ಭವಿಷ್ಯ

ಕೇತು ಮತ್ತು ಬುಧನ ನಕ್ಷತ್ರಗಳಲ್ಲಿ ಹುಟ್ಟಿದವರು ಈ ವಿಷಯಗಳನ್ನ ತಪ್ಪದೆ ತಿಳ್ಕೊಳ್ಳಿ, ಆದರಲ್ಲೂ ಮೂಲಾ ಮತ್ತು ಆಶ್ಲೇಷ ನಕ್ಷತ್ರದಲ್ಲಿ ಹುಟ್ಟಿದ್ರೆ ಹೆಚ್ಚಿನ ದೋಷ ಕಾಡುತ್ತೆ ಯಾಕೆ ಹೀಗೆ ಗೊತ್ತಾ

ಕೇತು ಮತ್ತು ಬುಧನ ನಕ್ಷತ್ರಗಳ ಬಗ್ಗೆ ನಿಮಗೆಷ್ಟು ಗೊತ್ತು ? ಆದರಲ್ಲೂ  ಮೂಲಾ ಮತ್ತು ಆಶ್ಲೇಷ ನಕ್ಷತ್ರದಲ್ಲಿ ಹುಟ್ಟಿದರೆ ಹೆಚ್ಚಿನ ದೋಷ ಕಾಡುತ್ತವೆ. ಯಾಕೆ ಹೀಗೆ ?ಎಂದು ತಿಳಿದುಕೊಳ್ಳಿ .

 

ಒಟ್ಟಾಗಿ 27 ನಕ್ಷತ್ರಗಳು ಇವೆ. ಅದರಲ್ಲಿ ಆರು ನಕ್ಷತ್ರಗಳನ್ನು ಗಂಡ ಮೂಲ ನಕ್ಷತ್ರ ಎಂದು ಕರೆಯುತ್ತಾರೆ. ಅವು ಯಾವುವು ? ಎಂದರೆ ಅಶ್ವಿನಿ, ಮಘ ಮತ್ತು ಮೂಲ ನಕ್ಷತ್ರ ( ಕೇತುವಿನ ನಕ್ಷತ್ರಗಳು ) ಆಶ್ಲೇಷ, ಜ್ಯೇಷ್ಠ ಮತ್ತು ರೇವತಿ ನಕ್ಷತ್ರ (ಬುಧನ ನಕ್ಷತ್ರಗಳು  ). ಈ ನಕ್ಷತ್ರಗಳು ಕೇತು ಮತ್ತು ಬುಧನ ನಕ್ಷತ್ರಗಳು . ಈ ನಕ್ಷತ್ರಗಳು ಯಾವಾಗಲೂ ಗಂಡಾಂತರ ತರುತ್ತವೆ ಎಂದು ಆಗಿನಿಂದ ಹೇಳಿದ್ದಾರೆ. ಅದರಲ್ಲೂ ಕೂಡ ಅಶ್ವಿನಿ, ಮಗ ,ಮೂಲ ನಕ್ಷತ್ರದಲ್ಲಿ ಮೂಲ ನಕ್ಷತ್ರ ಹೆಚ್ಚು ಗಂಡಾಂತರವನ್ನು ತರುತ್ತದೆ. ಯಾಕೆಂದರೆ ಇದು ಧನಸ್ಸು ರಾಶಿಗೆ ಬರುತ್ತದೆ. ಮೂಲಾ ನಕ್ಷತ್ರದ ನಾಲ್ಕು ಪಾದಗಳು ಕೂಡ ಧನಸ್ಸು ರಾಶಿಗೆ ಸೇರಿಕೊಳ್ಳುತ್ತವೆ.

 

 

ಕೇತುವಿನ ನಕ್ಷತ್ರಗಳು ಮತ್ತು ಈ  7,16,25  ನೇ ತಾರೀಖಿನಲ್ಲಿ  ಹುಟ್ಟಿದರೆ . ಆ ಸಂಖ್ಯೆಯೂ ಕೂಡ ಕೇತುವನ್ನು ಪ್ರತಿನಿಧಿಸುತ್ತದೆ.ಈ ತಾರೀಖಿನಲ್ಲಿ ಹುಟ್ಟಿದವರ ಮದುವೆ ಜೀವನದಲ್ಲಿ  ವೈವಾಹಿಕ ಸಮಸ್ಯೆಗಳು, ಹೆಚ್ಚಾಗಿ ದಾಂಪತ್ಯ ಜೀವನದಲ್ಲಿ ಕಾಡುತ್ತವೆ. ಕೋರ್ಟು ಕಚೇರಿಗಳನ್ನು ಅಲೆಯಬೇಕಾಗುತ್ತದೆ ಮತ್ತು ವಿವಾಹ ವಿಚ್ಛೇದನ ಕೂಡ ನಡೆಯುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತದೆ .ಏಳು ಎಂದರೆ ಬೀಳು ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಅದೇ ರೀತಿ ಏಳನೇ ತಾರೀಖು ಮತ್ತು ಕೇತು ಗ್ರಹದ ನಕ್ಷತ್ರಗಳ ಮೇಲೂ ಇದೇ ರೀತಿಯ ಪ್ರಭಾವವನ್ನು ತೋರಿಸುತ್ತದೆ .

 

 

ಕೆಲವರು ಮೂಲ ನಕ್ಷತ್ರ ಎಂದ ತಕ್ಷಣ ಈ ಮದುವೆ ಬೇಡ ಎಂದು ಹೇಳುತ್ತಾರೆ. ಆದರೆ ಮೂಲ ನಕ್ಷತ್ರದ ಎಲ್ಲಾ ನಾಲ್ಕು ಪಾದಗಳಿಗೂ ಈ ದೋಷ ಇರುವುದಿಲ್ಲ .ಸರಸ್ವತಿ ದೇವಿ , ರಾವಣ ಮತ್ತು ಆಂಜನೇಯನ ನಕ್ಷತ್ರವು ಕೂಡಾ ಮೂಲ ನಕ್ಷತ್ರವೇ ಆಗಿದೆ. ಮೂಲ ನಕ್ಷತ್ರದಲ್ಲಿ ಹುಟ್ಟಿದ ತಕ್ಷಣ ದೋಷ ಬರುವುದಿಲ್ಲ. ಆದರೆ ಜಾತಕದಲ್ಲಿ ಗ್ರಹ ಗತಿಗಳು ಸರಿ ಇಲ್ಲದೇ ಹೋದರೆ ದೋಷಗಳು ಗಂಡಾಂತರಗಳು ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ .

ಕೂಡು ಕುಟುಂಬದಲ್ಲಿ ಒಟ್ಟಾಗಿ ಇದ್ದಾಗ ಮಾತ್ರ ನಕ್ಷತ್ರದ ದೋಷಗಳು ಹೆಚ್ಚಾಗಿ ಕಾಡುತ್ತವೆ . ಆದರೆ ಕೇವಲ ಹೆಂಡತಿ ,ಗಂಡ, ಮಕ್ಕಳು ಇರುವ ಸಂಸಾರದಲ್ಲಿ ಹೆಚ್ಚಾಗಿ ದೋಷಗಳು ಕಾಣಿಸಿಕೊಳ್ಳುವುದಿಲ್ಲ. ಮೂಲ ನಕ್ಷತ್ರದ 3 ಮತ್ತು 4 ನೇ ಪಾದಗಳು ಸ್ವಲ್ಪ ದೋಷಕರ ಎಂದು ಜ್ಯೋತಿಷ್ಯದ ಪ್ರಕಾರ ಹೇಳುತ್ತಾರೆ. ಜಾತಕದಲ್ಲಿ ಮೊದಲು ನೋಡಬೇಕು 7 ಮನೆಯ ಸ್ಥಾನ ಕೆಟ್ಟಿದೆಯೇ ? ಪಾಪ ಗ್ರಹಗಳು ಇವೆಯೇ  ಎಂದು ಮೊದಲು ನೋಡಬೇಕು .

 

 

ಮೂಲ ನಕ್ಷತ್ರದವರನ್ನು ಮದುವೆ ಮಾಡಿಕೊಂಡರೆ, ಮಾವನಿಗೆ ಗಂಡಾಂತರ. ಆಶ್ಲೇಷ ನಕ್ಷತ್ರದವರನ್ನು ಮದುವೆ ಮಾಡಿಕೊಂಡರೆ ಅತ್ತೆಗೆ ಗಂಡಾಂತರ ಎಂದು ಹೇಳುತ್ತಾರೆ . ಹೀಗೆ ಹಿಂದಿನ ಕಾಲದಿಂದಲೂ ಸಹ ಹೇಳುತ್ತಾ ಬಂದಿದ್ದಾರೆ ಆದರೂ ಸಹ ದೋಷ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ತೊಂದರೆ ಕಾಡುವುದಿಲ್ಲ  . ಮೂಲ ನಕ್ಷತ್ರ ಕೇತುವಿನ ನಕ್ಷತ್ರವಾಗಿರುವುದರಿಂದ ಇವರು ಸ್ವಲ್ಪ ಸೋಮಾರಿಗಳಾಗಿರುತ್ತಾರೆ ಹಾಗೂ ಇವರ ಮದುವೆಯ ಜೀವನ ಅಥವಾ ಮಾಂಗಲ್ಯಕ್ಕೆ ಸ್ವಲ್ಪ ತಡವಾಗುತ್ತದೆ. ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತವೆ.

 

 

ಇನ್ನೂ ಏಳನೆಯ ಸಂಖ್ಯೆ ಕೇತು ಆಗಿರುವುದರಿಂದ, ಇವರಿಗೆ ಸ್ವಲ್ಪ ಆಧ್ಯಾತ್ಮಿಕದ ಕಡೆ ಒಲವು ಮತ್ತು ಮನಸ್ಸು ಹೆಚ್ಚಾಗಿ ಸೆಳೆಯುತ್ತದೆ. ಆದ್ದರಿಂದ ಇವರು ಸಂಸಾರ ಜೀವನಕ್ಕೆ ಅಷ್ಟೊಂದು ಪ್ರಾಮುಖ್ಯತೆಯನ್ನು ಕೊಡುವುದಿಲ್ಲ. ಆದ್ದರಿಂದ ಈ ಮೂಲ, ಮಘ, ಅಶ್ವಿನಿ ನಕ್ಷತ್ರಗಳು ಕೇತುವಿನ ನಕ್ಷತ್ರಗಳಾಗಿದ್ದು ತುಂಬಾ ದೊಡ್ಡ ಹುದ್ದೆಯನ್ನು ಅಲಂಕರಿಸಿರುತ್ತಾರೆ .ಆದರೆ ಇವರ ವೈವಾಹಿಕ ಜೀವನ ಅಷ್ಟು ಚೆನ್ನಾಗಿ ಇರುವುದಿಲ್ಲ .

 

 

ಆಧ್ಯಾತ್ಮಿಕದಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ . ಆದರೆ ಇವರು ಸಂಸಾರ ಜೀವನದಲ್ಲಿ ಹಿಂದುಳಿದು ಬಿಡುತ್ತಾರೆ .ಇನ್ನೂ ಕೆಲವರು ಮದುವೆಯಾಗದೆಯೇ ಉಳಿದುಬಿಡುತ್ತಾರೆ ,ಇನ್ನೂ ಕೆಲವರು ಸನ್ಯಾಸಿಯಾಗುತ್ತಾರೆ. ಆಶ್ಲೇಷ ನಕ್ಷತ್ರ ಬುಧನ ನಕ್ಷತ್ರ ವಾಗಿರುವುದರಿಂದ ಇವರಿಗೆ ಬುದ್ಧಿ ಜಾಸ್ತಿ ಮತ್ತು ಆತೀ ಹೆಚ್ಚು  ಬುದ್ಧಿವಂತರು ಕೂಡ ಆಗಿರುತ್ತಾರೆ.ಇವರು ಹೆಚ್ಚು ವಿದ್ಯಾವಂತರಾಗಿದ್ದು ತುಂಬಾ ದೊಡ್ಡ ಹುದ್ದೆಯನ್ನು  ಅಲಂಕರಿಸಿರುತ್ತಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top