ದೇವರು

ಎಷ್ಟೇ ಕಷ್ಟಪಟ್ಟು ದುಡಿದ್ರು ಕೈಯಲ್ಲಿ ಕಾಸು ನಿಲ್ತಿಲ್ಲ ಅನ್ನೋರು ಶುಕ್ರವಾರದ ದಿನ ಬೆಳಗ್ಗೆ ಈ ಕೆಲಸಗಳನ್ನು ಮಾಡಿ ಆರ್ಥಿಕ ಸಮಸ್ಯೆ ಪರಿಹಾರ ಆಗುತ್ತೆ

ಶುಕ್ರವಾರದ ದಿನ ಬೆಳಗ್ಗಿನ ಸಮಯದಲ್ಲಿ ಹೀಗೆ ಮಾಡಿದರೆ ಮಹಾಲಕ್ಷ್ಮೀ ದೇವಿಯು  ನಿಮ್ಮನ್ನು ಕುಬೇರರನ್ನಾಗಿ ಮಾಡುತ್ತಾಳೆ.

 

 

ಶುಕ್ರವಾರವನ್ನು ಮಹಾಲಕ್ಷ್ಮೀ ದೇವಿಯ ವಾರ, ಲಕ್ಷ್ಮಿ ದೇವಿಗೆ ಪ್ರಿಯವಾದ ದಿನ ಎಂದು ಹೇಳಲಾಗುತ್ತದೆ. ಅದೇ ರೀತಿ ಈ ಪವಿತ್ರ ದಿನ ಮನೆಯಲ್ಲಿ ಹೀಗೆ ಮಾಡಿದರೆ ಸಕಲ ಸಂಪತ್ತು, ಆರೋಗ್ಯ, ಐಶ್ವರ್ಯವನ್ನು ಮಹಾಲಕ್ಷ್ಮೀ ದೇವಿಯು ನಮಗೆ ಒದಗಿಸುತ್ತಾಳೆ ಎಂದು ಹೇಳಲಾಗುತ್ತದೆ .

 

ಶುಕ್ರವಾರ ಮಾಡಬೇಕಾದ ಕೆಲಸಗಳು.

 

ಸೂರ್ಯೋದಯಕ್ಕೂ ಮುನ್ನ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ನೀವು ಕೂಡ ಸ್ನಾನ ಮಾಡಿ ಶುಚಿರ್ಭೂತರಾಗಿ ಇರಬೇಕು.

ನಂತರ ಮನೆಯ ಬಾಗಿಲಿಗೆ ರಂಗೋಲಿ ಹಾಕಿ , ಹೊಸ್ತಿಲನ್ನು ತೊಳೆದು, ಅರಿಶಿನ ,ಕುಂಕುಮ ,ಹೂವನ್ನು ಅರ್ಪಿಸಿ ಹೊಸ್ತಿಲ ಪೂಜೆಯನ್ನು ಮಾಡಬೇಕು.

ಒಂದು ಶುಭ್ರವಾದ ವಸ್ತ್ರವನ್ನು ಶುಕ್ರವಾರ ತೆಗೆದುಕೊಂಡು ದೇವರ ಮನೆಯಲ್ಲಿ ಹಾಸಿ, ಅದರ ಮೇಲೆ ಅಕ್ಕಿ ಅಥವಾ ನವಧಾನ್ಯಗಳನ್ನು ಹಾಕಿ ಹರಡಬೇಕು .

 

 

ನಂತರ ಮನೆಯಲ್ಲಿ ಒಂದು ಹಿತ್ತಾಳೆ ಅಥವಾ ಕಂಚಿನ ಒಂದು ಚೊಂಬಿಗೆ ನೀರು ಹಾಕಿ ,ಅದರಲ್ಲಿ ಸ್ವಲ್ಪ ಅಕ್ಕಿ ಒಂದು ರೂಪಾಯಿ ನಾಣ್ಯವನ್ನು ಹಾಕಿ ಅದನ್ನು ವಸ್ತ್ರದ ಮೇಲೆ ಇಡಬೇಕು.

ಆದರೊಂದಿಗೆ ಐದು ಮಾವಿನ ಎಲೆಯನ್ನು ಹಾಕಿ , ಅದರ ಮೇಲೆ ಒಂದು ತೆಂಗಿನಕಾಯಿಯನ್ನು ಇಡಬೇಕು ನಂತರ ಅದಕ್ಕೆ ಅರಿಶಿನ , ಕುಂಕುಮ ಹಚ್ಚಿ, ಹೂವನ್ನು ಆರ್ಪಿಸಿ ಈಗ ಲಕ್ಷ್ಮೀ ಪೂಜೆಗೆ ಕಳಸ ಸಿದ್ಧವಾಗಿದೆ .

ಕಳಸದ ಪಕ್ಕದಲ್ಲಿ ಗಣೇಶ ದೇವರನ್ನು ಸ್ಥಾಪಿಸಬೇಕು.

 

ಲಕ್ಷ್ಮೀ ಪೂಜೆಯ ವಿಧಾನ.

 

ನೈವೇದ್ಯಕ್ಕೆ ಸಿಹಿಯನ್ನು ತಯಾರಿಸಿಕೊಳ್ಳಿ ,ಲಕ್ಷ್ಮೀ ದೇವಿಯ ಪೂಜೆಗೆ ಅಕ್ಷತೆಯನ್ನು ಸಿದ್ಧ ಮಾಡಿಕೊಳ್ಳಿ ನಂತರ ಮೊದಲು ಗಣೇಶನನ್ನು ಪೂಜೆ ಮಾಡಿ. ಯಾಕೆಂದರೆ ಗಣೇಶ ವಿಜ್ಞ ವಿನಾಶಕ.

 

 

ನಿಮ್ಮ ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದ ಲೆಕ್ಕ ಪತ್ರಗಳನ್ನು ದೇವರ ಪೂಜೆಗೆ ಇಟ್ಟು ಪೂಜೆ ಮಾಡಿ ನಂತರ ಲಕ್ಷ್ಮೀ ದೇವಿಗೆ ತುಪ್ಪದ ದೀಪವನ್ನು ಬೆಳಗಿಸಬೇಕು.

ಲಕ್ಷ್ಮೀ ದೇವಿಯ ಯಾವುದಾದರೂ ಒಂದು ಮಂತ್ರವನ್ನು ಹೇಳುತ್ತಾ, ಪೂಜೆಯನ್ನು ಮಾಡಿ ಲಕ್ಷ್ಮೀ ದೇವಿಗೆ ಅಕ್ಷತೆಯನ್ನು ಹಾಕುತ್ತಾ ಬನ್ನಿ , ಯಾವುದೇ ಮಂತ್ರವನ್ನು ಹೇಳಿದರೂ ಸಹ ನೂರಾ ಎಂಟು ಬಾರಿ ಪಠಿಸಬೇಕು.

ಪೂಜೆ ಎಲ್ಲವೂ ಮುಗಿದ ಮೇಲೆ ಮನೆಯಲ್ಲಿರುವ ಎಲ್ಲರೂ ಲಕ್ಷ್ಮೀ ದೇವಿಗೆ ನಮಸ್ಕರಿಸಬೇಕು. ಮನೆಯ ಗೃಹಲಕ್ಷ್ಮಿ ಮನೆಯವರಿಗೆಲ್ಲ ಪ್ರಸಾದವನ್ನು ಹಂಚಬೇಕು .

ಪ್ರಯೋಜನಗಳು.

 

 

ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಇದ್ದರೂ ದೂರವಾಗಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ನಿಮ್ಮ ಮನೆಯ ಸುತ್ತ ಒಂದು ರಕ್ಷಾ ಕವಚ ಸದಾ ಇರುತ್ತದೆ .ಕುಟುಂಬ ಸದಸ್ಯರ ಆರೋಗ್ಯ ಮತ್ತು ಸಂತೋಷವನ್ನು ಉತ್ತೇಜಿಸುತ್ತದೆ.

ಮಕ್ಕಳ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಸಮೃದ್ಧಿ ಮತ್ತು ಸಂಪತ್ತಿನೊಂದಿಗೆ ಮನೆ ತುಂಬುತ್ತದೆ. ಮನೆಯ ಮೇಲೆ ದುಷ್ಟ ಕಣ್ಣಿನ ದುಷ್ಪರಿಣಾಮಗಳನ್ನು ತಡೆಯುತ್ತದೆ ಮತ್ತು ನಷ್ಟಗಳನ್ನು ಸಹ ತಡೆಯುತ್ತದೆ .

ಮನೆಯಲ್ಲಿ ಸೌಹಾರ್ದತೆಯನ್ನು ಉತ್ತೇಜಿಸುತ್ತದೆ ಮತ್ತು ಕುಟುಂಬ ಸದಸ್ಯರ ನಡುವಿನ ಸಂಬಂಧವನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಸಂಪಾದನೆ ವೃದ್ಧಿಯಾಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top