ಜೀವನ ಕ್ರಮ

ಮಿಡ್ಲ್ ಕ್ಲಾಸ್ ನಲ್ಲಿ ಹುಟ್ಟಿರೋರು ಮಾತ್ರ ಅನುಭಸೋಕೆ ಆಗೋ 14 ವಿಷಯಗಳು ಓದಿ ನಿಮ್ಮನ್ನ ನೀವೇ ಕಂಡ್ಕೊಳ್ಳಿ

ಆಕಾಡೆ ಆರಕ್ಕೂ ಹೋಗ್ದೆ ಈ ಕಡೆ ಮೂರಕ್ಕೂ ಇಳಿದೆ ಮಧ್ಯೆ ಈ ಮಿಡ್ಲ್ ಕ್ಲಾಸ್ ಅನ್ನೋ ಮಾಯಾಜಾಲದಲ್ಲಿರೋ ಮನುಷ್ಯರು ಸಿಕ್ಕಾಕೊಂಡು ಆ ಕಡೆ ಆಕಾಶನು ನೋಡೋಕಾಗ್ದೆ ಇರೋ ದುಡ್ಡಲ್ಲಿ ಎಲ್ಲದುಕ್ಕು ವಂಚಿ ಮಿಕ್ಕಿದ್ರೆ ಅದೇ ಸ್ವರ್ಗ ಅಂದ್ಕೊಬೇಕು ಹೀಗೆ ಮಿಡ್ಲ್ ಕ್ಲಾಸ್ ಜನ ಮಾಡೋ ಕೆಲಸಗಳು ನೋಡಿ

ನಾವು ಗ್ಯಾರಂಟೀ ಕೊಡ್ತೀವಿ ಈ 14 ವಿಷ್ಯದಲ್ಲಿ 7 ಆದ್ರೂ ಮಾಡೇ ಮಾಡಿರ್ತೀರಾ ಓದಿ ಆದ್ಮೇಲೆ ನಿಮ್ ಸ್ಕೋರ್ ಎಷ್ಟು ಅಂತ ಕಾಮೆಂಟ್ ಮಾಡೋಕೆ ಮಾತ್ರ ಮರಿಬೇಡಿ .

 

1 ದಿನಸಿ ಅಂಗಡಿಯಿಂದ ಹಿಡಿದು ತರಕಾರಿ ಗಾಡಿ ಅವನವರೆಗೂ ಚೌಕಾಸಿ ಮಾಡೋದು

 

 

2 ಟೂತ್ ಪೇಸ್ಟ್ ಖಾಲಿ ಆದ್ರೂ ಇನ್ನು ಇದೆ ಅಂತ ಕಟ್ ಮಾಡಿ ಉಳ್ದಿದ್ದು ಬಳಸೋದು

 

 

3 ಗಂಡು ಮಕ್ಕಳ ಹಳೆ ನಿಕ್ಕರ್ ,ಬನೀನು ಮನೆ ವರೆಸೋ, ಧೂಳು ಒಡೆಯೋ ಬಟ್ಟೆ ಆಗೋಗುತ್ತೆ

 

 

4 ಹೋಟೆಲ್ ಗೆನಾದ್ರು ಹೋದ್ರೆ ಅಲ್ಲಿರೋ ಸೋಪ್ ಎಲ್ಲ ಮೆಲ್ಲಗೆ ಎತ್ತಕೊಂಡು ಬ್ಯಾಗ್ ಒಳಗೆ ಹಾಕೊಂಡು ಮನೆಗೆ ತರೋದು

 

 

5 ಬುಕ್ ಗೆ ರಾಪರ್ ಬೇಕಾದ್ರೆ ಹಳೆ ನ್ಯೂಸ್ ಪೇಪರ್ ಇದ್ಯಲ್ಲ ಅದೇ ಸಾಕು

 

 

6 ಕಂಪನಿ ಟ್ಯಾಗ್ , ಏರ್ ಲೈನ್ ಬ್ಯಾಗ್ ಟ್ಯಾಗ್ ಹಾಗೆ ಇರ್ಬೇಕು ಶೋಕಿಗೆ

 

 

7 ಹೋಟೆಲ್ ಊಟ ಬೇಡ ಬಜೆಟ್ ಅಲ್ಲಿ ಬರೋಲ್ಲ ಮನೆಯಿಂದ್ಲೇ ಬಾಕ್ಸ್ ತಂದ್ರೆ ಹೆಂಗೆ

 

 

8 ಫ್ಯಾನ್ ಹಾಕಿದ್ರೆ ಬಿಲ್ ಜಾಸ್ತಿ ಬರುತ್ತೆ ಮನೆ ಮಾಡಿ ಮೇಲೆ ಮಲ್ಕೊಂಡ್ರೆ ಹಾಯಾಗಿರುತ್ತೆ

 

 

9 ಹಾರ್ಲಿಕ್ಸ್ , ಇನ್ನವದಾದ್ರು ಗಾಜು ,ಪ್ಲಾಸ್ಟಿಕ್ ಡಬ್ಬ ಖಾಲಿ ಆದ್ರೆ ಸಿಕ್ರೆ ಮನೆ ಸಾಮಾನು ಹಾಕಿ ಇಡೋಣ ಅನ್ನೋ ಸ್ಕೆಚ್

 

 

10 ಮನೆ ಮಾಡಿ ಮೇಲೆ ಹಪ್ಪಳ ,ಸಂಡಿಗೆ ಮಾಡಿ ಒಣಗಾಕೋದು ಅದೇ ಬೇಸಿಗೆ ಕಾಲದ ಕೆಲಸ

 

 

 

11 ನಿಮ್ ಹಳೆ ಬಟ್ಟೆ ,ಸೈಕಲ್ ,ಬುಕ್ ಎಲ್ಲ ನಿಮ್ ತಮ್ಮ ತಂಗೀರ್ಗೆ ಪಾಪ

 

 

12 ಮನೇಲಿ ಎಲ್ಲ ಪ್ಲಾಸ್ಟಿಕ್ ಕವರ್ ಹಾಕಿಡೊಕೆ ಇನ್ನೊಂದು ದೊಡ್ಡ ಪ್ಲಾಸ್ಟಿಕ್ ಕವರ್

 

13 ಚೆನ್ನಾಗಿರೋ ಜ್ಯೂಸ್ ಗ್ಲಾಸ್ ,ಕಾಫಿ ಗ್ಲಾಸ್ ಬರಿ ಮನೆಗೆ ಬರೋ ಗೆಸ್ಟ್ ಗಳಿಗೆ ಮಾತ್ರ

 

 

14 ಗಿಫ್ಟ್ ರಾಪರ್ ನಾಜೂಕಾಗಿ ತೆಗೆದು ಮಡಚಿ ಎತ್ತಿಡೋದು

 

 

ಇನ್ನು ಎಷ್ಟೊಂದಿದೆ ಇಷ್ಟೆಲ್ಲ ಮಾಡಿದ್ರು ಮನಸಲ್ಲಿ ಒಂದು ನೆಮ್ಮದಿ ಖುಷಿ ಅಂತ ಇರೋದು ಅದೇ ಮಿಡ್ಲ್ ಕ್ಲಾಸ್ ಜೀವನ ನೀವು ಏನ್ ಅಂತೀರಾ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top