ದೇವರು

ಮದುವೆಯಾಗಿ ಇಷ್ಟು ವರ್ಷ ಆದ್ರು ಮಕ್ಕಳಿಲ್ಲ ಅಂತ ಕೊರಗುತ್ತಿರೋರು ಈ ದೇವಸ್ಥಾನಕ್ಕೆ ಹೋಗಿ ತೊಟ್ಟಿಲು ಕೊಟ್ಟು ಬನ್ನಿ ಗಂಡ ಹೆಂಡತಿ ಮಧ್ಯೆ ಇರೋ ಎಲ್ಲ ಶಯನ ದೋಷ ದೂರ ಆಗುತ್ತೆ

ದಕ್ಷಿಣ ಅಯೋದ್ಯೆ ಎಂದೇ ಖ್ಯಾತಿ ಪಡೆದಿರುವ ಈ ದೇವಾಲಯ ಎಲ್ಲಿದೆ ಎಂದು ನಿಮಗೆ ಗೊತ್ತೇ ? ನಿಮಗೆ ಸಂತಾನ  ಭಾಗ್ಯ ಇಲ್ಲದೆ ಹೋದರೆ ಒಂದು ಬಾರಿ ಈ ನವನೀತ ಕೃಷ್ಣನ ದರ್ಶನ ಮಾಡಿ ಬನ್ನಿ

 

 

ಮದುವೆಯಾದ ನಂತರ ಒಂದು ಪುಟ್ಟ ಮಗುವು ಮನೆಯೆಲ್ಲ ಓಡಾಡಿಕೊಂಡು ಇರಬೇಕು ಎಂದು ಎಲ್ಲಾ ದಂಪತಿಗಳಿಗೂ ಆಸೆ ಇರುತ್ತದೆ. ಆದರೆ ಕೆಲವೊಮ್ಮೆ ಕೆಲವರಿಗೆ ಮಕ್ಕಳು ಹುಟ್ಟುವುದು ವಿಳಂಬವಾದಾಗ ಆ ದಂಪತಿಗಳು ಅನೇಕ ದೇವಾಲಯಕ್ಕೆ ಹರಕೆ ಹೊರುವುದು ಸಾಮಾನ್ಯ. ಆಸ್ಪತ್ರೆಗಳಿಗೆ ಎಂದು ಓಡಾಡಿ ತುಂಬಾ ಹಣವನ್ನು ವ್ಯಯಿಸುತ್ತಾರೆ. ಈ ಕಷ್ಟಕ್ಕೆಲ್ಲ ಪರಿಹಾರ ಒದಗಿಸುವ ಒಂದು ಮಹಿಮಾನ್ವಿತವಾದ ದೇವಾಲಯವಿದೆ. ಈ ದೇವಾಲಯಕ್ಕೆ ಭೇಟಿ ನೀಡಿ ಭಕ್ತಿಯಿಂದ ಪ್ರಾರ್ಥಿಸಿದರೆ ಅಥವಾ ಹರಕೆಯ ರೂಪದಲ್ಲಿ ಕಾಣಿಕೆಯನ್ನು ನೀಡಿದರೆ ಶೀಘ್ರದಲ್ಲಿ ದೇವರ ಕೃಪೆ ಉಂಟಾಗಿ ದಂಪತಿಗಳಿಗೆ ಸಂತಾನ ಭಾಗ್ಯ ಲಭಿಸುತ್ತದೆ ಎಂಬುದು ಭಕ್ತರ ಅಚಲವಾದ ನಂಬಿಕೆಯಾಗಿದೆ.

ಇಂತಹ ಅಪಾರ ನಂಬಿಕೆ ಇರುವ ದೇವಾಲಯದ ಬಗ್ಗೆ ಇಂದು ನಾವು ತಿಳಿಯೋಣ,

ಹಾಗಾದರೆ ಆ ದೇವಾಲಯ ಯಾವುದು ?

 

ಇಂದೊಂದು  ಕೃಷ್ಣನ ದೇವಾಲಯವಾಗಿದ್ದು . ಇಲ್ಲಿ ಕೃಷ್ಣನು ಅಂಬೆಗಾಲಿಡುತ್ತಿರುವ ನವನೀತ ಕೃಷ್ಣನಾಗಿ ಪ್ರಸಿದ್ಧನಾಗಿದ್ದಾನೆ. ಮಳ್ಳೂರು ಶ್ರೀ ಕೃಷ್ಣ ದೇವಾಲಯ ಎಂದೇ ಕರೆಯಲಾಗುತ್ತದೆ. ಬೆಂಗಳೂರಿನಿಂದ ಸಮೀಪದ ಚೆನ್ನಪಟ್ಟಣ ತಾಲೂಕಿನಲ್ಲಿ  ನೆಲೆಯಾಗಿದೆ. ಚಿಕ್ಕದಾಗಲಿ ,ದೊಡ್ಡದಾಗಲಿ  ತೊಟ್ಟಿಲನ್ನು  ಕಾಣಿಕೆಯಾಗಿ ದಂಪತಿಗಳು ಶ್ರದ್ಧೆ , ಭಕ್ತಿಯಿಂದ ಅರ್ಪಿಸಿದರೆ ಶ್ರೀಕೃಷ್ಣನ ಪ್ರಾರ್ಥನೆ ಮಾಡಿಕೊಂಡರೆ ಶೀಘ್ರದಲ್ಲಿಯೇ  ಸಂತಾನ ಭಾಗ್ಯ ನೀಡುತ್ತಾನೆ ಇಲ್ಲಿನ ಮುದ್ದು ಕೃಷ್ಣ .

 

 

ಹೀಗೆ ಆ ಸ್ವಾಮಿಯನ್ನು ಬೇಡಿಕೊಂಡು ಓಳಿತನ್ನು ಕಂಡವರು ಅನೇಕ ಮಂದಿ ಪ್ರತ್ಯಕ್ಷ ಸಾಕ್ಷಿ ಇದ್ದಾರೆ ಎಂದು ಹೇಳಬಹುದು. ಈ ಅದ್ಭುತವಾದ ಮಳ್ಳೂರು  ದೇವಾಲಯವನ್ನು ಚೋಳರ ಕಾಲದಲ್ಲಿ ನಿರ್ಮಾಣ ಮಾಡಲಾದ ದೇವಾಲಯ ಇದಾಗಿದೆ. ಈ ದೇವಾಲಯಕ್ಕೆ ಸಂಬಂಧಿಸಿದಂತೆ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಇಲ್ಲಿ ಹಲವಾರು ಪವಾಡಗಳು ನಡೆದಿವೆ. ಇಲ್ಲಿನ ಶ್ರೀಕೃಷ್ಣನನ್ನು ಭಕ್ತರು ನವನೀತ ಕೃಷ್ಣ ಎಂದೇ  ಕರೆಯುತ್ತಾರೆ.

ಇಲ್ಲಿ ಸ್ವಾಮಿಯು  ಒಮ್ಮೆ  ಅಂಬೆಗಾಲು ಇಡುತ್ತಿರುವ ಬಂಗಿಯಲ್ಲಿ ಇರುವುದರಿಂದ ಕೃಷ್ಣನ ವಿಗ್ರಹವು ಅತ್ಯಂತ ಆಕರ್ಷಣೀಯವಾಗಿದೆ. ಪುತ್ರ ದೋಷ ಅಥವಾ ಶಯನ ದೋಷ ಇರುವ ದಂಪತಿಗಳು ಇಲ್ಲಿನ ಶ್ರೀಕೃಷ್ಣನನ್ನು ಪ್ರಾರ್ಥಿಸಿದರೆ ಆ ದೋಷಗಳು ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ.

 

 

ಇಲ್ಲಿ ಶಯನ ದೋಷವೆಂದರೆ ಸತಿಪತಿಗಳ ನಡುವೆ ಕಲಹವಿದ್ದು , ಇಬ್ಬರು ದೈಹಿಕವಾಗಿ ಸೇರದೆ ಇರುವುದೆ ಆಗಿದೆ. ಈ ದೋಷವು ಸಂತಾನ ಹೀನತೆಗೂ  ಕಾರಣವಾಗುವುದರಿಂದ ಈ ದೋಷವನ್ನು ಹೋಗಲಾಡಿಸುವುದು ಪ್ರಮುಖವಾಗುತ್ತದೆ.

ಇದೊಂದು ವೈಷ್ಣವ ಸಂಪ್ರದಾಯ ದೇವಾಲಯವಾಗಿದ್ದರೂ, ಕೂಡ ಕೃಷ್ಣನನ್ನು ಹೊರತುಪಡಿಸಿದರೆ ಇನ್ನು ಇತರೆ ದೇವತಾ ಮೂರ್ತಿಗಳನ್ನು  ಕೂಡ ಇಲ್ಲಿ ದರ್ಶನ ಭಾಗ್ಯ  ಪಡೆಯಬಹುದು. ಆವುಗಳೆಂದರೆ ಅರವಿಂದ ವಲ್ಲಿ ಮಾತೆ, ರಾಮಾನುಜ, ಆಂಜನೇಯ, ನಾಗರಾಜ ಆಳ್ವಾರ್, ವೇದಾಂತ ದೇಶಿಕರು, ಹೀಗೆ  ಹಲವಾರು ದೇವರುಗಳ ದರ್ಶನವನ್ನು ಪಡೆಯಬಹುದು.

 

 

ದೇವಾಲಯದ ಸ್ಥಳ ಪುರಾಣ.

 

ಸ್ಥಳ ಪುರಾಣದ ಪ್ರಕಾರ ಇಲ್ಲಿ ಶ್ರೀ ರಾಮನು ಲಂಕೆಗೆ ತೆರಳುವ ಸಂದರ್ಭದಲ್ಲಿ ರಾಮನು ಇಲ್ಲಿಯೇ ತಂಗಿದ್ದನಂತೆ.ಹಾಗೂ ಇಲ್ಲಿನ ಪ್ರಕೃತಿಯ ಮೈ ಸಿರಿಗೆ ಮಾರು ಹೋಗಿದ್ದರಂತೆ. ಹಾಗೆಯೇ ತನ್ನ ಅಯೋದ್ಯೆ  ನಗರದಂತೆಯೇ ಇದನ್ನು ಕೂಡ ಪ್ರೀತಿಸುತ್ತಿದ್ದರಂತೆ. ಆ ಕಾರಣಕ್ಕಾಗಿಯೇ ಇದನ್ನು “ದಕ್ಷಿಣ ಆಯೋದ್ಯೆ”  ಎಂದು ಕೂಡ ಕರೆಯುತ್ತಾರೆ.

ಈ ಕ್ಷೇತ್ರಕ್ಕೆ ಸಾಕಷ್ಟು ಪ್ರಾಚೀನ ಇತಿಹಾಸವಿದೆ. ಒಂದು ಅದ್ಭುತವಾದ ಹಿನ್ನೆಲೆಯ ಪ್ರಕಾರ ಒಂದೊಮ್ಮೆ, ಇಲ್ಲಿ ನಾಲ್ಕು ವೇದಗಳನ್ನು ಓದಿ ಪಾಂಡಿತ್ಯ ಪಡೆದವರು ಮಾತ್ರ ಇಲ್ಲಿ ನೆಲೆಸಿದ್ದರಂತೆ. ಇದಕ್ಕೆ ಚತುರ್ವೇದ ಮಂಗಳಾಪುರ ಎಂದು ಹೆಸರು ಕೂಡ ಇತ್ತಂತೆ.ಆದೇ ನಂಬಿಕೆಯಂತೆ ಇಂದಿಗೂ ಕಪಿಲಾ  ಹಾಗೂ ಕಣ್ವ  ಮಹರ್ಷಿಗಳು ಈ ದೇವಾಲಯದಲ್ಲಿಯೇ  ನೆಲೆಸಿದ್ದಾರೆ ಎಂದು ಪ್ರತೀತಿ ಕೂಡ ಇದೆ.

 

 

 

ಕೆಲವರ ಪ್ರಕಾರ ರಾತ್ರಿ ದೇವಾಲಯದ ಅರ್ಚಕನು ಕೆಲಸ ಕಾರ್ಯಗಳನ್ನೆಲ್ಲ ಮುಗಿದ ನಂತರ ಬಾಗಿಲು ಹಾಕಿರುವ ಸಮಯದಲ್ಲಿ ಗಂಟೆಗಳ ನಾದ ಗರ್ಭಗುಡಿಯ ಬಾಗಿಲು ತೆರೆಯುವ  ಸದ್ದು ಕೇಳಿ ಬರುತ್ತಿತ್ತಂತೆ . ಈ ರೀತಿಯಾಗಿ ಮುಳ್ಳೂರು ವಾಸಿಗರಿಗೆ ಈ ದೇವಾಲಯವು ಸಾಕಷ್ಟು ಪ್ರಭಾವ ಬೀರಿದ್ದು, ಅವರೆಲ್ಲ ಶ್ರೀ ಕೃಷ್ಣನ ದಿವ್ಯ ಉಪಸ್ಥಿತಿಯಿಂದ ಆನಂದ ಭರಿತರಾಗಿದ್ದಾರೆ.

 

ಈ  ದೇವಾಲಯಕ್ಕೆ ಒಂದು ರೋಚಕವಾದ ಕಥೆ ಕೂಡ ಇದೆ.

 

ಮಳ್ಳೂರನ್ನು ದೊಡ್ಡ ಮುಳ್ಳೂರು ಎಂದು ಕೂಡ ಕರೆಯುತ್ತಾರೆ. ಈ ಸ್ಥಳವು ಚನ್ನಪಟ್ಟಣದಿಂದ ಕೇವಲ ಕೆಲವೇ  ಮೀಟರಗಳಷ್ಟು  ದೂರದಲ್ಲಿದೆ. ಬೆಂಗಳೂರಿನಿಂದ ಇದು ಒಟ್ಟಾರೆಯಾಗಿ  60 ಕಿಲೋ ಮೀಟರ್ ದೂರದಲ್ಲಿದೆ. ಹಾಗೆಯೇ ತಲುಪಲು  ಕೂಡ ಸುಲಭವಾದ ಮಾರ್ಗ ಕೂಡ ಇದೆ.

ಈ ದೇವಾಲಯವು ಭಕ್ತರಿಗೆಂದು ಪ್ರತಿದಿನ ಬೆಳ್ಳಗ್ಗೆ  8 ಗಂಟೆಯಿಂದ ಮಧ್ಯಾಹ್ನ 12.10 ರ ವರೆಗೆ  ಹಾಗೂ ಸಂಜೆ 5.30 ರಿಂದ ರಾತ್ರಿ 8.30 ರವರೆಗೆ ತೆರೆದಿರುತ್ತಾರೆ. ಕೃಷ್ಣ ಜಯಂತಿ, ವೈಕುಂಠ ಏಕಾದಶಿ ಮುಂತಾದ ಉತ್ಸವಗಳನ್ನು ಬಲು ಅದ್ಧೂರಿಯಾಗಿ ಇಲ್ಲಿ ಆಚರಿಸಲಾಗುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top