಗಿದೆ. ಆದ್ದರಿಂದ ಈ ಶಂಖಕ್ಕೂ ಸಹ ಪೂಜ್ಯನೀಯ ಸ್ಥಾನವನ್ನು ಕೊಟ್ಟಿದ್ದಾರೆ.ಈ ಗೋಮುಖ ಶಂಖವನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ ಗೋವನ್ನು ಮನೆಯಲ್ಲಿ ಸಾಕಿ ಪೂಜಿಸಿದಷ್ಟೇ ಫಲ ದೊರೆಯುತ್ತದೆ.

6.ಸ್ತ್ರೀ ಶಂಖ ಅಥವಾ ಶಂಖಿನಿ.

ಇದರ ಆಕಾರ ಕೈಯಲ್ಲಿ ಹಿಡಿದುಕೊಳ್ಳಲು ತುಂಬ ಕಷ್ಟ ಮುಳ್ಳುಗಳ ರೀತಿಯಲ್ಲಿ ಇರುವುದರಿಂದ ಕೈಯಲ್ಲಿ ಹಿಡಿಯುವುದು ಸ್ವಲ್ಪ ಕಷ್ಟ.ಆದ್ದರಿಂದ ಇದನ್ನು ಅಷ್ಟಾಗಿ ಯಾರು ಮಂಗಳಕರ ಅಲ್ಲವೆಂದು ಭಾವಿಸಿದ್ದಾರೆ.ಅಷ್ಟೇ ಅಲ್ಲದೆ ಇದನ್ನು ಉದಿದಾಗಲು  ದ್ವನಿ ಅಷ್ಟಾಗಿ ಬರುವುದಿಲ್ಲ.ಇದನ್ನು ಅಗೋರಿಗಳು ಮಾತ್ರ ಉಪಯೋಗಿಸುತ್ತಾರೆ.

7.ಹೀರಾ ಶಂಖ.

ಹೀರಾ ಶಂಖವನ್ನು ಪಹಡಿ ಶಂಖವೆಂದು ಸಹ ಕರೆಯುತ್ತಾರೆ.( ಹಿಂದಿಯಲ್ಲಿ ಪಹಡಿ ಎಂದರೆ ಬೆಟ್ಟ, ಗುಡ್ಡಗಳು ಎಂದರ್ಥ)ಇದು ಬೆಟ್ಟ ,ಶಿಖರಗಳಲ್ಲಿ ಕಾಣ ಸಿಗುತ್ತದೆ.ಇದರ ಹೊರ ಪದರ ತುಂಬ ಗಟ್ಟಿಯಾಗಿದ್ದು ನೋಡಲು ಅಷ್ಟು ಚೆನ್ನಾಗಿ ಕಾಣಿಸುವುದಿಲ್ಲ.ಆದರೆ ಒಳ ಪದರವು ಅತ್ಯಂತ ಕಾಂತಿಯಿಂದ ಕೂಡಿದೆ ಪಳ ಪಳ ಹೊಳೆಯುತ್ತಿರುತ್ತದೆ. ಇದು ಅತ್ಯಂತ ವಿರಳ ವಾದ್ದರಿಂದ ಇದಕ್ಕೆ ಅಧಿಕ ಬೆಲೆಯೂ ಇದೆ.

ಪ್ರೇಮಿಗಳು ಒಂದಾಗಲು ಅಥವಾ ದಾಂಪತ್ಯ ಜೀವನದಲ್ಲಿ ಸದಾ ಗಲಾಟೆ ನೆಡೆಯುತ್ತಿದ್ದರೆ ಆ ಸಂಬಂಧ ವೃದ್ಧಿಸಲು ಪ್ರೀತಿ,ಬಾಂಧವ್ಯ ಬೆಳೆಯಲು ಹೀರಾ ಶಂಖ ಲಾಭದಾಯಕ. ಈ ಹೀರಾ ಶಂಖವು  ಶುಕ್ರ ಗ್ರಹದ ದೋಷವನ್ನು ಸಹ ನಿವಾರಿಸುತ್ತದೆ.ಪ್ರೇಮಿಗಳನ್ನು ಒಂದುಗೂಡಿಸಲು  ಈ ಶಂಖ ನೆರವಾಗುತ್ತದೆ.

8.ಮೋತಿ ಶಂಖ.

ಇದು ಮುತ್ತಿನ ರೀತಿಯಲ್ಲೇ ಹೊಳೆಯುತ್ತಿರುತ್ತದೆ.ಇದು ಕಾಣ  ಸಿಗುವುದು ತುಂಬಾ ತುಂಬಾ ವಿರಳ.ವಿಶೇಷವೆಂದರೆ 20 ಸಾವಿರ ಶಂಖಗಳಲ್ಲಿ ಇದು ಒಂದು ಶಂಖ ಕಂಡು ಬರುತ್ತದೆ ಮತ್ತು ಅಂತಹವುಗಳಲ್ಲಿ 10 ರಲ್ಲಿ ಒಂದು ಮಾತ್ರ ಒಳ್ಳೆಯ ನಾದವನ್ನು ಹೊರಹೊಮ್ಮಿಸುತ್ತದೆ.

9.ಚಂದ್ರ ಶಂಖ.

ಅರ್ಧ ಚಂದ್ರಾಕೃತಿಯ ಆಕಾರದಲ್ಲಿ ಇರುವುದರಿಂದ ಇದನ್ನು ಚಂದ್ರ ಶಂಖವೆಂದು ಕರೆಯುತ್ತಾರೆ.ಯಾರ ಬಳಿ ಶಂಖವಿರುತ್ತದೆಯೋ ಅ ವ್ಯಕ್ತಿ ಎಂದಿಗೂ ಸಹ ಬಡತನದಿಂದ ಬಳಲುವುದಿಲ್ಲ.

ಹಾಗಾಗಿ ಇಷ್ಟೆಲ್ಲಾ ಉಪಯೋಗವಿರುವ ಒಂದು ಶಂಖವನ್ನಾದರು ನಿಮ್ಮ ಮನೆಯಲ್ಲಿ ಇಟ್ಟು ಪೂಜಿಸಿದರೆ ಒಳ್ಳೆಯದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top