fbpx
ವಿಶೇಷ

ಭಾರತದ 10 ರೂಪಾಯಿ ಟೀ ತಗೊಂಡೋಗಿ ಅಮೆರಿಕಾದಲ್ಲಿ 227 ಕೋಟಿ ಸಂಪಾದನೆ ಮಾಡಿದ ಈ ಕಿಲಾಡಿ ಯುವತಿಯ ಸೀಕ್ರೆಟ್  ಏನು ಗೊತ್ತಾ

ಭಾರತದ ಟೀಯನ್ನು ಅಮೆರಿಕಾದಲ್ಲಿ ಮಾರಿ  227 ಕೋಟಿ ಹಣವನ್ನು ಸಂಪಾದಿಸಿರುವ  ಈ ಯುವತಿಯ ಸೀಕ್ರೆಟ್  ಏನು ಗೊತ್ತಾ ?

 

ತುಂಬಾ ತಲೆ ಕೆಟ್ಟಾಗ ಆ್ಯಕ್ಟಿವ್ ಇಲ್ಲದೇ ಹೋದರೆ, ತಲೆನೋವು ಬಂದಾಗ ಬಿಸಿಬಿಸಿ ಘಮ ಎನ್ನುವ ಶುಂಠಿ ಟೀ  ಒಂದು ಕುಡಿದರೆ ತುಂಬಾ ಆರಾಮ ಅನ್ನಿಸುತ್ತದೆ ಅಲ್ವಾ ?  ಅಂತಹ ಟೀಗೆ  ಪ್ರತಿಯೊಬ್ಬರು ಫಿದಾ ಆಗಲೇಬೇಕು. ಶುಂಠಿ ಟೀ ಕುಡಿಯದೇ ಇರುವವರು  ಇರಲ್ಲ. ಅದನ್ನು ತುಂಬಾ ಮಂದಿ ಇಷ್ಟಪಟ್ಟು ಕುಡಿತಾರೆ.

 

 

 

ಇನ್ನು ಈ ಟೀ ಎಲ್ಲರಿಗೂ ಇಷ್ಟ ಆದರೆ ನಾವು ತಯಾರಿಸುವ ಟೀ ಗೆ ಅಮೆರಿಕ ಮಹಿಳೆ ಕೂಡ ಫಿದಾ ಆದರೂ,  ಆ ಟೀಯನ್ನು ತನ್ನ ಸ್ವದೇಶದಲ್ಲಿ ತಾನು ವಾಸಿಸುತ್ತಿರುವ ಪ್ರದೇಶದಲ್ಲಿ ತಯಾರಿಸಿ ಮಾರಿ ಕೋಟ್ಯಂತರ ರೂಪಾಯಿ ಗಳಿಸಿದರು .

ಆಕೆ ಸಮಾಜ ಸೇವಕಿಯಾದ ಕಾರಣ ತಾನು ಸಂಪಾದಿಸಿದ ಹಣದಲ್ಲಿ ಬಹಳಷ್ಟನ್ನು ದಾನವಾಗಿ ನೀಡಿದರು .ಅದೂ ಸಹ ನಮ್ಮ ಭಾರತದಲ್ಲೇ  ಇರುವ ಬಡವರಿಗಾಗಿ. ಆಕೆ ಒಂದು ಟ್ರಸ್ಟ್  ತೆರೆದು ಟೀ ಮಾಡಿ  ಸಂಪಾದಿಸಿದ ಹಣದಲ್ಲಿ ಇಲ್ಲಿನ ಬಡವರಿಗೆ ಸಹಾಯ ಮಾಡುತ್ತಿದ್ದಾರೆ.

ಆಕೆಯ ಹೆಸರು ಬ್ರೂಕ್ . ಅಮೆರಿಕದಲ್ಲಿನ ಕೊಲರಾಡೊ ರಾಜ್ಯದಲ್ಲಿ  ಇರುತ್ತಾಳೆ. ಆಕೆ ಮಹಾರಾಷ್ಟ್ರದಲ್ಲಿ ಆರಂಭವಾದ “ಸ್ವಾಧ್ಯಾಯ್ ಪರಿವಾರ” ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ಭಾರತಕ್ಕೆ ಬಂದಿದ್ದಳು. ಆಕೆ ಸ್ವತಃ ಸಾಮಾಜಿಕ ಕಾರ್ಯಕರ್ತೆ. ಅನೇಕ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸ್ವಯಂ ಸೇವಕಿಯಾಗಿ ಸೇವೆ ಮಾಡುತ್ತಿದ್ದಳು.

 

 

ಈ ರೀತಿ ಭಾರತಕ್ಕೆ ಬಂದ ಈಕೆಗೆ ನಮ್ಮ ಶುಂಠಿ ಟೀ ತುಂಬಾನೇ ಇಷ್ಟವಾಯಿತು. ಇದರಿಂದ ತನ್ನ ದೇಶಕ್ಕೆ ಹೋದ ಬಳಿಕ ತಾನು ಇರುವ ಪ್ರದೇಶದಲ್ಲಿ ಶುಂಠಿ ಟೀ ತಯಾರಿಸಿ ಮಾರಲು ಆರಂಭಿಸಿದಳು. ಈ ರೀತಿ ಬ್ರೂಕ್ ಟೀ ತಯಾರಿಸಿದ್ದು ಅಲ್ಲಿನವರಿಗೆ ತುಂಬಾ ಇಷ್ಟವಾಯಿತು. ಇನ್ನು ಬ್ರೂಕ್  ವ್ಯಾಪಾರ ಸಹ ಚೆನ್ನಾಗಿ ಅಗುತಿತ್ತು.

ಈ ರೀತಿ ಆಕೆಯ ಟೀ ಮಾರುವ ಮೂವತ್ತೈದು ಮಿಲಿಯನ್ ಅಮೆರಿಕನ್ ಡಾಲರ್ ಗಳು , ಅಂದರೆ ಸುಮಾರು 227 ಕೋಟಿ ರೂಪಾಯಿ ಸಂಪಾದಿಸಿದ್ದಳು. ಅಷ್ಟೆಲ್ಲ ಸಂಪಾದನೆಯನ್ನು ಆಕೆ ತನ್ನಲ್ಲೇ ಇಟ್ಟುಕೊಳ್ಳಲಿಲ್ಲ. ತಾನು ಸಮಾಜ ಸೇವೆ ಮಾಡುತ್ತಿದ್ದ ಕಾರಣ “give inspire take action” ಹೆಸರಿನಲ್ಲಿ ಒಂದು ಟ್ರಸ್ಟ್ ಆರಂಭಿಸುವುದರ ಮೂಲಕ ಭಾರತದಲ್ಲಿರುವ ಬಡವರಿಗೆ ಸಹಾಯ ಮಾಡುತ್ತಿದ್ದಾರೆ.

 

 

ಇದುವರೆಗೆ ಬ್ರೂಕ್ ಆ ರೀತಿ ತಾನು ಸಂಪಾದಿಸಿದ್ದರಲ್ಲಿ ಸುಮಾರು ಐದು ಲಕ್ಷ ಡಾಲರ್ ಗಳವರೆಗೂ ದಾನ ಮಾಡಿದ್ದಾರೆ. ಗೀತಾ ಸಂಸ್ಥೆಯ ಮೂಲಕ ಆಕೆ ತನ್ನ ಸಂಪಾದನೆಯನ್ನು ಭಾರತದ ಬಡವರಿಗಾಗಿ ದಾನವಾಗಿ ನೀಡಿದ್ದಾರೆ. ತಾನು ಭಾರತದಿಂದ ಬಹಳಷ್ಟು  ಕಲಿತಿದ್ದೇನೆಂದು ಹಾಗಾಗಿ ಆ ಜ್ಞಾನದಿಂದ ಬಂದ ಹಣವನ್ನು ಮತ್ತೆ ಅವರ ಒಳಿತಿಗಾಗಿ ಬಳಸುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಅವರು ಈ ರೀತಿ ಮಾಡಿದಕ್ಕಾಗಿ ನಾವೆಲ್ಲಾ ಅಭಿನಂದಿಸಲೇಬೇಕು ಅಲ್ಲವೇ ? .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top