ಭವಿಷ್ಯ

ಯಾವ ರಾಶಿಯವರು ಯಾವ ರಾಶಿಯವರನ್ನ ಮದುವೆಯಾದರೆ ಸುಖವಾಗಿರ್ತಾರೆ ಗೊತ್ತಾ?

 ಯಾವ ರಾಶಿಯವರು  ಯಾವ ರಾಶಿಯವರನ್ನ ಮದುವೆಯಾದ್ರೆ ಅನೋನ್ಯವಾಗಿ ಜೀವನ ನಡೆಸುತ್ತಾರೆ ಎಂದು ಶಾಸ್ತ್ರ ಹೇಳುತ್ತದೆ.

ಮದುವೆ ಮಾಡುವ ಮುಂಚೆ  ತಂದೆ,ತಾಯಿಯರು ಮೊದಲು ಜಾತಕ, ನಕ್ಷತ್ರ ಮತ್ತು ರಾಶಿಯನ್ನು ನೋಡುತ್ತಾರೆ.ಕೆಲವು ರಾಶಿಯವರು ಉತ್ತಮ ಜೀವನ ನೆಡೆಸುತ್ತಾರೆಂದು ಅಂತಹ ಕೆಲವು ರಾಶಿ ಜೋಡಿಗಳು ಯಾವುವು ಎಂದು ಇಲ್ಲಿ ನಾವು ವಿವರಣೆಯನ್ನು ನೀಡುದ್ದೇವೆ.

1.ಮೇಷ ಮತ್ತು ಕಟಕ ರಾಶಿ.

ಮೇಷ ರಾಶಿಯವರು ಅತ್ಯಂತ ಶಕ್ತಿಯುಳ್ಳವರು,ದೈರ್ಯವಂತರು ಹಾಗಾಗಿ ಕಟಕ ರಾಶಿಯ ಸಂಗಾತಿಯನ್ನು ಮೆಚ್ಚಿಸುತ್ತದೆ. ಅವರ ನಡುವಿನ ಭಾಂಧವ್ಯವನ್ನು ಹೆಚ್ಚಿಸುತ್ತದೆ. ಕಟಕ ರಾಶಿಯವರು  ಯಶಸ್ಸನ್ನು ಪಡೆಯಲು ಹವಣಿಸುವವರಾಗಿರುತ್ತಾರೆ.ಇವರ ಪ್ರಯತ್ನಗಳು ಮೇಷ ರಾಶಿಯ ಸಂಗಾತಿಯನ್ನು ಮೆಚ್ಚಿಸುವಂತೆ ಮಾಡುತ್ತದೆ.

2.ಮೇಷ ಮತ್ತು ಕುಂಭ ರಾಶಿ.

ಜಾತಕದ ಪ್ರಕಾರ ಇದೊಂದು ಅದ್ಭುತ ಜೋಡಿಯಾಗಿದ್ದು ಇವರಿಬ್ಬರು ಹಾಲು ಜೇನಿನಂತೆ ಸಂಸಾರ ನೆಡೆಸುತ್ತಾರೆ. ಇವರಿಬ್ಬರೂ ಸಹಾಸ ಪ್ರಿಯರು. ಒಟ್ಟೊಟ್ಟಿಗೆ ಎಲ್ಲಾ ಕೆಲಸಕ್ಕೂ ಕೈ ಹಾಕುತ್ತಾರೆ.  ಇಬ್ಬರೂ ಕಲಾತ್ಮಕವಾದ ಆಲೋಚನೆಗಳನ್ನು ಹೊಂದಿರುತ್ತಾರೆ. ಪ್ರೀತಿ, ಗೌರವಗಳನ್ನು ಒಬ್ಬರು ಇನ್ನೊಬ್ಬರಲ್ಲಿ ಕಾಣುತ್ತಾರೆ. ಒಬ್ಬರಿಗೊಬ್ಬರು ವ್ಯಕ್ತಿಗತವಾದ ಸ್ವಾತಂತ್ರತ್ಯವನ್ನು ನೀಡುತ್ತಾರೆ.

3.ಮೇಷ ಮತ್ತು ಮೀನ ರಾಶಿ.

ಈ ಎರಡೂ ರಾಶಿಯವರು ಬಹಳ ಅನ್ಯೂನ್ಯವಾಗಿ ಜೀವನ ನೆಡೆಸಿಕೊಂಡು ಇರುತ್ತಾರೆ. ಒಬ್ಬರನ್ನೊಬ್ಬರು ಅನುಸರಿಸಿಕೊಂಡು ನೆಡೆಯುತ್ತಾರೆ. ಮೇಷ ರಾಶಿಯವರು ಮೀನ ರಾಶಿಯವರ ಸಂಗಾತಿಯ ವಿಚಾರಗಳನ್ನು ಅನುಕರಣೆ ಮಾಡುತ್ತಾರೆ.

4.ಸಿಂಹ ಮತ್ತು ತುಲಾ ರಾಶಿ.

ಈ ಎರಡು ರಾಶಿಯವರು ಬಹಳ ಸಮಾಜಮುಖಿ ಜೀವನವನ್ನು ನೆಡೆಸುತ್ತಿರುತ್ತಾರೆ.ಬಹಳಷ್ಟು ಸ್ನೇಹಿತರು ಮತ್ತು ಸಂಬಂಧಿಕರನ್ನು ಹೊಂದಿರುತ್ತಾರೆ. ಸಿಂಹ ರಾಶಿಯವರು ಬಹಳ ಕೋಪಿಷ್ಟ ಸ್ವಭಾವದವರಾಗಿದ್ದರೂ ಸಹ ತುಲಾ ರಾಶಿಯ ಸಂಗಾತಿ ಎಲ್ಲವನ್ನು ಖುಷಿಯಾಗಿ ನಿಭಾಯಿಸಿಕೊಂಡು ಹೋಗುತ್ತಾರೆ.

5.ಸಿಂಹ ಮತ್ತು ಧನಸ್ಸು ರಾಶಿ.

ಈ ಇಬ್ಬರು ರಾಶಿಯವರು ಸ್ನೇಹಿತರೊಂದಿಗೆ ತಿರುಗಾಡಿಕೊಂಡು ಆರಾಮಾಗಿ ಇರುತ್ತಾರೆ.ಸುಖಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಾರೆ. ಸಿಂಹ ರಾಶಿಯವರ ಸಂಗಾತಿ ಬಹಳ ಮುದ್ದಿನಿಂದ ಸಾಕಲ್ಪಟ್ಟವರು ಮತ್ತು ಸ್ವಲ್ಪ ಕಟು ಸ್ವಭಾವದ ವ್ಯಕ್ತಿಯಾಗಿದ್ದು ಧನಸ್ಸು ರಾಶಿಯವರು ಎಲ್ಲವನ್ನು ಅನುಸರಿಸಿಕೊಂಡು ಹೋಗುತ್ತಾರೆ.

6.ಕಟಕ ಮತ್ತು ವೃಷಭ ರಾಶಿ.

ಕಟಕ ರಾಶಿಯ ಸಂಗಾತಿ ಬಹಳ ಪ್ರಾಮಾಣಿಕರಾಗಿದ್ದು  ವೃಷಭ ರಾಶಿಯ ಸಂಗಾತಿಗೆ ಈ ಗುಣ ಬಹಳ ಇಷ್ಟ ವಾಗುತ್ತದೆ.ವೃಷಭ ರಾಶಿಯವರು ಬಹಳಷ್ಟು ಸಹಾಯ ಮಾಡುವ ಗುಣವನ್ನು ಹೊಂದಿದ್ದು.ಜೀವನದಲ್ಲಿ ಇಬ್ಬರೂ ಸೇರಿ ಮನೆ,ಆಸ್ತಿ,ಪ್ರೀತಿ,ಎಲ್ಲವನ್ನು ಗಳಿಸುತ್ತಾರೆ.

7.ವೃಷಭ ಮತ್ತು ಮಕರ ರಾಶಿ.

ವೃಷಭ ರಾಶಿಯವರಿಗೆ ಮಕರ ರಾಶಿಯವರ ಕೆಲಸ ಮತ್ತು ತಮಾಷೆಯ ಗುಣಗಳು ಇಷ್ಟವಾಗುತ್ತವೆ.ಮಕರ ರಾಶಿಯವರ ಪ್ರಾಮಾಣಿಕತೆಯ ಗುಣ ಮತ್ತು ಒಳ್ಳೆಯ ಮನಸ್ಸು ಇವರಿಗೆ ಇಷ್ಟವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top